ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳಗೌರಿ ಮದುವೆ' ಧಾರಾವಾಹಿಯಲ್ಲಿ ವಿಲನ್ ಸೌಂದರ್ಯ ಆಗಿ ನಟಿಸುತ್ತಿದ್ದ ರಾಧಿಕಾ ತಮ್ಮ ಪಾತ್ರದಿಂದ ಹೊರಹೋಗಿದ್ದು ಆ ಜಾಗಕ್ಕೆ ಕೊಡಗು ಸುಂದರಿ ತನಿಷಾ ಬಂದಿರುವುದು ತಿಳಿದ ವಿಚಾರ. ಇದೀಗ ತಾವು ಧಾರಾವಾಹಿಯನ್ನು ತೊರೆದಿದ್ದು ಏಕೆ ಎಂಬುದರ ಬಗ್ಗೆ ರಾಧಿಕಾ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ರಾಧಿಕಾ, 'ನಮಸ್ತೆ ಇದು ನನ್ನ ಜೀವನದ ಅತ್ಯಂತ ಬೇಸರದ ದಿನ. 'ಮಂಗಳಗೌರಿ ಮದುವೆ ' ಎಂಬ ಅದ್ಭುತ ಧಾರಾವಾಹಿಯಿಂದ ನಾನು ಹೊರಬಂದ ದಿನ. ವೈಯಕ್ತಿಕ ಕಾರಣಗಳಿಂದ ಈ ಧಾರಾವಾಹಿಯಿಂದ ಹೊರ ಹೋಗುತ್ತಿದ್ದೇನೆ. ನನ್ನ ಪಾತ್ರಕ್ಕೆ ಸೌಂದರ್ಯ ಎಂದು ನಾಮಕರಣ ಮಾಡಿದ ರಾಮ್ ಜೀ ಸರ್, ಆ ಪಾತ್ರವನ್ನು ನಿಮ್ಮೆಲ್ಲರ ಮನೆ ಮನಗಳಿಗೆ ಮುಟ್ಟುವಂತೆ ಮಾಡಿದ ಕಲರ್ಸ್ ಕನ್ನಡ ವಾಹಿನಿ ಹಾಗೂ ಅದನ್ನು ಪ್ರೀತಿಸಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ನಾನು ಚಿರಋಣಿ.
- " class="align-text-top noRightClick twitterSection" data="
">
ಸೌಂದರ್ಯ ಒಂದು ಪಾತ್ರ ಮಾತ್ರವಲ್ಲ. ಅದು ಒಂದು ನವರಸಗಳ ದರ್ಶನ. ಆ ನವರಸಗಳನ್ನು ಒಂದೇ ಪಾತ್ರದಲ್ಲಿ ಅಭಿನಯಿಸಿ ನಿಮ್ಮೆಲ್ಲರ ಪ್ರೀತಿ ಸಂಪಾದಿಸಿದ ನನಗೆ ನನ್ನ ಶಕ್ತಿಯ ಪರಿಚಯವಾಯಿತು. ಕೆಲವು ವರ್ಷಗಳಿಂದ ನನ್ನ ಕನಸಾಗಿದ್ದ ಸೌಂದರ್ಯ ಪಾತ್ರ ಇನ್ನು ಮುಂದೆ ನೆನಪಾಗಿ ಉಳಿಯುತ್ತಿದೆ. ನಿಮ್ಮೆಲ್ಲರ ಮುಂದೆ ಮತ್ತೆ ಹೊಸ ರೂಪದಲ್ಲಿ ಹೊಸ ಹೆಸರಿನಲ್ಲಿ ಬರುತ್ತೇನೆ, ಇಂತಿ ನಿಮ್ಮ ಪ್ರೀತಿಯ ಸೌಂದರ್ಯ ' ಎಂದು ಬರೆದುಕೊಂಡಿದ್ದಾರೆ.
ಸದ್ಯ ಕಿರುತೆರೆಯಿಂದ ಹೊರಬಂದಿರುವ ರಾಧಿಕಾ ಅವರು ಮುಂದೆ ಹೊಸ ಪ್ರಾಜೆಕ್ಟ್ ಮಾಡಬೇಕೆಂಬ ಆಸೆಯಲ್ಲಿದ್ದಾರೆ. ಕಿರುತೆರೆ ಜೊತೆಗೆ ಈಗಾಗಲೇ ಬೆಳ್ಳಿತೆರೆಗೂ ಕಾಲಿಟ್ಟಾಗಿದೆ ರಾಧಿಕಾ. ವಿನಯ್ ರಾಜ್ಕುಮಾರ್ ಅಭಿನಯದ 'ಗ್ರಾಮಾಯಣ' ಸಿನಿಮಾದಲ್ಲಿ ಬಣ್ಣ ಹಚ್ಚಿರುವ ರಾಧಿಕಾ, ಕೆಲವು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಕಿರುತೆರೆ ನಟ, ನಿರ್ದೇಶಕ ಶ್ರವಂತ್ ಅವರ ಜೊತೆ ಸಪ್ತಪದಿ ತುಳಿದಿರುವ ರಾಧಿಕಾ ಮಿಂಚು ಇದೀಗ ರಾಧಿಕಾ ಶ್ರವಂತ್ ಆಗಿ ಬದಲಾಗಿದ್ದಾರೆ.