ETV Bharat / sports

BWF world tour finals: ಸೆಮಿಫೈನಲ್ಸ್​ನಲ್ಲಿ ನಂಬರ್​ 1 ವಿಕ್ಟರ್​ಗೆ ಶರಣಾದ ಲಕ್ಷ್ಯ ಸೇನ್ - ಸೆಮಿಫೈನಲ್​ನಲದಲಿ ಲಕ್ಷ್ಯ ಸೋಲು

ಲಕ್ಷ್ಯ ಸೇನ್​ ವಿಶ್ವದ ನಂಬರ್​ 1 ಮತ್ತು ಒಲಿಂಪಿಕ್ ಚಾಂಪಿಯನ್​ ಆಗಿರುವ ಡ್ಯಾನಿಸ್​ ಪ್ಲೇಯರ್​ ವಿರುದ್ಧ 13-21, 11-21ರ ನೇರ ಗೇಮ್​ಗಳ ಅಂತರದಲ್ಲಿ ಸೋಲು ಕಂಡರು. ಯುವ ಶಟ್ಲರ್​ ವಿಕ್ಟರ್ ವಿರುದ್ಧ ಸತತ 4ನೇ ಮುಖಾಮುಖಿಯಲ್ಲೂ ಸೋಲು ಕಂಡಂತಾಯಿತು. ಗುಂಪು ಹಂತದ ಪಂದ್ಯದಲ್ಲೂ ವಿಕ್ಟರ್ ವಿರುದ್ಧ ಲಕ್ಷ್ಯ ಸೋಲು ಕಂಡಿದ್ದರು.

ಯುವ ಶಟ್ಲರ್​ ಲಕ್ಷ್ಯ ಸೇನ್​ಗೆ ಸೋಲು
author img

By

Published : Dec 4, 2021, 9:36 PM IST

Updated : Dec 5, 2021, 3:11 PM IST

ಬಾಲಿ(ಇಂಡೋನೇಷಿಯಾ): ವಿಶ್ವ ಟೂರ್​ ಫೈಲ್ಸ್​ನಲ್ಲಿ ಭಾರತದ ಯುವ ಶಟ್ಲರ್​ ಲಕ್ಷ್ಯ ಸೇನ್​ ಅವರ ಹೋರಾಟ ಸೆಮಿಫೈನಲ್​ಗೆ ಅಂತ್ಯವಾಗಿದೆ. ಶನಿವಾರ ನಡೆದ ನಾಲ್ಕರ ಘಟ್ಟದ ಹೋರಾಟದಲ್ಲಿ ಡೆನ್ಮಾರ್ಕ್​ನ ವಿಕ್ಟರ್ ಅಕ್ಸೆಲ್ಸೆನ್​ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿದರು.

ಲಕ್ಷ್ಯ ಸೇನ್​ ವಿಶ್ವದ ನಂಬರ್​ 1 ಮತ್ತು ಒಲಿಂಪಿಕ್ ಚಾಂಪಿಯನ್​ ಆಗಿರುವ ಡ್ಯಾನಿಸ್​ ಪ್ಲೇಯರ್​ ವಿರುದ್ಧ 13-21, 11-21ರ ನೇರ ಗೇಮ್​ಗಳ ಅಂತರದಲ್ಲಿ ಸೋಲು ಕಂಡರು. ಯುವ ಶಟ್ಲರ್​ ವಿಕ್ಟರ್ ವಿರುದ್ಧ ಸತತ 4ನೇ ಮುಖಾಮುಖಿಯಲ್ಲೂ ಸೋಲು ಕಂಡಂತಾಯಿತು. ಗುಂಪು ಹಂತದ ಪಂದ್ಯದಲ್ಲೂ ವಿಕ್ಟರ್ ವಿರುದ್ಧ ಲಕ್ಷ್ಯ ಸೋಲು ಕಂಡಿದ್ದರು.

ಇದಕ್ಕೂ ಮುನ್ನ ನಡೆದ ಮಹಿಳೆಯರ ಸೆಮಿಫೈನಲ್ಸ್​ನಲ್ಲಿ ಪಿವಿ ಸಿಂಧು ಒಂದು ಗಂಟೆ 10 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಜಪಾನ್​ನ ಅಕಾನೆ ಯಮಗುಚಿ ವಿರುದ್ಧ 21-15, 15-21, 21019ರ ಅಂತರದಲ್ಲಿ ಗೆಲುವು ಸಾಧಿಸಿದ್ದರು.

ಫೈನಲ್​​ನಲ್ಲಿ ಸಿಂಧು ದಕ್ಷಿಣ ಕೊರಿಯಾದ 19 ವರ್ಷದ ಆನ್​ ಸೆಯಾಂಗ್​ ವಿರುದ್ದ ವರ್ಷದ ಕೊನೆಯ ಪ್ರಶಸ್ತಿಗಾಗಿ ಕಾದಾಡಲಿದ್ದಾರೆ. ವಿಕ್ಟರ್​ ಅಕ್ಸೆಲ್ಸೆನ್​ ಫೈನಲ್​ನಲ್ಲಿ ಥಾಯ್ಲೆಂಡ್​ನ ಕುನ್ಲವುಟ್ ವಿಟಿಡ್ಸರ್ನ್​ ವಿರುದ್ಧ ಸೆಣಸಾಡಲಿದ್ದಾರೆ.

ಇದನ್ನೂ ಓದಿ:BWF World Tour Finals: ಯಮಗುಚಿಗೆ ಸೋಲುಣಿಸಿ ಫೈನಲ್ ಪ್ರವೇಶಿಸಿದ ಸಿಂಧು

Last Updated : Dec 5, 2021, 3:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.