ETV Bharat / sports

ಕಳೆದ 10 ವರ್ಷದ ಫಲಿತಾಂಶ ಪರಿಶೀಲಿಸಿ.. ಡಬಲ್ಸ್ ಕ್ಯಾಂಪ್​ ತೆಗೆಯಿರಿ ಎಂದ ಜ್ವಾಲಾಗೆ ಪುಲ್ಲೇಲು 'Smash'!

author img

By

Published : Mar 13, 2021, 9:30 PM IST

ಸಾಕಷ್ಟು ಸಿಂಗಲ್ಸ್​ ಆಟಗಾರರನ್ನು ಗೋಪಿಚಂದ್ ತಯಾರು ಮಾಡಿದ್ದಾರೆ ಎಂದು ಜ್ವಾಲಾ ಒಪ್ಪಿಕೊಂಡಿದ್ದಲ್ಲದೆ, ಅದಕ್ಕೆ ಸಂಪೂರ್ಣ ಕ್ರೆಡಿಟ್ ನೀಡಿದ್ದರು. ಆದರೆ, ಡಬಲ್ಸ್​ನಲ್ಲಿ ಅವರ ಸಾಧನೆ ಶೂನ್ಯ. ಹಾಗಾಗಿ, ಅವರ ಅಕಾಡೆಮಿಯಿಂದ ಡಬಲ್ಸ್ ಕ್ಯಾಂಪ್ ತೆಗೆದು ಹಾಕಬೇಕು ಎಂದಿದ್ದರು..

ಜ್ವಾಲಾ ಗುಟ್ಟ- ಗೋಪಿಚಂದ್​
ಜ್ವಾಲಾ ಗುಟ್ಟ- ಗೋಪಿಚಂದ್​

ಹೈದರಾಬಾದ್ ​: ಗೋಪಿಚಂದ್ ಅಕಾಡೆಮಿಯಿಂದ ಡಬಲ್ಸ್​ ಕ್ಯಾಂಪ್‌ನ ತೆಗೆಯಬೇಕು ಎಂಬ ಮಾಜಿ ಡಬಲ್ಸ್​ ಆಟಗಾರ್ತಿ ಜ್ವಾಲಾ ಗುಟ್ಟ ಅವರ ಸಲಹೆಗೆ ತಿರುಗೇಟು ನೀಡಿರುವ ಭಾರತದ ಮುಖ್ಯ ಕೋಚ್​ ಪುಲ್ಲೇಲ ಗೋಪಿ ಚಂದ್​, ಕಳೆದ 10 ವರ್ಷಗಳ ಅಂಕಿ-ಅಂಶಗಳನ್ನು ಪರೀಕ್ಷಿಸಿ ಎಂದು ಹೇಳಿದ್ದಾರೆ.

ಶುಕ್ರವಾರ ತಮಿಳುನಾಡು ಬ್ಯಾಡ್ಮಿಂಟನ್​ ಸೂಪರ್​ ಲೀಗ್​ಗೆ ಚಾಲನೆ ನೀಡಿದ್ದ ಗುಟ್ಟಾ ಈ ಹೇಳಿಕೆ ನೀಡಿದ್ದರು. ಆದರೆ, ಇದಕ್ಕೆ ಈಟಿವಿ ಭಾರತದ ಜೊತೆ ಮಾತನಾಡಿರುವ ಗೋಪಿಚಂದ್, "ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಏನೂ ಇಲ್ಲ. ಕಳೆದ 10 ವರ್ಷಗಳ ರಾಷ್ಟ್ರೀಯ ಆಟಗಾರರ ಫಲಿತಾಂಶಗಳನ್ನ ದಯವಿಟ್ಟು ಪರಿಶೀಲಿಸಿ" ಎಂದು ತಿರುಗೇಟು ನೀಡಿದ್ದಾರೆ.

ಡಬಲ್ಸ್​ ವಿಭಾಗದಲ್ಲಿ ಚೀನಾದಲ್ಲಿ 4 ರಿಂದ 5 ಜೋಡಿ ಇರುತ್ತವೆ, ನಮ್ಮ ಬಳಿ ಕೇವಲ ಒಂದೇ ಜೋಡಿ, ನಮ್ಮಲ್ಲಿ ಹೆಚ್ಚು ಜೋಡಿಗಳನ್ನು ತಯಾರು ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ಈ ಬಗ್ಗೆ ನಾನು ಸಾಕಷ್ಟು ವರ್ಷಗಳಿಂದ ಹೇಳುತ್ತಾ ಬರುತ್ತಿದ್ದೇನೆ. ಇದರ ಬಗ್ಗೆ ನಾವು ರಾಷ್ಟ್ರೀಯ ಕೋಚ್​ಗೆ ಪ್ರಶ್ನೆ ಮಾಡಬೇಕು ಎಂದು ಗುಟ್ಟಾ ಕಿಡಿಕಾರಿದ್ದರು.

ಆದರೆ, ಸಾಕಷ್ಟು ಸಿಂಗಲ್ಸ್​ ಆಟಗಾರರನ್ನು ಗೋಪಿಚಂದ್ ತಯಾರು ಮಾಡಿದ್ದಾರೆ ಎಂದು ಜ್ವಾಲಾ ಒಪ್ಪಿಕೊಂಡಿದ್ದಲ್ಲದೆ, ಅದಕ್ಕೆ ಸಂಪೂರ್ಣ ಕ್ರೆಡಿಟ್ ನೀಡಿದ್ದರು. ಆದರೆ, ಡಬಲ್ಸ್​ನಲ್ಲಿ ಅವರ ಸಾಧನೆ ಶೂನ್ಯ. ಹಾಗಾಗಿ, ಅವರ ಅಕಾಡೆಮಿಯಿಂದ ಡಬಲ್ಸ್ ಕ್ಯಾಂಪ್ ತೆಗೆದು ಹಾಕಬೇಕು ಎಂದು ಹೇಳಿದ್ದರು.

ಇದನ್ನು ಓದಿ:ಭಾರತದ ಸೋಲನ್ನು ಟ್ರೋಲ್​ ಮಾಡಿದ ಮೈಜಲ್ ವಾನ್​ಗೆ ತಿರುಗೇಟು ನೀಡಿದ ವಾಸೀಮ್ ಜಾಫರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.