ETV Bharat / state

ಚಿಕ್ಕೋಡಿ: ತಾಯಿ, ಎರಡು ಮಕ್ಕಳ ಮೃತದೇಹ ಬಾವಿಯಲ್ಲಿ ಪತ್ತೆ, ಕೊಲೆ ಶಂಕೆ - Chikkodi Mother And Children Death

author img

By ETV Bharat Karnataka Team

Published : 2 hours ago

Updated : 2 hours ago

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.

Bommanala village
ಘಟನಾ ಸ್ಥಳ (ETV Bharat)

ಚಿಕ್ಕೋಡಿ: ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳ ಮೃತದೇಹ ಬಾವಿಯಲ್ಲಿ ದೊರೆತಿದೆ. ಮಹಿಳೆಯ ಪತಿ ಕೊಲೆ ಮಾಡಿರುವುದಾಗಿ ಪೋಷಕರು ಆರೋಪಿಸಿದ್ದಾರೆ.

ಯಲ್ಲವ್ವ ಅರ್ಜುನ ಕರಿಹೊಳೆ(30), ಮಕ್ಕಳಾದ ಸ್ವಾತಿ ಕರಿಹೊಳೆ (8) ಮತ್ತು ಮುತ್ತಪ್ಪ ಕರಿಹೊಳೆ (2) ಮೃತರು. ಬೊಮ್ಮನಾಳ ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ರಾಯಭಾಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪೋಷಕರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಚಿಕ್ಕೋಡಿಯಲ್ಲಿ ತಾಯಿ ಮತ್ತು ಮಕ್ಕಳ ಸಾವು ಪ್ರಕರಣ: ಪ್ರತಿಕ್ರಿಯೆಗಳು (ETV Bharat)

ಮೃತಪಟ್ಟ ಯಲ್ಲವ್ವ ಕರಿಹೊಳೆ ಅವರ ಚಿಕ್ಕಪ್ಪ ಮಾಯಪ್ಪ ಮಾತನಾಡಿ, "ಯಲ್ಲವ್ವಗೆ 2010ರಲ್ಲಿ ಬೊಮ್ಮನಾಳ ಗ್ರಾಮದ ಅರ್ಜುನ್ ಜೊತೆ ವಿವಾಹ ಮಾಡಿಕೊಳ್ಳಲಾಗಿತ್ತು. ನಂತರ ಆತ ವರದಕ್ಷಿಣೆ ತರುವಂತೆ ಆಗಾಗ್ಗೆ ಪತ್ನಿಗೆ ಕಿರುಕುಳ ಕೊಡುತ್ತಿದ್ದ. ಹಿರಿಯರ ಸಮ್ಮುಖದಲ್ಲಿ ಬುದ್ಧಿವಾದ ಹೇಳಲಾಗಿತ್ತು. ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಈ ಪೈಕಿ ಇಬ್ಬರು ಮಕ್ಕಳು ನಮ್ಮ ಮಗಳನ್ನು ಬಾವಿಗೆಸೆದು ಕೊಂದಿದ್ದಾರೆ" ಎಂದು ಆರೋಪಿಸಿದರು.

ಮೃತ ಮಹಿಳೆಯ ದೊಡ್ಡಪ್ಪ ಬಸಪ್ಪ ಕರೆಪ್ಪ ಹಾಲಗೊಂಡ ಪ್ರತಿಕ್ರಿಯಿಸಿ, "ಮೃತ ಯಲ್ಲವ್ವ ಗಂಡ ಅರ್ಜುನ್ ಮದ್ಯ ವ್ಯಸನಿಯಾಗಿದ್ದ. ಮದುವೆಯಾದ ನಂತರ ಅವನ ಕಿರುಕುಳ ಹೆಚ್ಚಾಗಿತ್ತು. ನಾವೇ ಮಧ್ಯಸ್ಥಿಕೆ ವಹಿಸಿ ನ್ಯಾಯ ಪಂಚಾಯಿತಿ ಮಾಡಿದ್ದೆವು. ಶನಿವಾರ ರಾತ್ರಿ ನಮ್ಮ ಮಗಳ ಮೇಲೆ ಹಲ್ಲೆ ಮಾಡಿ ಬಾವಿಗೆ ಎಸೆದಿದ್ದಾನೆ. ನಂತರ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ" ಎಂದರು.

ಇದನ್ನೂ ಓದಿ: ತುಮಕೂರು: ಕೌಟುಂಬಿಕ ಕಲಹ, ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ - SUICIDE CASE

Last Updated : 2 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.