ಮಕ್ಕಳಿರಲವ್ವ ಮನೆ ತುಂಬ ಎಂಬ ಮಾತಿದೆ. ಒಂದು ಮನೆಯಲ್ಲಿ ಮಕ್ಕಳು ಇದ್ದರೆ ಆ ಮನೆ ನಿಜಕ್ಕೂ ಖುಷಿಯಿಂದ ತುಂಬಿರುತ್ತದೆ. ಇನ್ನು ಮಗು ಎಂಬ ಪದದ ವ್ಯಾಖ್ಯಾನ ಮಾಡಲು ಸಾಧ್ಯಾನಾ...? ಅದನ್ನು ಮಾಡಿದ್ಧಾರೆ ಮಜಾ ಟಾಕೀಸ್ ರಾಣಿ ಶ್ವೇತಾ ಚಂಗಪ್ಪ.

"ನನ್ನ ಪ್ರಕಾರ ಮಗು ಎಂದರೆ ಭೂಮಿಗೆ ಕಳಿಸಲಾಗಿರುವ ಸ್ವರ್ಗದ ಸಣ್ಣ ತುಂಡು" ಎಂದು ಮಗುವಿನ ಬಗ್ಗೆ ವ್ಯಾಖ್ಯಾನ ನೀಡಿದ್ದಾರೆ ಶ್ವೇತಾ. ಕಿರಣ್ ಅಪ್ಪಚ್ಚು ಅವರನ್ನು ವರಿಸಿರುವ ಶ್ವೇತಾ ಚೆಂಗಪ್ಪ, ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದರು. ಸದ್ಯ ಕಿರುತೆರೆಯಿಂದ ದೂರ ಇರುವ ನಟಿ ಶ್ವೇತಾ, ಮುದ್ದು ಮಗ ಜಿಯಾನ್ ಅಯ್ಯಪ್ಪ ಅವರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಮತ್ತು ಮಗನ ಲಾಲನೆ ಪಾಲನೆಯಲ್ಲಿ ಸಂಪೂರ್ಣ ಬ್ಯುಸಿ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಶ್ವೇತಾ ಚಂಗಪ್ಪ ಆಗಾಗ ಮಗನ ಫೋಟೋ, ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಮುದ್ದು ಮಗನ ಹೆಸರಿನಲ್ಲಿ ಇನ್ಸ್ಸ್ಟಾಗ್ರಾಂ ಖಾತೆ ತೆಗೆದಿದ್ದು, 10 ತಿಂಗಳ ಪೋರ ಈಗಾಗಲೇ ಹದಿನೈದು ಸಾವಿರ ಫಾಲೋವರ್ಸ್ಗಳನ್ನು ಹೊಂದಿದ್ದಾನೆ.