ETV Bharat / sitara

ಶೀಘ್ರದಲ್ಲೇ ಮುಗಿಯಲಿದೆ 'ವೀಕೆಂಡ್ ವಿತ್ ರಮೇಶ್​​': ಸೀಸನ್​ ಕೊನೆಯ ಅತಿಥಿ ಯಾರು..? - undefined

ಇತ್ತೀಚೆಗಷ್ಟೇ ಆರಂಭವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಶೀಘ್ರದಲ್ಲೇ ಮುಗಿಯಲಿದೆ. ಈ ಕುರಿತು ನಿರೂಪಕ ರಮೇಶ್ ಅರವಿಂದ್ ತಮ್ಮ ಇನ್ಸ್​​ಟಾಗ್ರಾಮ್​​​ನಲ್ಲಿ ಹೇಳಿಕೊಂಡಿದ್ದಾರೆ.

ರಮೇಶ್ ಅರವಿಂದ್
author img

By

Published : Jul 3, 2019, 10:28 AM IST

ಖಾಸಗಿ ವಾಹಿನಿಯ, ನಟ ರಮೇಶ್ ಅರವಿಂದ್ ನಿರೂಪಣೆ ಮಾಡುತ್ತಿರುವ 'ವೀಕೆಂಡ್ ವಿತ್ ರಮೇಶ್​​' ಪ್ರೇಕ್ಷಕರ ಮೆಚ್ಚಿನ ಕಾರ್ಯಕ್ರಮಗಳಲ್ಲಿ ಒಂದು. 2-3 ತಿಂಗಳ ಹಿಂದಷ್ಟೇ ಈ ಕಾರ್ಯಕ್ರಮದ 4ನೇ ಸೀಸನ್ ಆರಂಭವಾಗಿತ್ತು. ಆದರೆ ಈಗ ಈ ಸೀಸನ್ ಕೂಡಾ ಮುಗಿಯುತ್ತಾ ಬಂದಿದೆ.

sumlata ambareesh
'ವೀಕೆಂಡ್ ವಿತ್ ರಮೇಶ್​​' ಕಾರ್ಯಕ್ರಮದಲ್ಲಿ ನಟಿ, ಸಂಸದೆ ಸುಮಲತಾ ಅಂಬರೀಶ್ (ಫೋಟೋ ಕೃಪೆ: ಜೀ ಕನ್ನಡ)

ಸ್ವತ: ರಮೇಶ್ ಅರವಿಂದ್ ಅವರೇ ಈ ವಿಷಯ ತಿಳಿಸಿದ್ದಾರೆ. ತಮ್ಮ ಇನ್ಸ್​​ಟಾಗ್ರಾಮ್​​ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ರಮೇಶ್ 'ಈಗ ತಾನೇ ಸೀಸನ್ 4 ಶುರುವಾಗಿದೆ, ಧರ್ಮಸ್ಥಳದ ಧರ್ಮಾಧಿಕಾರಿಗಳು ಈ ಸೀಟ್​ನಲ್ಲಿ ಕೂತಿದ್ದರು. ಆಗಲೇ ಈ ಸೀಸನ್ ಮುಗಿಯುತ್ತಾ ಬಂತು, ಕೊನೆಯ 1-2 ವಾರಗಳಲ್ಲಿ ಇದ್ದೇವೆ. ನೀವು ನಮ್ಮ ಕಾರ್ಯಕ್ರಮವನ್ನು ಎಂಜಾಯ್ ಮಾಡಿದ್ದೀರೆಂದು ಭಾವಿಸುತ್ತೇನೆ' ಎಂದು ರಮೇಶ್ ಹೇಳಿಕೊಂಡಿದ್ದಾರೆ.

ಈ ಸೀಸನ್ ಇಷ್ಟು ಬೇಗ ಮುಗಿಯುತ್ತಿರುವುದು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿರುವುದಂತೂ ನಿಜ. ಈ ಕಾರ್ಯಕ್ರಮ ಆರಂಭವಾಗುವ ಮುನ್ನವೇ ಸಾಧಕರ ಬಗ್ಗೆ ಪ್ರೇಕ್ಷಕರಿಂದ ಆಗ್ರಹ, ಅಪಸ್ವರ ಇತ್ತು. ಆದರೂ, ಸಿನಿಮಾ ಕ್ಷೇತ್ರದವರನ್ನೂ ಸೇರಿದಂತೆ ಇನ್ಫೋಸಿಸ್ ಅಧ್ಯಕ್ಷರು, ಐಪಿಎಸ್ ಅಧಿಕಾರಿಗಳು, ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಈಗಾಗಲೇ 17 ಸಾಧಕರು ಈ ಬಾರಿ ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಘಟನೆಗಳನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇನ್ನು ಮೂವರು ಅತಿಥಿಗಳಷ್ಟೇ ಬರಬೇಕಿದೆ. ಕೊನೆಯ ಸಂಚಿಕೆಯ ಅತಿಥಿ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

shankar bidari
ಐಪಿಎಸ್ ಅಧಿಕಾರಿ ಶಂಕರ್ ಬಿದರಿ (ಫೋಟೋ ಕೃಪೆ: ಜೀ ಕನ್ನಡ)

Intro:Body:ಈಗ ತಾನೇ ಸೀಸನ್ 4 ಶುರು ಆಗಿತ್ತು ಅನಿಸಿತ್ತು, ಧರ್ಮಸ್ಥಳದ ಧರ್ಮಾಧಿಕಾರಿಗಳು ಈ ಸೀಟ್ ಮೇಲೆ ಕೂತಿದ್ದರು ಅನಿಸ್ತು. ಆದರೆ, ಕಾರ್ಯಕ್ರಮ ಆಗಲೇ ಮುಗಿಯುತ್ತಾ ಬಂತು. ಇನ್ನೂ ಒಂದು ಅಥವಾ ಎರಡು ವಾರಗಳು ಮಾತ್ರ ಇದೆ...
ಹೀಗೆಂದು ಹೇಳಿದ್ದು ರಮೇಶ್ ಅರವಿಂದ್. ಹೌದು, ಸಮಯ 9.30. ನಾನು ರಮೇಶ್ ಅರವಿಂದ್ ಬಂದಾಯ್ತು, ಕಾರ್ಯಕ್ರಮ ಶುರು ಮಾಡೋಣ. ದಿಸ್ ವಿಕೇಂಡ್ ವಿಥ್ .... ಎನ್ನುವ ಕಾರ್ಯಕ್ರಮ ಕೆಲವೇ ವಾರಗಳಲ್ಲಿ ಮುಗಿಯಲಿದೆ.
ಈ ಬಗ್ಗೆ ಸ್ವತಃ ಇನ್ಸ್ತ್ರಾಗ್ರಾಮ್ ನಲ್ಲಿ ಹೇಳಿಕೊಂಡಿರುವ ರಮೇಶ್, ಕಾರ್ಯಕ್ರಮ ನಿಮಗೆಲ್ಲ ಮನರಂಜನೆ ನೀಡಿದೆ. ಆದರೆ, ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮ ಶುರುವಾಗುವ ಮುನ್ನವೇ ಸಾಧಕರ ಬಗ್ಗೆ ಪ್ರೇಕ್ಷಕರಿಂದ ಆಗ್ರಹ, ಅಪಸ್ವರಗಳಿದ್ದವು. ಆದರೂ, ಸಿನಿಮಾ ಕ್ಷೇತ್ರದವರನ್ನೂ ಸೇರಿದಂತೆ ಇನ್ಫೋಸಿಸ್ ಮುಖ್ಯಸ್ಥ ದಂಪತಿಗಳು, ಐಪಿಎಸ್ ಅಧಿಕಾರಿಗಳು, ಧರ್ಮಸ್ಥಳ ಧರ್ಮಾಧಿಕಾರಿ ಸಾಧಕರ ಸೀಟ್ ನಲ್ಲಿದ್ದರು.
ಈಗಾಗಲೇ 17 ಮಂದಿ ಕಾರ್ಯಕ್ರಮದ ಸಂಚಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಮೂರು ಫ್ರೆಮ್ ಗಳು ಬಾಕಿ ಇವೆ. ಆದರೆ, ಕೊನೆಯ ಸಂಚಿಕೆಯ ಅತಿಥಿ ಯಾರು ಎನ್ನುವ ಪ್ರಶ್ನೆ ಇದೆ.
ಮೊದಲ ಸೀಸನ್ ನಲ್ಲಿ ರಮೇಶ್ ಅರವಿಂದ್, ಎರಡನೇ ಸೀಸನ್ ನಲ್ಲಿ ಸುದೀಪ್, ಮೂರನೇ ಸೀಸನ್ ನಲ್ಲಿ ಗಣೇಶ್ ಕೊನೆಯ ಅತಿಥಿಗಳು ಆಗಿದ್ದರು.
ಅಲ್ಲದೆ, ಈ ಸೀಸನ್ ಅಲ್ಲಿ ರಾಹುಲ್ ದ್ರಾವಿಡ್ ಅವರನ್ನು ಕರೆತರಲು ವಾಹಿನಿ ಸಾಕಷ್ಟು ಶ್ರಮವಹಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ ಟ್ಯಾಗ್ ಮೂಲಕ ಅಭಿಯಾನ ಕೂಡ ನಡೆಸಿತ್ತು.

https://www.instagram.com/p/BzXuaJJHURB/?igshid=f4hy11dn6bcs

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.