ಲಾರ್ಡ್ಸ್(ಲಂಡನ್): ಪ್ರವಾಸಿ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಮತ್ತೊಂದು ಸಾಧನೆ ಮಾಡಿದ್ದು, 70 ವರ್ಷದ ಟೆಸ್ಟ್ ಇತಿಹಾಸದಲ್ಲಿ ಈ ದಾಖಲೆ ಬರೆದ ಹಿರಿಯ ವೇಗದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಹೊಸ ಮೈಲಿಗಲ್ಲು ದಾಖಲಿಸಿರುವ ಆ್ಯಂಡರ್ಸನ್ 31 ಸಲ ಐದು ವಿಕೆಟ್ ಪಡೆದ ಸಾಧನೆ ಸಹ ಮಾಡಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮಾ, ರಹಾನೆ ವಿಕೆಟ್ ಸೇರಿದಂತೆ ಐದು ವಿಕೆಟ್ ಪಡೆದು ಮಿಂಚಿರುವ ಆ್ಯಂಡರ್ಸನ್, 70 ವರ್ಷದ ಟೆಸ್ಟ್ ಕ್ರಿಕೆಟ್ನಲ್ಲಿ 5 ವಿಕೆಟ್ ಪಡೆದ ಅತಿ ಹಿರಿಯ ಬೌಲರ್ ಆಗಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 364ರನ್ಗಳಿಗೆ ಆಲೌಟ್ ಆಗಿದೆ.
ಆದರೆ, ಬೌಲಿಂಗ್ನಲ್ಲಿ ಮಿಂಚು ಹರಿಸಿದ ಆ್ಯಂಡರ್ಸನ್ ನಿನ್ನೆ ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ ವಿಕೆಟ್ ಪಡೆದುಕೊಂಡಿದ್ದರು. ಇಂದು ಕೂಡ ಮಿಂಚಿದ ವೇಗಿ ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ವಿಕೆಟ್ ಪಡೆದುಕೊಂಡರು. 39 ವರ್ಷದ 14 ದಿನದ ವೇಗಿ ಆ್ಯಂಡರ್ಸನ್ ಭಾರತದ ವಿರುದ್ಧವೇ 4 ಸಲ ಐದು ವಿಕೆಟ್ ಪಡೆದುಕೊಂಡು ಮಿಂಚಿದ್ದಾರೆ.
-
Even Jimmy couldn't believe it 🤷♂️pic.twitter.com/tkqV7c9UEr
— ICC (@ICC) August 13, 2021 " class="align-text-top noRightClick twitterSection" data="
">Even Jimmy couldn't believe it 🤷♂️pic.twitter.com/tkqV7c9UEr
— ICC (@ICC) August 13, 2021Even Jimmy couldn't believe it 🤷♂️pic.twitter.com/tkqV7c9UEr
— ICC (@ICC) August 13, 2021
1951ರಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಜೆಫ್ ಚುಬ್ 40 ವರ್ಷ 86ನೇ ದಿನದವರಾಗಿದ್ದಾಗ ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಪಡೆದುಕೊಂಡಿದ್ದ ಸಾಧನೆ ಮಾಡಿದ್ದರು. ಇದಾದ ಬಳಿಕ ಆ್ಯಂಡರ್ಸನ್ ಈ ಸಾಧನೆ ಮಾಡಿದ್ದಾರೆ. ಈಗಾಗಲೇ ಟೆಸ್ಟ್ ಕ್ರಿಕೆಟ್ನಲ್ಲಿ ಅನಿಲ್ ಕುಂಬ್ಳೆ ದಾಖಲೆ ಬ್ರೇಕ್ ಮಾಡಿರುವ ಇಂಗ್ಲೆಂಡ್ ವೇಗಿ, ಸದ್ಯ ಅತಿ ಹೆಚ್ಚು ಸಲ ಐದು ವಿಕೆಟ್ ಪಡೆದುಕೊಂಡಿರುವ ಸಾಲಿನಲ್ಲಿದ್ದ ಅಶ್ವಿನ್ ದಾಖಲೆ ಕೂಡ ಅಳಿಸಿ ಹಾಕಿದ್ದಾರೆ.
ಇದನ್ನೂ ಓದಿರಿ: 'ನೈಟ್ ವಾಚ್ಮ್ಯಾನ್ ಕೆಲಸ ಸರಿಯಾಗಿ ಮಾಡಿದ್ದಾರೆ'...ರಹಾನೆ ಕಾಲೆಳೆದ ಕ್ರಿಕೆಟ್ ಪ್ರೇಮಿಗಳು!