ETV Bharat / sports

ಅಬ್ಬರಿಸಿದ ಶಹ್ಜಾದ್​​, ನಬಿ: ನಮೀಬಿಯಾಗೆ 161 ರನ್​ಗಳ ಕಠಿಣ ಗುರಿ ನೀಡಿದ ಅಫ್ಘಾನ್

ಅಬುಧಾಬಿಯ ಶೇಕ್ ಜಾಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 160 ರನ್​ಗಳಿಸಿತು.

Afghanistan post 160-5 against Namibia in T20 World Cup
ಅಫ್ಘಾನಿಸ್ತಾನ vs ನಮೀಬಿಯಾ
author img

By

Published : Oct 31, 2021, 5:30 PM IST

ಅಬುಧಾಬಿ: ವಿಕೆಟ್ ಕೀಪರ್​ ಮೊಹಮ್ಮದ್​ ಶಹ್ಜಾದ್​​ ಮತ್ತು ನಾಯಕ ಮೊಹಮ್ಮದ್ ನಬಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ವಿಶ್ವಕಪ್​ನ ಸೂಪರ್​ 12 ನಲ್ಲಿ ನಮೀಬಿಯಾಗೆ 162 ರನ್​ಗಳ ಕಠಿಣ ಗುರಿ ನೀಡುವಲ್ಲಿ ಅಫ್ಘಾನಿಸ್ತಾನ ತಂಡ ಯಶಸ್ವಿಯಾಗಿದೆ.

ಅಬುಧಾಬಿಯ ಶೇಕ್ ಜಾಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 160 ರನ್​ಗಳಿಸಿತು.

ಆರಂಭಿಕ ಬ್ಯಾಟರ್​ಗಳಾದ ಹಜರತುಲ್ಹಾ ಝಾಜೈ 27 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್​ ಸೇರಿದಂತೆ 33 ರನ್​ ಚಚ್ಚಿದರು. ಇವರು ಶಹ್ಜಾದ್​​ ಜೊತೆಗೂಡಿ ಮೊದಲ ವಿಕೆಟ್​ಗೆ 53 ರನ್​ಗಳು ಅಮೂಲ್ಯ ಜೊತೆಯಾಟ ನೀಡಿದರು. ಝಾಜೈ ನಂತರ ಬಂದ ಗುರ್ಬಜ್​ ಕೇವಲ 4 ರನ್​ಗಳಿಸಿ ವಿಕೆಟ್​ ಒಪ್ಪಿಸಿದರು.

ಇವರ ಬೆನ್ನಲ್ಲೇ 33 ಎಸೆತಗಳಲ್ಲಿ 2 ಸಿಕ್ಸರ್​ ಮತ್ತು 3 ಬೌಂಡರಿ ಸೇರಿದಂತೆ 45 ರನ್​ಗಳಿಸಿದ್ದ ಶಹ್ಜಾದ್​ ರುಬೆನ್ ಬೌಲಿಂಗ್​​ನಲ್ಲಿ ವಿಕೆಟ್​ ಒಪ್ಪಿಸಿದರು. ಸ್ಫೋಟಕ ಬ್ಯಾಟರ್​ ನಜೀಬುಲ್ಲಾ ಜಾದ್ರನ್​ 7 ರನ್​ಗಳಿಗೆ ವಿಕೆಟ್​ ಒಪ್ಪಿಸಿ ನಿರಾಶೆ ಮೂಡಿಸಿದರು.

ಆದರೆ ಅಬ್ಬರ ಬ್ಯಾಟಿಂಗ್ ಪ್ರದರ್ಶನ ತೋರಿದ ನಿವೃತ್ತಿ ಪಂದ್ಯವನ್ನಾಡುತ್ತಿರುವ ಅಸ್ಗರ್ ಅಫ್ಘಾನ್​ 23 ಎಸೆತಗಳಲ್ಲಿ 31 ರನ್​ ಸಿಡಿಸಿದರೆ, ನಾಯಕ ನಬಿ ಕೇವಲ 17 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್​ ಸೇರಿದಂತೆ ಅಜೇಯ 32 ರನ್​ಗಳಿಸಿ 160 ರನ್​ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾದರು.

ನಮೀಬಿಯಾ ಪರ ರುಬೆನ್ ಟ್ರಂಪೆಲ್ಮನ್​ 34ಕ್ಕೆ 2, ಮತ್ತು ಬರ್ನಾರ್ಡ್​ ಸ್ಕಾಲ್ಟ್ಜ್​ 21ಕ್ಕೆ 2 ವಿಕೆಟ್​ ಪಡೆದು ಮಿಂಚಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.