ದುಬೈ: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯಾರ್ಧದ ಪಂದ್ಯಗಳು ಆರಂಭಗೊಳ್ಳಲು ದಿನಗಣನೆ ಆರಂಭಗೊಂಡಿದ್ದು, ಎಲ್ಲ ತಂಡದ ಆಟಗಾರರು ಮೈದಾನಕ್ಕಿಳಿದು ಸಖತ್ ಆಗಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ಬಾರಿಯ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಆರ್ಸಿಬಿ ಕೂಡ ಇದರಿಂದ ಹೊರತಾಗಿಲ್ಲ.
ಇಂದು ನಡೆದ ಅಭ್ಯಾಸ ಪಂದ್ಯದಲ್ಲಿ ಆರ್ಸಿಬಿ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಸ್ಪೋಟಕ ಶತಕ ಸಿಡಿಸಿದರು. ಈ ಮೂಲಕ ದ್ವಿತೀಯಾರ್ಧದ ಪಂದ್ಯಗಳಿಗಾಗಿ ಅದ್ಭುತ ತಯಾರಿ ನಡೆಸಿದ್ದಾರೆ.
-
Bold Diaries: RCB’s Practice Match
— Royal Challengers Bangalore (@RCBTweets) September 15, 2021 " class="align-text-top noRightClick twitterSection" data="
AB de Villiers scores a century, KS Bharat scores 95 as batsmen make merry in the practice match between Devdutt’s 11 and Harshal’s 11.#PlayBold #WeAreChallengers #IPL2021 pic.twitter.com/izMI4LCSG1
">Bold Diaries: RCB’s Practice Match
— Royal Challengers Bangalore (@RCBTweets) September 15, 2021
AB de Villiers scores a century, KS Bharat scores 95 as batsmen make merry in the practice match between Devdutt’s 11 and Harshal’s 11.#PlayBold #WeAreChallengers #IPL2021 pic.twitter.com/izMI4LCSG1Bold Diaries: RCB’s Practice Match
— Royal Challengers Bangalore (@RCBTweets) September 15, 2021
AB de Villiers scores a century, KS Bharat scores 95 as batsmen make merry in the practice match between Devdutt’s 11 and Harshal’s 11.#PlayBold #WeAreChallengers #IPL2021 pic.twitter.com/izMI4LCSG1
ಆರ್ಸಿಬಿ ತಂಡದ ಹರ್ಷಲ್ ಪಟೇಲ್ ನೇತೃತ್ವದ A ತಂಡ ಹಾಗೂ ದೇವದತ್ ಪಡಿಕ್ಕಲ್ ನೇತೃತ್ವದ B ತಂಡಗಳ ನಡುವೆ ಅಭ್ಯಾಸ ಪಂದ್ಯ ಆಯೋಜನೆಗೊಂಡಿತ್ತು. A ತಂಡದಲ್ಲಿದ್ದ ಎಬಿಡಿ ಶತಕದ ಆರ್ಭಟದಿಂದ ನಿಗದಿತ 20 ಓವರ್ಗಳಲ್ಲಿ 212ರನ್ಗಳಿಕೆ ಮಾಡಿತು.
ಇದರಲ್ಲಿ ಎಬಿಡಿ ಕೇವಲ 46 ಎಸೆತಗಳಲ್ಲಿ 104 ರನ್ ಗಳಿಸಿದರು. ಪ್ರಮುಖವಾಗಿ 7 ಬೌಂಡರಿ ಹಾಗೂ 10 ಸಿಕ್ಸರ್ ಇದರಲ್ಲಿ ಸೇರಿಕೊಂಡಿವೆ. ಇವರಿಗೆ ಉತ್ತಮ ಸಾಥ್ ನೀಡಿದ ಅಜರುದ್ದೀನ್ 43 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 66 ರನ್ಗಳಿಕೆ ಮಾಡಿದರು. B ತಂಡದಲ್ಲಿದ್ದ ಕೆ.ಎಸ್.ಭರತ್ 95 ರನ್ಗಳಿಕೆ ಮಾಡಿದ್ರೆ, ಕ್ಯಾಪ್ಟನ್ ದೇವದತ್ ಪಡಿಕ್ಕಲ್ 36 ರನ್ಗಳಿಸಿದರು.
ಕೊನೆ ಓವರ್ನಲ್ಲಿ ಪಂದ್ಯ ಗೆದ್ದ ಪಡಿಕ್ಕಲ್ ತಂಡ
213ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಪಡಿಕ್ಕಲ್ ನೇತೃತ್ವದ ಬಿ ತಂಡ ಕೊನೆ ಓವರ್ನಲ್ಲಿ ಗೆಲುವು ದಾಖಲು ಮಾಡಿದೆ. ತಂಡದ ಪರ ಭರತ್ 95ರನ್ಗಳಿಕೆ ಮಾಡಿದ್ರೆ, ಪಡಿಕ್ಕಲ್ 36ರನ್ಗಳ ಕೊಡುಗೆ ನೀಡಿದರು. ಕೊನೆಯ ಎರಡು ಎಸೆತಗಳಲ್ಲಿ ಮೂರು ರನ್ಗಳ ಅವಶ್ಯಕತೆ ಇದ್ದಾಗ ಬೌಂಡರಿ ಸಿಡಿಸುವ ಮೂಲಕ 7 ವಿಕೆಟ್ಗಳ ಗೆಲುವು ದಾಖಲು ಮಾಡಿತು.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಪ್ಟೆಂಬರ್ 20ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದ್ದು, ಅದಕ್ಕಾಗಿ ಎಲ್ಲ ರೀತಿಯಿಂದಲೂ ಸಜ್ಜುಗೊಳ್ಳುತ್ತಿದೆ. ಇಂಗ್ಲೆಂಡ್ನಿಂದ ವಾಪಸ್ ಆಗಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ, ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಹಾಗೂ ಕ್ರಿಶ್ಚಿಯನ್ ಸದ್ಯ ಕ್ವಾರಂಟೈನ್ನಲ್ಲಿದ್ದಾರೆ.