ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಪ್ರೇಮಲೋಕ' ತನ್ನ ಪಯಣ ನಿಲ್ಲಿಸುತ್ತಿದೆ. ಪ್ರೇಮಲೋಕವು ಹಿಂದಿಯ 'ಕಸೌಟಿ ಜಿಂದಗಿ ಕೆ' ಧಾರಾವಾಹಿಯ ರೀಮೇಕ್ ಆಗಿದ್ದು ಕಳೆದ ವರ್ಷ ಜೂನ್ನಲ್ಲಿ ಪ್ರಸಾರ ಆರಂಭಿಸಿತ್ತು. ಆರಂಭದಲ್ಲಿ ಈ ಧಾರಾವಾಹಿ ವೀಕ್ಷಕರನ್ನು ಸೆಳೆದರೂ ಕೊನೆಯವರೆಗೂ ಅವರನ್ನು ಹಿಡಿದಿಟ್ಟುಕೊಳ್ಳಲಾಗಲಿಲ್ಲ.

ಲಾಕ್ಡೌನ್ ಸಮಯದಲ್ಲಿ ಕನ್ನಡ ಕಿರುತೆರೆಯ ಸುಮಾರು 30ಕ್ಕೂ ಹೆಚ್ಚು ಧಾರಾವಾಹಿಗಳು ಪ್ರಸಾರ ನಿಲ್ಲಿಸಿದ್ದವು. ಇದೀಗ ಆ ಸಾಲಿಗೆ ಪ್ರೇಮಲೋಕ ಕೂಡಾ ಸೇರಿದೆ. ಪ್ರೇಮಲೋಕದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ವಿಜಯ್ ಸೂರ್ಯ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. "ಎಲ್ಲವೂ ಕೊನೆಯಾಗುತ್ತಿದೆ. ಇಷ್ಟು ದಿನ ಧಾರಾವಾಹಿ ನೋಡಿ ಪ್ರೋತ್ಸಾಹ ನೀಡಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಹೇಳುತ್ತಿದ್ದೇನೆ. ಈ ಜರ್ನಿ ಇಷ್ಟೊಂದು ಸುಂದರವಾಗಿದೆ ಎಂದರೆ ಅದಕ್ಕೆ ನೀವೇ ಕಾರಣ. ನಿಮ್ಮ ಪ್ರೋತ್ಸಾಹ, ಬೆಂಬಲವಿಲ್ಲದಿದ್ದರೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ ಲವ್ ಯೂ " ಎಂದು ಅವರು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ವೀಕ್ಷಕರ ಕೊರತೆಯಿಂದ ಪ್ರೇಮಲೋಕ ಮುಕ್ತಾಯಗೊಳ್ಳುತ್ತಿದೆ. ಇದೇ ಅಕ್ಟೋಬರ್ 3 ರಂದು ಧಾರಾವಾಹಿಯ ಕೊನೆಯ ಶೂಟಿಂಗ್ ನಡೆದಿತ್ತು. ಧಾರಾವಾಹಿಯಲ್ಲಿ ವಿಜಯ್ ಸೂರ್ಯ ನಾಯಕ ಸೂರ್ಯಕಾಂತ್ ಆಗಿ ನಟಿಸಿದ್ದರೆ ನಾಯಕಿ ಪ್ರೇರಣ ಆಗಿ ಅಂಕಿತ ನವ್ಯಾ ಗೌಡ ನಟಿಸಿದ್ದರು. ಉಳಿದಂತೆ ಬಾಲರಾಜ್, ವಾಣಿಶ್ರೀ, ಅನಿಕಾ ಸಿಂಧ್ಯ, ಮಾಲತಿ ಸರ್ದೇಶ್ಪಾಂಡೆ, ರವಿ ಭಟ್ ಹಾಗೂ ಇನ್ನಿತರರು ನಟಿಸಿದ್ದರು. ಧಾರಾವಾಹಿ ಮುಕ್ತಾಯಗೊಳ್ಳುತ್ತಿರುವುದಕ್ಕೆ ಇತರ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
