ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಡೆನ್ಮಾರ್ಕ್ ಆಟಗಾರ್ತಿ ಮಿಯಾ ಬ್ಲಿಚ್‌ಫೆಲ್ಡ್ ವಿರುದ್ಧ ಪಿ.ವಿ.ಸಿಂಧು ಜಯ ಗಳಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಪಿವಿ ಸಿಂಧು ಮೊದಲ ಮತ್ತು ಎರಡನೇ ಸೆಟ್ ಅನ್ನು 21-15, 21-13 ಮೂಲಕ ಜಯಿಸಿದರು. ಈ ಗೆಲುವಿನ ಮೂಲಕ ಪಿವಿ ಸಿಂಧು ಕ್ವಾರ್ಟರ್ ಫೈನಲ್ಗೆ ತಲುಪಿದರು.
ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಸಿಂಧು, ಈ ಬಾರಿಯೂ ಪದಕದ ಭರವಸೆ ಮೂಡಿಸಿದ್ದಾರೆ.