ETV Bharat / sports

Ashes Test : ಬೆನ್​ ಸ್ಟೋಕ್ಸ್​ ಶತಕ ವ್ಯರ್ಥ.. ಇಂಗ್ಲೆಂಡ್​​ ವಿರುದ್ಧ ಆಸ್ಟ್ರೇಲಿಯಾಗೆ 43 ರನ್​ಗಳ ಜಯ

author img

By

Published : Jul 2, 2023, 9:46 PM IST

Updated : Jul 2, 2023, 11:03 PM IST

ಆ್ಯಶನ್​ ಸರಣಿಯ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಇಂಗ್ಲೆಂಡ್​​ ವಿರುದ್ಧ ಆಸ್ಟ್ರೇಲಿಯಾ 43 ರನ್​ಗಳ ಜಯ ಗಳಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

2nd-ashes-test-australia-beat-england-2nd-test-to-take-2-0-lead-in-ashes-series
2nd Ashes Test : ಇಂಗ್ಲೆಂಡ್​​ ವಿರುದ್ಧ ಆಸ್ಟ್ರೇಲಿಯಾಗೆ 43 ರನ್​ಗಳ ಜಯ

ಲಾರ್ಡ್ಸ್​​ (ಲಂಡನ್​​) : ಇಂಗ್ಲೆಂಡ್​​ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಆ್ಯಶನ್​ ಸರಣಿಯ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದೆ. ಇಂಗ್ಲೆಂಡ್​ ವಿರುದ್ಧ ಆಸ್ಟ್ರೇಲಿಯಾ 43 ರನ್​ಗಳ ಜಯವನ್ನು ಸಾಧಿಸಿದೆ. ಗೆಲುವಿನ ಬೆನ್ನತ್ತಿದ್ದ ಇಂಗ್ಲೆಂಡ್​ ತಂಡಕ್ಕೆ ನಿರಾಸೆಯಾಗಿದೆ. ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ಆಸ್ಟ್ರೇಲಿಯಾ ಎರಡನೇ ಪಂದ್ಯದಲ್ಲೂ ಗೆಲುವಿನ ಆಟವನ್ನು ಮುಂದುವರೆಸಿತು.

ಇಂದು ಇಂಗ್ಲೆಂಡ್​ ಗೆಲುವಿಗೆ 257 ರನ್​ ಅಗತ್ಯತೆ ಇತ್ತು. ಮೊದಲ ಸೆಷನ್​ನಲ್ಲಿ ಇಂಗ್ಲೆಂಡ್ ಎರಡು ವಿಕೆಟ್​ ಕಳೆದುಕೊಂಡು​ 129 ರನ್​ ಗಳಿಸಿತ್ತು. ಬೆನ್​ ಡಕೆಟ್​ ಮತ್ತು ನಾಯಕ ಸ್ಟೋಕ್ಸ್​ ಜೋಡಿ ಭಾನುವಾರ ಆಂಗ್ಲರ ತಂಡಕ್ಕೆ ಉತ್ತಮ ಆಸರೆ ಆದರಲ್ಲದೇ ಅವರ ಬೇಸ್​​ಬಾಲ್​ ನೀತಿಯಂತೆ ಬ್ಯಾಟ್​ ಬೀಸಿದರು. ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್​ 6 ವಿಕೆಟ್ ನಷ್ಟಕ್ಕೆ 243 ರನ್​ ಗಳಿಸಿತ್ತು.

ಡಕೆಟ್ ನಂತರ ಬಂದ ಜಾನಿ ಬೈರ್‌ಸ್ಟೋವ್ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಆದರೆ ನಾಯಕನ ಆಟವನ್ನು ಏಕಾಂಗಿಯಾಗಿ ಹೋರಾಡಿ ತಂಡಕ್ಕಾಗಿ ಆಡುತ್ತಾ ಸಾಗಿದರು. ಇದರಿಂದ ಅವರ ಖಾತೆಗೆ 13ನೇ ಶತಕ ಸೇರಿಕೊಂಡಿತು. ಭೋಜನ ವಿರಾಮದ ವೇಳೆಗೆ ಕ್ರೀಸ್​ನಲ್ಲಿ 1 ರನ್​ನಿಂದ ಸ್ಟೂವರ್ಟ್​ ಬ್ರಾಡ್​ ಮತ್ತು 108 ರನ್​ ಗಳಿಸಿದ ಸ್ಟೋಕ್ಸ್​ ಇದ್ದರು. ಅಂತಿಮವಾಗಿ ಇಂಗ್ಲೆಂಡ್​ ವಿರುದ್ಧ ಆಸ್ಟ್ರೇಲಿಯಾ 43 ರನ್​ಗಳಿಂದ ಗೆಲುವು ಸಾಧಿಸಿತು.

ಬುಧವಾರದಿಂದ ಆರಂಭವಾಗಿದ್ದ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಟಾಸ್​ ಗೆದ್ದ ಇಂಗ್ಲೆಂಡ್​ ಮೊದಲು ಬೌಲಿಂಗ್​ ಆಯ್ದುಕೊಂಡಿತ್ತು. ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಸ್ಟೀವನ್​ ಸ್ಮಿತ್​ ಭರ್ಜರಿ ಶತಕದೊಂದಿಗೆ(110) 416 ರನ್​ ಪೇರಿಸಿತ್ತು. ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ್ದ ಇಂಗ್ಲೆಂಡ್​ 325 ರನ್​ಗಳಿಗೆ ಸರ್ವಪತನ ಕಂಡಿತು. ಇದರಿಂದ 91 ರನ್​​ಗಳ ಹಿನ್ನಡೆಯನ್ನು ಆಂಗ್ಲರು ಅನುಭವಿಸಿದ್ದರು.

ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದ ಆಸ್ಟ್ರೇಲಿಯಾವು 279 ರನ್​ ಮಾತ್ರ ಕಲೆ ಹಾಕಿ 371 ರನ್​ಗಳ ಗುರಿಯನ್ನು ಎದುರಾಳಿ ತಂಡಕ್ಕೆ ನೀಡಿತ್ತು. ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ಈ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್​​ ಆರಂಭಿಕ ಆಘಾತವನ್ನು ಎದುರಿಸಿತು. ಇದರ ನಡುವೆಯೇ ಬೆನ್​ ಡಕೆಟ್​ (83) ಹಾಗೂ ನಾಯಕ ಬೆನ್​ ಸ್ಟೋಕ್ಸ್​ (155) ವೀರೋಚಿತ ಆಟದೊಂದಿಗೆ ಗೆಲುವಿನ ಆಸೆ ಚಿಗುರಿಸಿದರು. ಅದರಲ್ಲೂ ನಾಯಕ ಸ್ಟೋಕ್ಸ್​​ ಭರ್ಜರಿ 9 ಸಿಕ್ಸರ್​ ಹಾಗೂ 9 ಬೌಂಡರಿಗಳ ಮೂಲಕ ವೀರಾವೇಶದ ಆಟವನ್ನು ಪ್ರದರ್ಶಿಸಿದರು. ಆದರೆ ತಂಡ ಮೊತ್ತ 301 ರನ್​ ಆಗಿದ್ದಾಗ ಸ್ಟೋಕ್ಸ್​ ನಿರ್ಗಮಿಸಿದರು. ಇದರಿಂದ ಇಂಗ್ಲೆಂಡ್​​ ಮತ್ತೆ ಕುಸಿಯಿತು. ನಂತರ ಓಲಿ ರಾಬಿನ್ಸ್ ಸನ್​ (1) , ಸ್ಟುವರ್ಟ್​ ಬ್ರಾಡ್ (11)​, ಜೋಸ್​ ಟಂಗ್​ 19 ರನ್​ ಮಾತ್ರ ಗಳಿಸಲು ಶಕ್ತರಾದರು. ಇದರೊಂದಿಗೆ ಅತಿಥೇಯ ಆಂಗ್ಲರು ಅಂತಿಮವಾಗಿ 81.3 ಓವರ್​ಗಳಲ್ಲಿ 327 ರನ್​ ಪೇರಿಸಿ ಸೋಲನ್ನು ಒಪ್ಪಿಕೊಂಡರು.

ಇದನ್ನೂ ಓದಿ : Ashes 2023: ಲಾರ್ಡ್ಸ್​ ಟೆಸ್ಟ್​​ ಗೆಲ್ಲಲು ಆಸಿಸ್‌ಗೆ ಬೇಕು 6 ವಿಕೆಟ್​, ಇಂಗ್ಲೆಂಡ್​ಗೆ ಬೇಕು 257 ರನ್​

Last Updated : Jul 2, 2023, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.