ETV Bharat / sports

ಡಿ. 19 ರಿಂದ ಐಪಿಎಲ್​ ಹರಾಜು; ಭಾರತದ 830 ಆಟಗಾರರು ಸೇರಿ 1166 ಕ್ರಿಕೆಟಿಗರಿಂದ ಹೆಸರು ನೋಂದಣಿ

author img

By ETV Bharat Karnataka Team

Published : Dec 2, 2023, 10:44 AM IST

Updated : Dec 2, 2023, 12:32 PM IST

IPL 2024 auction: ಇತ್ತೀಚೆಗೆ ಮುಕ್ತಾಯಗೊಂಡ 2023ರ ODI ವಿಶ್ವಕಪ್‌ನಲ್ಲಿ ಪ್ರಭಾವ ಬೀರಿದ ಟ್ರಾವಿಸ್ ಹೆಡ್ ಮತ್ತು ರಚಿನ್ ರವೀಂದ್ರ ಸೇರಿದಂತೆ ಮುಂಬರುವ IPL 2024 ರ ಹರಾಜಿಗಾಗಿ 1166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

1166 players to register  IPL 2024 auction  Indian Premier League  ಐಪಿಎಲ್​ ಹರಾಜು ಪ್ರಕ್ರಿಯೆ ಆರಂಭ  ಭಾರತದ 830 ಆಟಗಾರರು ಸೇರಿ 1166 ಕ್ರಿಕೆಟಿಗರು  ಹೆಸರು ನೊಂದಾಯಿಸಿದ ಭಾರತದ 830 ಆಟಗಾರರು  2023ರ ODI ವಿಶ್ವಕಪ್‌  ಟ್ರಾವಿಸ್ ಹೆಡ್ ಮತ್ತು ರಚಿನ್ ರವೀಂದ್ರ  ಐಪಿಎಲ್ ಹರಾಜು ಪ್ರಕ್ರಿಯೆ  ಭಾರತದ ಹಲವಾರು ಆಟಗಾರರು  ಆಟಗಾರರು ಮೂಲ ಬೆಲೆ 2 ಕೋಟಿ
ಐಪಿಎಲ್​ ಹರಾಜು ಪ್ರಕ್ರಿಯೆ ಆರಂಭ

ನವದೆಹಲಿ: ಐಪಿಎಲ್ ಹರಾಜು ಇದೇ ತಿಂಗಳ 19 ರಿಂದ ಆರಂಭವಾಗಲಿದೆ. ಕೆಲವು ಆಟಗಾರರನ್ನು ಬಿಟ್ಟುಕೊಟ್ಟ 10 ಫ್ರಾಂಚೈಸಿಗಳಿಂದ ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡಲು ಐಪಿಎಲ್ ಅರ್ಜಿ ಆಹ್ವಾನಿಸಿದೆ. ಇದಕ್ಕಾಗಿ 1166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. 77 ಸ್ಥಾನಗಳು ಖಾಲಿ ಇದ್ದು, ಅದರಲ್ಲಿ 30 ವಿದೇಶಿ ಕ್ರಿಕೆಟಿಗರು ಸೇರಿದ್ದಾರೆ. ಈ ಬಾರಿಯ ಹರಾಜಿನಲ್ಲಿ ಹಲವು ಸ್ಟಾರ್ ಆಟಗಾರರಿದ್ದಾರೆ.

ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟ್ರಾವಿಸ್ ಹೆಡ್, ಕಮ್ಮಿನ್ಸ್, ಸ್ಟಾರ್ಕ್, ಹೇಜಲ್‌ವುಡ್ ಅವರ ಕನಿಷ್ಠ ಬೆಲೆ ರೂ. 2 ಕೋಟಿ. ಭಾರತದ ವೇಗಿಗಳಾದ ಉಮೇಶ್ ಯಾದವ್, ಹರ್ಷಲ್ ಪಟೇಲ್ ಮತ್ತು ಬ್ಯಾಟ್ಸ್‌ಮನ್ ಕೇದಾರ್ ಜಾಧವ್ ಈ ಪಟ್ಟಿಯಲ್ಲಿದ್ದಾರೆ. ಡಿಸೆಂಬರ್ 19 ರಂದು ದುಬೈನಲ್ಲಿ ಹರಾಜು ನಡೆಯಲಿದೆ. ಐಪಿಎಲ್ 1166 ಕ್ರಿಕೆಟಿಗರ ಪಟ್ಟಿಯನ್ನು ಫ್ರಾಂಚೈಸಿಗಳಿಗೆ ಕಳುಹಿಸಿದೆ. ಇದರಲ್ಲಿ ಫ್ರಾಂಚೈಸಿಗಳು ಆಸಕ್ತಿ ತೋರಿದವರ ಅಂತಿಮ ಪಟ್ಟಿ ಸಿದ್ಧವಾಗಲಿದೆ.

ಹರಾಜಿನಲ್ಲಿ ಭಾರತದ ಹಲವು ಆಟಗಾರರು: ಐಪಿಎಲ್ 2024ಕ್ಕೆ ನಡೆಯಲಿರುವ ಹರಾಜಿಗೆ ಒಟ್ಟು 1166 ಆಟಗಾರರು ತಮ್ಮ ಹೆಸರನ್ನು ನೀಡಿದ್ದಾರೆ. ಈ ಬಾರಿ ಹರಾಜಿಗೆ ಭಾರತದ 830 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಇದಲ್ಲದೇ ಇದರಲ್ಲಿ 336 ವಿದೇಶಿ ಆಟಗಾರರು ಸೇರಿದ್ದಾರೆ. ಇವರಲ್ಲಿ 212 ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ್ದಾರೆ.

ಹರಾಜಿನಲ್ಲಿ 7 ಆಸ್ಟ್ರೇಲಿಯನ್ ಆಟಗಾರರು : ಆಸ್ಟ್ರೇಲಿಯಾದ ODI ವಿಶ್ವಕಪ್ 2024 ವಿಜೇತ ತಂಡದ ಏಳು ಆಟಗಾರರು 2024 ರ ಐಪಿಎಲ್ ಆಟಗಾರರ ಹರಾಜಿನಲ್ಲಿ 2 ಕೋಟಿ ರೂಪಾಯಿ ಮೂಲ ಬೆಲೆಯೊಂದಿಗೆ ಪ್ರವೇಶಿಸುವ 25 ಆಟಗಾರರಲ್ಲಿ ಸೇರಿದ್ದಾರೆ. ಇವರಲ್ಲಿ ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಸ್ಟೀವ್ ಸ್ಮಿತ್, ಜೋಶ್ ಇಂಗ್ಲಿಸ್ ಮತ್ತು ಸೀನ್ ಅಬಾಟ್ ಸೇರಿದ್ದಾರೆ. 2 ಕೋಟಿ ಮೂಲ ಬೆಲೆಯಲ್ಲಿ ಕೇವಲ ನಾಲ್ವರು ಭಾರತೀಯರು ಸೇರಿದ್ದಾರೆ. ಇವರಲ್ಲಿ ಉಮೇಶ್ ಯಾದವ್, ಕೇದಾರ್ ಜಾಧವ್, ಶಾರ್ದೂಲ್ ಠಾಕೂರ್ ಮತ್ತು ಹರ್ಷಲ್ ಪಟೇಲ್ ಸೇರಿದ್ದಾರೆ. ನ್ಯೂಜಿಲೆಂಡ್‌ನ ಬ್ಯಾಟಿಂಗ್ ಆಲ್‌ರೌಂಡರ್ ರಚಿನ್ ರವೀಂದ್ರ ವಿಶ್ವಕಪ್ 2023 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ವಿಶ್ವಕಪ್​ನಲ್ಲಿ ತಮ್ಮ ಸಾಮರ್ಥ್ಯ ತೋರಿದ ಕಿವೀಸ್ ಆಲ್ ರೌಂಡರ್ ರಚಿನ್ ರವೀಂದ್ರ ಕನಿಷ್ಠ ಬೆಲೆ 50 ಲಕ್ಷ ರೂಪಾಯಿ ಇದೆ. ಇವರು ಇದಕ್ಕಿಂತ 20 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುವ ಸಾಧ್ಯತೆಗಳಿವೆ. ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದಿರುವ ರಚಿನ್​ ಈ ವಿಶ್ವಕಪ್​ನಲ್ಲಿ 578 ರನ್ ಗಳಿಸಿ ಐದು ವಿಕೆಟ್ ಪಡೆದಿರುವುದು ಗಮನಾರ್ಹ.

ಈ ಆಟಗಾರರು ಮೂಲ ಬೆಲೆ 2 ಕೋಟಿ : ಹರ್ಷಲ್ ಪಟೇಲ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಕೇದಾರ್ ಜಾಧವ್, ಮುಜೀಬ್ ಉರ್ ರೆಹಮಾನ್, ಸೀನ್ ಅಬಾಟ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್, ಸ್ಟೀವ್ ಸ್ಮಿತ್, ಮುಸ್ತಾಫಿಜುರ್ ರೆಹಮಾನ್, ಟಾಮ್ ಬ್ಯಾಂಟನ್, ಹ್ಯಾರಿ ಬ್ರೂಕ್, ಜಾಮಿ ಡಿ ಬ್ರೂಕ್ ಓವರ್ಟನ್, ಆದಿಲ್ ರಶೀದ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಲಾಕ್ ಫರ್ಗುಸನ್, ಗೆರಾಲ್ಡ್ ಕೋಟ್ಜಿ, ರಿಲೆ ರೊಸ್ಸೌ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಏಂಜೆಲೊ ಮ್ಯಾಥ್ಯೂಸ್ ಸೇರಿದಂತೆ ಅನೇಕ ಆಟಗಾರರ ಮೂಲ ಬೆಲೆ 2 ಕೋಟಿ ರೂಪಾಯಿ ಇದೆ.

ಓದಿ: ಅಕ್ಷರ್​, ಬಿಷ್ಣೋಯ್ ಸ್ಪಿನ್​ಗೆ ನಲುಗಿದ ಕಾಂಗರೂ ಪಡೆ: ಭಾರತಕ್ಕೆ ಸರಣಿ ಜಯ

Last Updated : Dec 2, 2023, 12:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.