ಹೈದರಾಬಾದ್: 2023ರ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ಎರಡು ಅಚ್ಚರಿಯ ಫಲಿತಾಂಶ ನೀಡಿತು. ಮೊದಲು ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಮಣಿಸಿದರೆ, ನಂತರ ಸೋಮವಾರ ಚೆನ್ನೈನ ಚೆಪಾಕ್ನಲ್ಲಿ ಪಾಕಿಸ್ತಾನದ ವಿರುದ್ಧ 8 ವಿಕೆಟ್ಗಳ ಜಯ ದಾಖಲಿಸಿತು. ನಾನಾ ದೇಶಗಳ ಲೀಗ್ಗಳಲ್ಲಿ ಆಡಿದ ಪಾಕ್ ಆಟಗಾರರು ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೇ ಅಫ್ಘಾನ್ ತನ್ನ ತನ್ನ ಸ್ಪಿನ್ ಬೌಲಿಂಗ್ನಿಂದ ಹೆಸರು ಮಾಡಿತ್ತು. ಆದರೆ ಪಾಕಿಸ್ತಾನದ ವಿರುದ್ಧ ಬ್ಯಾಟಿಂಗ್ನಲ್ಲೂ ಕಮಾಲ್ ಮಾಡಿದ ತಂಡ ವಿಶ್ವ ವೇದಿಕೆಯಲ್ಲೇ ತಾನೊಂದು ಬಲಿಷ್ಠ ಕ್ರಿಕೆಟ್ ತಂಡ ಎಂಬ ಸಂದೇಶ ರವಾನಿಸಿದೆ.
ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 282 ಸವಾಲಿನ ಮೊತ್ತವನ್ನು ದಾಖಲಿಸಿತು. ಆದರೆ ಅಫ್ಘಾನಿಸ್ತಾನವು ಇಬ್ರಾಹಿಂ ಜದ್ರಾನ್ (87) ಮತ್ತು ರಹಮತ್ ಶಾ ಅವರ ಅಜೇಯ 77 ರನ್‌ಗಳ ಸಹಾಯದಿಂದ ಈ ಮೊತ್ತವನ್ನು 49ನೇ ಓವರ್ಗೆ ಕೇವಲ 2 ವಿಕೆಟ್ ಮಾತ್ರ ಕಳೆದುಕೊಂಡು ಸಾಧಿಸಿತು. ಪಾಕಿಸ್ತಾನದ ವಿರುದ್ಧ ಅಫ್ಘನ್ಗೆ ಇದು ಮೊದಲ ಏಕದಿನ ಪಂದ್ಯದ ಗೆಲುವಾಗಿದೆ. ಈಗ ಎಂಟು ಮುಖಾಮುಖಿಯಲ್ಲಿ ಪಾಕ್ ವಿರುದ್ಧ ಅಫ್ಘನ್ 7-1 ಅಂಕಿಅಂಶ ಹೊಂದಿದೆ.
ಅಫ್ಘಾನಿಸ್ತಾನದ ಗೆಲುವಿನ ಬಗ್ಗೆ ಮಾತನಾಡಿದ ಅಫ್ಘಾನಿಸ್ತಾನದ ಮಾಜಿ ಬ್ಯಾಟಿಂಗ್ ಕೋಚ್ ಉಮೇಶ್ ಪಟ್ವಾಲ್, ಅಫ್ಘಾನಿಸ್ತಾನದ ಗೆಲುವು ನೆದರ್ಲೆಂಡ್, ಸ್ಕಾಟ್ಲೆಂಡ್ ಮತ್ತು ಜಿಂಬಾಬ್ವೆಯಂತಹ ಸಣ್ಣ ಕ್ರಿಕೆಟ್ ರಾಷ್ಟ್ರಗಳ ನೈತಿಕತೆಯನ್ನು ಹೆಚ್ಚಿಸಿದೆ. ಬಲಿಷ್ಠ ರಾಷ್ಟ್ರೀಯ ತಂಡಗಳು ಅಫ್ಘನ್ ವಿರುದ್ಧ ತಮ್ಮ ಉಪ ತಂಡವನ್ನು ದ್ವಿಪಕ್ಷೀಯ ಸರಣಿಗೆ ಇನ್ನು ಮಂದೆ ಕಳಿಸಬಾರದು ಎಂಬುದನ್ನು ಇದೇ ವೇಳೆ ಹೇಳಿದ್ದಾರೆ.
"ಅಫ್ಘಾನಿಸ್ತಾನವು ಇಂಗ್ಲೆಂಡ್ ಮತ್ತು ಪಾಕಿಸ್ತಾನವನ್ನು ಸೋಲಿಸಲು ಸಾಧ್ಯವಾದರೆ, ಅದು ಯಾವುದೇ ದೇಶವನ್ನು ಸೋಲಿಸಲು ಸಮರ್ಥವಾಗಿದೆ. ಹಿಂದೆ, ಅಫ್ಘಾನಿಸ್ತಾನದ ವಿರುದ್ಧ, ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನದಂತಹ ತಂಡಗಳು ತಮ್ಮ ಯುವ ಅಥವಾ ಉದಯೋನ್ಮುಖ ಆಟಗಾರರನ್ನು ಕಣಕ್ಕಿಳಿಸುತ್ತಿದ್ದರು. ಈಗ ಈ ತಂಡಗಳು ಅಫ್ಘಾನಿಸ್ತಾನ ನಮಗೆ ಸಮಾನವೆಂದು ಭಾವಿಸಬೇಕು ಮತ್ತು ಪ್ರತಿ ತಂಡ ಅತ್ಯುತ್ತಮ ಹನ್ನೊಂದನ್ನು ಕಣಕ್ಕಿಳಿಸಬೇಕು" -ಉಮೇಶ್ ಪಟ್ವಾಲ್.
ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಖಂಡಿತವಾಗಿಯೂ ಮತ್ತೊಂದು ಗೆಲುವು ಸಾಧಿಸಲಿದೆ ಎಂದು ಪಟ್ವಾಲ್ ವಿಶ್ವಾಸ ವ್ಯಕ್ತಪಡಿಸಿದರು. ಅಫ್ಘಾನಿಸ್ತಾನ ಈಗ ಪಾಕಿಸ್ತಾನವನ್ನು ಸೋಲಿಸಿರುವುದರಿಂದ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಂತಹ ತಂಡಗಳು ಸಂಪೂರ್ಣ ಆತ್ಮವಿಶ್ವಾಸದೊಂದಿದೆ ಎದುರಿಸಲಿದೆ ಎಂದರು.
ಅಕ್ಟೋಬರ್ 30 ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದೆ.
ಇದನ್ನೂ ಓದಿ: ಪಾಕಿಸ್ತಾನ ವಿರುದ್ಧ ಗೆದ್ದ ಖುಷಿ: ಟೀಂ ಬಸ್‌ನಲ್ಲಿ ಅಫ್ಘಾನಿಸ್ತಾನ ಆಟಗಾರರಿಂದ 'ಲುಂಗಿ ಡ್ಯಾನ್ಸ್'- ವಿಡಿಯೋ