ETV Bharat / sitara

'ಆರ್ಯವರ್ಧನ್' ತಾಯಿಯಾಗಿ ಮತ್ತೆ ಕಿರುತೆರೆಗೆ ಮರಳಿದ ಪದ್ಮಜಾ ರಾವ್ - ಮತ್ತೆ ಕಿರುತೆರೆಗೆ ಮರಳಿದ ಪದ್ಮಜಾ ರಾವ್

ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ಪೋಷಕ ನಟಿ ಪದ್ಮಜಾ ರಾವ್ 'ಜೊತೆ ಜೊತೆಯಲಿ' ಧಾರವಾಹಿಗೆ ಎಂಟ್ರಿ ಕೊಟ್ಟಿದ್ದು, ಆರ್ಯವರ್ಧನ್ ತಾಯಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

Actress Padmaja Rao
ಮತ್ತೆ ಕಿರುತೆರೆಗೆ ಮರಳಿದ ಪದ್ಮಜಾ ರಾವ್
author img

By

Published : Apr 8, 2021, 8:47 AM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆರೂರು ಜಗದೀಶ್ ನಿರ್ದೇಶನದ 'ಜೊತೆಜೊತೆಯಲಿ' ಧಾರಾವಾಹಿ ಕಿರುತೆರೆ ಲೋಕದಲ್ಲಿ ಇತಿಹಾಸ ಸೃಷ್ಟಿಸಿದೆ.‌ ಧಾರಾವಾಹಿಯೊಂದು ಅತಿ ಹೆಚ್ಚು ಜನಮನ್ನಣೆ ಪಡೆದುಕೊಂಡಿರುವುದು ಇದೇ ಮೊದಲು ಎನ್ನಬಹುದು. ಅಷ್ಟರ ಮಟ್ಟಿಗೆ ಈ ಧಾರಾವಾಹಿ ಪ್ರೇಕ್ಷಕರನ್ನು ಮೋಡಿ ಮಾಡಿದೆ. ಇದೀಗ ಈ ಧಾರಾವಾಹಿಗೆ ಹೊಸ ನಟಿಯ ಆಗಮನವಾಗಿದೆ.

ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ಪೋಷಕ ನಟಿ ಪದ್ಮಜಾ ರಾವ್ ಜೊತೆ ಜೊತೆಯಲಿ ಧಾರವಾಹಿಗೆ ಎಂಟ್ರಿ ಕೊಟ್ಟಿದ್ದು, ಆರ್ಯವರ್ಧನ್ ತಾಯಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

ಮನೋಜ್ಞ ನಟನೆಯ ಮೂಲಕ ಬಣ್ಣದ ಲೋಕದಲ್ಲಿ ಮನೆ ಮಾತಾಗಿರುವ ಪದ್ಮಜಾ ರಾವ್, ಕಿರುತೆರೆಗೆ ಹೊಸಬರೇನಲ್ಲ. ವೈಶಾಲಿ ಕಾಸರವಳ್ಳಿ ನಿರ್ದೇಶನದ ಮೂಡಲಮನೆ ಧಾರಾವಾಹಿಯ ಶಕ್ಕು ಆಗಿ ಬಣ್ಣದ ಪಯಣ ಶುರು ಇವರು, ಮುಂದೆ ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯಲ್ಲಿ ಅಭಿನಯಿಸಿದರು. ಬಳಿಕ ಹಠವಾದಿ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಪದ್ಮಜಾ, ಆನಂತರ ಮುಂಗಾರು ಮಳೆ, ಗಾಳಿಪಟ, ಮೈಲಾರಿ, ಶಿವ, ವರದನಾಯಕ, ಬಚ್ಚನ್, ಬ್ರಹ್ಮಚಾರಿ, ರುಸ್ತುಂ, ಆರೆಂಜ್ ಸೇರಿದಂತೆ ನಲುವತ್ತಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ‌.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಮನೆ ಗಿಳಿ ಧಾರಾವಾಹಿಯಲ್ಲಿ ಮೀನಾಕ್ಷಿ ಪಾತ್ರಧಾರಿಯಾಗಿ ವೀಕ್ಷಕರನ್ನು ರಂಜಿಸುತ್ತಿದ್ದ ಪದ್ಮಜಾ, ಸಣ್ಣ ಬ್ರೇಕ್​ನ ನಂತರ ಕಿರುತೆರೆಗೆ ಮರಳಿದ್ದಾರೆ.

ಇದನ್ನೂ ಓದಿ: ಶೇ.100 ಆಸನ ಭರ್ತಿಗೆ ಅವಕಾಶ ಕೊಟ್ಟಾಗಲೇ 'ನಿನ್ನ ಸನಿಹಕೆ' ಚಿತ್ರ ರಿಲೀಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.