ಹಾಂಕಾಂಗ್: ಹಾಂಕಾಂಗ್ ಓಪನ್ನಲ್ಲಿ ಶ್ರೀಕಾಂತ್ ಶುಭಾರಂಭ ಮಾಡಿದರೆ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ಸೋಲು ಕಾಣುವ ಮೂಲಕ ಮತ್ತೆ ನಿರಾಶೆ ಅನುಭವಿಸಿದ್ದಾರೆ.
ಕಿಡಂಬಿ ಶ್ರೀಕಾಂತ್ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜಪಾನ್ನ ಕೆಂಟೊ ಮೊಮೆಟೊ ಹಾಂಕಾಂಗ್ ಓಪನ್ನಿಂದ ಹಿಂದೆ ಸರಿದ ಕಾರಣ ಶ್ರೀಕಾಂತ್ ವಾಕ್ಓವರ್ ಪಡೆದು ಎರಡನೇ ಸುತ್ತಿಗೆ ಸುಲಭವಾಗಿ ಪ್ರವೇಶಿಸಿದ್ದಾರೆ.
ಮಹಿಳಾ ವಿಭಾಗದಲ್ಲಿ 9ನೇ ಶ್ರೇಯಾಂಕದ ಸೈನಾ ನೆಹ್ವಾಲ್ 13-21, 20-22 ಅಂತರದ ನೇರ ಸೆಟ್‍ಗಳಿಂದ ಚೀನಾದ ಚೈ ಯಾನ್ ಯಾನ್ ವಿರುದ್ಧ ಸೋಲು ಅನುಭವಿಸಿದರು. ಈ ಮೂಲಕ ಚೀನಾ ಓಪನ್, ಡೆನ್ಮಾರ್ಕ್ ಓಪನ್ ಹಾಗೂ ಪ್ರೆಂಚ್ ಓಪನ್ ಇದೀಗ ಹಾಂಕಾಂಗ್ ಓಪನ್ನಲ್ಲಿ ಆರಂಭದ ಸುತ್ತುಗಳಲ್ಲೇ ಸೈನಾ ಸೋಲನುಭವಿಸಿದಂತಾಗಿದೆ.
ಪುರುಷರ ಮತ್ತೊಂದು ಪಂದ್ಯದಲ್ಲಿ ಸಮೀರ್ ವರ್ಮಾ 11-21, 21-13, 8-21 ಅಂತರದಲ್ಲಿ ತೈವಾನ್‍ನ ವಾಂಗ್ ಟಿಜು ವೀ ವಿರುದ್ಧ ಸೋಲು ಕಾಣುವ ಮೂಲಕ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ.