ಹಾಂಗ್ಕಾಂಗ್: ಭಾರತದ ಭರವಸೆಯ ಡಬಲ್ಸ್ ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಹಾಂಗ್ಕಾಂಗ್ ಓಪನ್ನಲ್ಲಿ ಆರಂಭದ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.
ಚೀನಾ ಓಪನ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಸಾತ್ವಿಕ್-ಚಿರಾಗ್ ಜೋಡಿ ಹಾಂಗ್ಕಾಂಗ್ ಓಪನ್ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್ನ ತಕುರೊ ಹೊಕಿ-ಯುಗೊ ಕೊಬಾಯಶಿ ಜೋಡಿ ವಿರುದ್ಧ 17-21, 21-16, 21-17ರಲ್ಲಿ ಸೋಲನುಭವಿಸುವ ಮೂಲಕ ನಿರಾಶೆ ಅನುಭವಿಸಿದ್ದಾರೆ.
-
Srikanth Enters Quarterfinals!⚡️
— BAI Media (@BAI_Media) November 14, 2019 " class="align-text-top noRightClick twitterSection" data="
🇮🇳’s ace shuttler @srikidambi advanced into the QF of #YonexSunrise #HongKongOpenSuper500 after defeating #SourabhVerma in the pre-quarters.
Score👉: 21-11,15-21,21-19.
Way to go champ !💪#IndiaontheRise #badminton pic.twitter.com/nFwYHK9DcB
">Srikanth Enters Quarterfinals!⚡️
— BAI Media (@BAI_Media) November 14, 2019
🇮🇳’s ace shuttler @srikidambi advanced into the QF of #YonexSunrise #HongKongOpenSuper500 after defeating #SourabhVerma in the pre-quarters.
Score👉: 21-11,15-21,21-19.
Way to go champ !💪#IndiaontheRise #badminton pic.twitter.com/nFwYHK9DcBSrikanth Enters Quarterfinals!⚡️
— BAI Media (@BAI_Media) November 14, 2019
🇮🇳’s ace shuttler @srikidambi advanced into the QF of #YonexSunrise #HongKongOpenSuper500 after defeating #SourabhVerma in the pre-quarters.
Score👉: 21-11,15-21,21-19.
Way to go champ !💪#IndiaontheRise #badminton pic.twitter.com/nFwYHK9DcB
ಮೊದಲ ಗೇಮ್ಅನ್ನು 17-21ರಿಂದ ಗೆದ್ದ ನಂಬರ್ 7 ಜೋಡಿ ನಂತರ ಎರಡು ಸೆಟ್ಗಳಲ್ಲಿ 14 ನೇ ಶ್ರೇಯಾಂಕದ ಜೋಡಿಯಿಂದ ಅಚ್ಚರಿಯ ಸೋಲು ಕಂಡಿತು.
ಇನ್ನು ಸಿಂಗಲ್ಸ್ ವಿಭಾಗದಲ್ಲಿ ಶ್ರೀಕಾಂತ್ ಭಾರತದವರೇ ಆದ ಸೌರಭ್ ವರ್ಮಾ ವಿರುದ್ಧ 21-11, 15-21, 21-19ರಿಂದ ರೋಚಕ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಹೆಚ್.ಎಸ್.ಪ್ರಣಯ್ 21-12, 21-19 ಅಂತರದಲ್ಲಿ ಇಂಡೋನೇಷ್ಯಾದ ಜೊನಾತನ್ ಕ್ರಿಸ್ಟೀ ವಿರುದ್ಧ ಸೋಲನುಭವಿಸಿದರು.
ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಶ್ರೀಕಾಂತ್ ಚೀನಾದ ಲಂಗ್ ಚೆನ್ ವಿರುದ್ಧ ಸೆಣಸಾಡಲಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಸಿಂಧು ಥಾಯ್ಲೆಂಡ್ನ ಬುಸನಾನ್ ಆಂಗ್‌ಬುಮ್ರುಂಗ್ ಫಾನ್‌ರನ್ನು ಎದುರಿಸಲಿದ್ದಾರೆ.