ಮನರಂಜನೆ ಕ್ಷೇತ್ರದಲ್ಲಿ ಯಶಸ್ವಿ 25 ವಸಂತಗಳನ್ನು ಪೂರೈಸಿರುವ ವೀಕ್ಷಕರ ನೆಚ್ಚಿನ ಉದಯ ಟಿವಿ ಇದೀಗ ವಿಭಿನ್ನ ಧಾರಾವಾಹಿಗಳ ಮೂಲಕ ಗಮನ ಸೆಳೆಯುತ್ತಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಆರಂಭವಾದ 'ಸೇವಂತಿ' ಧಾರಾವಾಹಿ ಇದೀಗ 200 ಸಂಚಿಕೆಗಳನ್ನು ಪೂರೈಸಿದೆ.
- " class="align-text-top noRightClick twitterSection" data="
">
ಸರಿಗಮ ನಿರ್ಮಾಣ ಸಂಸ್ಥೆ ಅಡಿಯಲ್ಲಿ ವಿನೋದ್ ನಿರ್ದೇಶಿಸುತ್ತಿರುವ ಈ ಧಾರಾವಾಹಿಯಲ್ಲಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕೂಡಾ ಬಣ್ಣ ಹಚ್ಚಿರುವುದು ವಿಶೇಷ. ಆದರೆ ಇದೀಗ ಅವರ ಪಾತ್ರವೂ ಬದಲಾಗಿದ್ದು ಆಶಾಲತಾ, ಭಾರತಿ ಅವರ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ಶೃತಿ ಕೂಡಾ ಈ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಸೇವಂತಿ, ತಮಿಳು ಧಾರಾವಾಹಿ 'ರೋಜಾ' ರೀಮೇಕ್ ಆಗಿದ್ದರೂ ವೀಕ್ಷಕರು ಇದನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಾರೆ. ಅದಕ್ಕೆ ಇದರ ವಿಭಿನ್ನ ಕಥಾ ಶೈಲಿ ಮತ್ತು ಕಲಾವಿದರೇ ಕಾರಣ.
ಪಲ್ಲವಿ ಗೌಡ ಈ 'ಸೇವಂತಿ' ಧಾರಾವಾಹಿಯ ನಾಯಕಿ. ಶಿಶಿರ್ ಶಾಸ್ತ್ರಿ ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಮಂಜುನಾಥ್ ಭಟ್, ಮೈಕೋ ಮಂಜು, ಕೃಷ್ಣ ಅಡಿಗ, ಹಂಸ, ಸಂಗೀತ, ರೂಪಾ ಪ್ರಭಾಕರ್ ಹಾಗೂ ಮುಂತಾದವರು ಅಭಿನಯಿಸಿದ್ದಾರೆ.