ಈ ಮೊದಲು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಧಾರಾವಾಹಿಗಳು ಪ್ರಸಾರವಾಗುತ್ತಿತ್ತು. ಆದರೆ ಈಗ ಶನಿವಾರವೂ ಧಾರಾವಾಹಿಗಳು ಪ್ರಸಾರವಾಗಲಿವೆ. ಜೀ ಕನ್ನಡ ವಾಹಿನಿ ವಾರದ 6 ದಿನಗಳೂ ಧಾರಾವಾಹಿಯನ್ನು ಪ್ರಸಾರ ಮಾಡಲಿದೆ.


ಸೋಮವಾರದಿಂದ ಶನಿವಾರದವರೆಗೆ ಸಂಜೆ 7 ರಿಂದ ರಾತ್ರಿ 10.30 ರವರೆಗೆ ಕಮಲಿ, ಪಾರು, ಗಟ್ಟಿಮೇಳ, ಜೊತೆ ಜೊತೆಯಲಿ, ನಾಗಿಣಿ 2, ಯಾರೇ ನೀ ಮೋಹಿನಿ, ಬ್ರಹ್ಮಗಂಟು ಈ ಎಲ್ಲಾ ಧಾರಾವಾಹಿಗಳು ಪ್ರಸಾರವಾಗಲಿವೆ. ಈ ಧಾರಾವಾಹಿಗಳೊಂದಿಗೆ ಮತ್ತಷ್ಟು ಹೊಸ ಧಾರಾವಾಹಿಗಳನ್ನು ಕೂಡಾ ಜೀ ಕನ್ನಡ ಪ್ರಾರಂಭಿಸಲಿದೆ. ಕನ್ನಡ ಕಿರುತರೆಯಲ್ಲಿ ಹೊಸ ಶಕೆಯನ್ನು ಆರಂಭಿಸಲು ಜೀ ಕನ್ನಡ ವಾಹಿನಿ ಪ್ರಯತ್ನಿಸುತ್ತಿದೆ.

- " class="align-text-top noRightClick twitterSection" data="
">
ವೀಕ್ಷಕರು ಕೂಡಾ ಇನ್ನು ಮುಂದೆ ವಾರದ 6 ದಿನಗಳೂ ಧಾರಾವಾಹಿಯನ್ನು ಎಂಜಾಯ್ ಮಾಡಬಹುದು. ಲಾಕ್ಡೌನ್ ನಂತರ ಧಾರಾವಾಹಿಗಳ ಸಮಯ ಬದಲಾಗಿದ್ದರೂ ಎಲ್ಲಾ ಧಾರಾವಾಹಿಗಳನ್ನು ವೀಕ್ಷಕರು ಅಪಾರ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

