ಹಾಂಗ್ಕಾಂಗ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕಿಡಿಂಬಿ ಶ್ರೀಕಾಂತ್ ಹಾಂಕಾಂಗ್ ಸೆಮಿಫೈನಲ್ನಲ್ಲಿ ಸೋಲು ಕಾಣುವ ಮೂಲಕ ಭಾರತದ ಸವಾಲು ಅಂತ್ಯಗೊಂಡಿದೆ.
ಸೆಮಿಫೈನಲ್ ಪಂದ್ಯದಲ್ಲಿ ಹಾಂಕಾಂಗ್ನ ಆಟಗಾರ ಲೀ ಚೆವುಕ್ ಯಿಯು ವಿರುದ್ಧ ಶ್ರೀಕಾಂತ್ 21-8, 25-23 ರಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿದರು.
-
Tough luck!@srikidambi's fine run at the #HongKongOpen comes to an end in the semifinals after he goes down 9-21, 23-25 to 🇭🇰's Lee Cheuk Yiu in 42 minutes.
— BAI Media (@BAI_Media) November 16, 2019 " class="align-text-top noRightClick twitterSection" data="
Come back stronger, champ! #badminton #IndiaontheRise pic.twitter.com/1RVpRdwRvF
">Tough luck!@srikidambi's fine run at the #HongKongOpen comes to an end in the semifinals after he goes down 9-21, 23-25 to 🇭🇰's Lee Cheuk Yiu in 42 minutes.
— BAI Media (@BAI_Media) November 16, 2019
Come back stronger, champ! #badminton #IndiaontheRise pic.twitter.com/1RVpRdwRvFTough luck!@srikidambi's fine run at the #HongKongOpen comes to an end in the semifinals after he goes down 9-21, 23-25 to 🇭🇰's Lee Cheuk Yiu in 42 minutes.
— BAI Media (@BAI_Media) November 16, 2019
Come back stronger, champ! #badminton #IndiaontheRise pic.twitter.com/1RVpRdwRvF
ಮೊದಲ ಸೆಟ್ನಲ್ಲಿ ಹಾಂಕಾಂಗ್ ಆಟಗಾರನ ಮುಂದೆ ಮಂಕಾದ ಶ್ರೀಕಾಂತ್ 21-8ರಲ್ಲಿ ಸುಲಭವಾಗಿ ಸೋಲನುಭವಿಸಿದರು. ಆದರೆ, ಎರಡನೇ ಸೆಟ್ನಲ್ಲಿ ಆರಂಭದಲ್ಲಿ ಮುನ್ನಡೆ ಸಾಧಿಸಿ ತಮ್ಮ ಅಂಕ 20ರ ತನಕ ಬಂದರೂ ಇನ್ನೊಂದು ಅಂಕ ಗಳಿಸುವಲ್ಲಿ ವಿಫಲಾದರು. ಈ ವೇಳೆ ಬಹಳ ಚುರುಕಾಗಿ ಆಡಿದ ಲೀ ಚಿವುಕ್ 25-23ರಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದರು.
ಕೆ.ಶ್ರೀಕಾಂತ್ ಮೊದಲ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಕೆಂಟೋ ಮೊಮೆಟೋ ಟೂರ್ನಿಗೆ ಭಾಗವಹಿಸದ ಹಿನ್ನೆಲೆಯಲ್ಲಿ ವಾಕ್ ಓವರ್ ಪಡೆದಿದ್ದರು. ನಂತರ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಭಾರತದವರೇ ಆದ ಸೌರಭ್ ವರ್ಮಾರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ಚೀನಾದ ಚೆನ್ ಲಾಂಗ್ ಒಂದೇ ಗೇಮ್ ಆಡಿ ಗಾಯದಿಂದ ಹಿಂದೆ ಸರಿದಿದ್ದರಿಂದ ಶ್ರೀಕಾಂತ್ ಸೆಮಿಫೈನಲ್ ಪ್ರವೇಶಿಸಿದ್ದರು.