ETV Bharat / sitara

ಬಿಗ್ ಬಾಸ್ ಸೀಸನ್ 8ರಿಂದ ರಾಜೀವ್ ಎಲಿಮಿನೇಟ್​​​! - big boss season 8

ಕಳೆದ ವಾರ ನೇರವಾಗಿ ನಾಮಿನೇಟ್ ಆಗುವ ಮೂಲಕ ರಾಜೀವ್ ಎಲಿಮಿನೇಶನ್​​ ಲಿಸ್ಟ್​​ನಲ್ಲಿದ್ದರು. ಆ ಸಂದರ್ಭದಲ್ಲಿ ಬಿಗ್ ಬಾಸ್, ಗೋಲ್ಡನ್ ಪಾಸ್ ಬಳಸುತ್ತೀರಾ ಎಂದು ಕೇಳಿದ್ದಕ್ಕೆ ರಾಜೀವ್​​​ ಆತ್ಮವಿಶ್ವಾಸದಿಂದ ಇಲ್ಲ ಎಂದಿದ್ದರು. ಆದ್ರೀಗ ಬಿಗ್ ಬಾಸ್ ಸೀಸನ್ 8ರಿಂದ ಎಲಿಮಿನೇಟ್​​ ಆಗಿ ಹೊರ ನಡೆದಿದ್ದಾರೆ.

rajeev
ರಾಜೀವ್
author img

By

Published : Apr 25, 2021, 1:47 PM IST

ಬಿಗ್ ಬಾಸ್ ಸೀಸನ್ 8ರಲ್ಲಿ ಅಚ್ಚರಿ ಎಲಿಮಿನೇಶನ್​ ಪ್ರಕ್ರಿಯೆ ಆಗಿದ್ದು, ರಾಜೀವ್ ಹೊರ ನಡೆದಿದ್ದಾರೆ.

ಹೌದು, ನಂಬಲು ಅಸಾಧ್ಯವಾದರೂ ಇದು ಸತ್ಯ. ಕಳೆದ ವಾರವಷ್ಟೇ ಗೋಲ್ಡನ್ ಪಾಸ್ ಪಡೆದುಕೊಂಡಿದ್ದ ರಾಜೀವ್, ಈ ವಾರ ಅತಿ ಕಡಿಮೆ ಮತಗಳನ್ನು ಪಡೆಯುವ ಮೂಲಕ ಎಲಿಮಿನೇಟ್ ಆಗಿದ್ದಾರೆ.

rajeev
ಬಿಗ್ ಬಾಸ್ ಸ್ಪರ್ಧಿ ರಾಜೀವ್

ಕಳೆದ ವಾರ ನೇರವಾಗಿ ನಾಮಿನೇಟ್ ಆಗುವ ಮೂಲಕ ರಾಜೀವ್ ಎಲಿಮಿನೇಶನ್​​ ಲಿಸ್ಟ್​​ನಲ್ಲಿದ್ದರು. ಆ ಸಂದರ್ಭದಲ್ಲಿ ಬಿಗ್ ಬಾಸ್, ಗೋಲ್ಡನ್ ಪಾಸ್ ಬಳಸುತ್ತೀರಾ ಎಂದು ಕೇಳಿದ್ದಕ್ಕೆ ರಾಜೀವ್​​​ ಆತ್ಮವಿಶ್ವಾಸದಿಂದ ಇಲ್ಲ ಎಂದಿದ್ದರು. ಆದರೆ, ಅದೇ ಅವರಿಗೆ ಮುಳುವಾಗಿದೆ.

ಬಿಗ್ ಬಾಸ್ ಮನೆಯಲ್ಲಿ 54 ದಿನಗಳನ್ನು ಕಳೆದಿರುವ ರಾಜೀವ್, ಮನೆಯ ಸದಸ್ಯರಲ್ಲಿ ಕೆಲವೇ ಕೆಲವು ಮಂದಿಯ ಜೊತೆ ಕಾಲ ಕಳೆಯುತ್ತಿದ್ದರು. ಆಟಗಳಲ್ಲಿ ಮಾತ್ರ ಸಾಮರ್ಥ್ಯ ತೋರಿಸುತ್ತಿದ್ದರು. ನಿನ್ನೆಯಷ್ಟೇ ರಾಜೀವ್ ಕ್ಯಾಪ್ಟನ್ ಆಗುವ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ರೀಗ ಬಿಗ್ ಬಾಸ್ ಸೀಸನ್ 8ರಿಂದ ಎಲಿಮಿನೇಟ್​​ ಆಗಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಎಂಟನೇ ವಾರದ ಕ್ಯಾಪ್ಟನ್ ಆದ ರಘು... ಪ್ರಶಾಂತ್​ ನಡೆಗೆ ರಾಜೀವ್​ ಆಕ್ಷೇಪ

ಈ ವಾರವೂ ನಟ ಸುದೀಪ್ ನಿರೂಪಣೆ ಇಲ್ಲ.‌ ಕಳೆದ ವಾರದಂತೆ ಬಿಗ್ ಬಾಸ್ ಎಲಿಮಿನೇಟ್ ಆಗುವ ಸ್ಪರ್ಧಿಯ ವಿಡಿಯೋವನ್ನು ಟಿವಿಯಲ್ಲಿ ಹಾಕಿದ್ದರು. ಅಂತಿಮವಾಗಿ ಮನೆಯ ಸದಸ್ಯರಿಗೆ ‌ರಾಜೀವ್ ಎಲಿಮಿನೇಶನ್​​​ ಆಶ್ಚರ್ಯ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.