ಜಕಾರ್ತಾ(ಇಂಡೋನೇಷ್ಯಾ): ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಇಂಡೋನೇಷ್ಯಾ ಓಪನ್ ಸೀರಿಸ್‌ನಲ್ಲಿ ದಕ್ಷಿಣ ಕೊರಿಯಾದ ಸಿಮ್ ಯುಜಿನ್ ಅವರನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
Indonesia Open : ಕೋರ್ಟ್ 2 ಕಣಕ್ಕಿಳಿದಿದ್ದ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು 14-21, 21-19, 21-14ರಿಂದ ಯುಜಿನ್ ಅವರನ್ನು 1 ಗಂಟೆ 6 ನಿಮಿಷ ನಡೆದ ಪಂದ್ಯದಲ್ಲಿ ಮಣಿಸಿದರು.
22 ವರ್ಷ ವಯಸ್ಸಿನ ಕೊರಿಯಾದ ಆಟಗಾರ್ತಿ ಯುಜಿನ್ 17ನೇ ನಿಮಿಷಗಳಲ್ಲಿ 21-14 ಅಂಕಗಳ ಮೂಲಕ ಹಾಲಿ ವಿಶ್ವ ಚಾಂಪಿಯನ್ ವಿರುದ್ಧ ಮೊದಲ ಸುತ್ತಿನಲ್ಲಿ ಮುನ್ನಡೆ ಪಡೆದ ಬಳಿಕ ಬ್ಲಾಕ್‌ಗಳನ್ನು ತ್ವರಿತವಾಗಿ ಪ್ರಾರಂಭಿಸಿದರು. ನಂತರ ಸಿಂಧು ತಮ್ಮ ಅದ್ಭುತ ಆಟದ ಮೂಲಕ ಹಿಡಿತ ಸಾಧಿಸಿದರು.
ಎರಡನೇ ಸುತ್ತಿನಲ್ಲಿ 21-19 ಸೆಟ್‌ಗಳ ಅಂತರದಲ್ಲಿ ಮುನ್ನಡೆ ಪಡೆದರು. ಮೂರನೇ ಸುತ್ತಿನಲ್ಲಿ ಮೊದಲು 11-11ರಲ್ಲಿ ಸಮನಾಗಿತ್ತು. ಆದರೆ, ನಂತರದ ಆಟದಲ್ಲಿ ಸಿಂಧು ಯಾವುದೇ ಅಂತರದಲ್ಲೂ ಯುಜಿನ್ ಮೇಲುಗೈ ಸಾಧಿಸಲು ಅವಕಾಶವೇ ನೀಡಲಿಲ್ಲ.
ಅಂತಿಮವಾಗಿ 3ನೇ ಸುತ್ತಿನಲ್ಲಿ 21-14 ರಿಂದ ಗೆದ್ದು ದಕ್ಷಿಣ ಕೊರಿಯಾದ ಆಟಗಾರ್ತಿಗೆ ಸೋಲಿನ ರುಚಿ ತೋರಿಸಿದರು. ಪಿವಿ ಸಿಂಧು ಸೆಮಿಫೈನಲ್‌ನಲ್ಲಿ ಜಪಾನ್‌ನ ಅಸುಕಾ ತಕಹಶಿ ಅಥವಾ ಥಾಯ್ಲೆಂಡ್‌ನ ಶಟ್ಲರ್ ರಚನೋಕ್ ಇಂಟನಾನ್ ಅವರನ್ನು ಎದುರಿಸಲಿದ್ದಾರೆ.