ETV Bharat / sitara

ಚಾಟ್ ಕಾರ್ನರ್​​ನಲ್ಲಿ ಚಂದನ್​​​​-ನೇಹಾಗೌಡ ಪ್ರೇಮಪುರಾಣ - Neha gowda love story

ಶಾಲಾ ವಾರ್ಷಿಕೋತ್ಸವದ ಡ್ಯಾನ್ಸ್​​​​​​​ ಕಾರ್ಯಕ್ರಮವನ್ನು ನೆನಪಿಸಿಕೊಂಡಿರುವ ನೇಹಾಗೌಡ, ಚಂದನ್ ನನ್ನ ಡ್ಯಾನ್ಸ್ ಪಾರ್ಟ್ನರ್​ ಆಗಿದ್ದರು,ಟೀಚರ್ ಬಳಿ ಹೋಗಿ ಆತ ನನಗೆ ಪಾರ್ಟ್ನರ್ ಆಗುವುದು ಬೇಡ ಎಂದು ಮನವಿ ಮಾಡಿದ್ದೆ. ಆದರೆ ಈಗ ಅವರೇ ನನ್ನ ಲೈಫ್ ಪಾರ್ಟ್ನರ್ ಆಗಿದ್ದಾರೆ ಎಂದು ಚಾಟ್​ ಕಾರ್ನರ್​​ನಲ್ಲಿ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

Neha gowda love story in Chat corner
ಚಂದನ್-ನೇಹಾ
author img

By

Published : Dec 15, 2020, 2:27 PM IST

'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಗೊಂಬೆ ಆಲಿಯಾಸ್ ಶ್ರುತಿ ಆಗಿ ನಟಿಸಿ ಸೀರಿಯಲ್ ಪ್ರಿಯರ ಮನ ಸೆಳೆದಿರುವ ನಟಿ ನೇಹಾ ಗೌಡ ತಮ್ಮ ಪತಿ ಚಂದನ್ ಜೊತೆಗಿನ ಲವ್ ಸ್ಟೋರಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವಿಭಿನ್ನ ಶೋ 'ಚಾಟ್ ಕಾರ್ನರ್' ನಲ್ಲಿ ಇತ್ತೀಚೆಗಷ್ಟೇ ನೇಹಾ ತಮ್ಮ ಪತಿಯೊಂದಿಗೆ ಭಾಗವಹಿಸಿದ್ದು ಪ್ರೇಮಪುರಾಣವನ್ನು ಬಿಚ್ಚಿಟ್ಟಿದ್ದಾರೆ.

Neha gowda love story in Chat corner
ನೇಹಾಗೌಡ-ಚಂದನ್

ಇದನ್ನೂ ಓದಿ: 33 ವರ್ಷಗಳ ನಂತರ ಆ ದೊಡ್ಡ ಹೋಟೆಲ್​​​ನಲ್ಲಿ ಚಿತ್ರೀಕರಣವಾಗುತ್ತಿದೆ 'ಜೇಮ್ಸ್' ಸಿನಿಮಾ..!

ನೇಹಾಗೆ ಚಂದನ್ ಶಾಲಾದಿನಗಳಿಂದಲೂ ಪರಿಚಯ. ಚಂದನ್ ಶಾಲೆಯಲ್ಲಿರುವಾಗಲೇ ಐ ಲವ್ ಯೂ ಎಂದು ಪೇಪರ್ ಮೇಲೆ ಬರೆದು ಅದನ್ನು ಬಾಲ್​​​​​​​​​​​ನಂತೆ ಮಾಡಿ ಅದನ್ನು ನೇಹಾ ಮೇಲೆ ಎಸೆಯುತ್ತಿದ್ದರಂತೆ. " ನರ್ಸರಿಯಿಂದ ಹೈಸ್ಕೂಲ್​​​​​​​​​​​​​​ವರೆಗೂ ನಾವಿಬ್ಬರೂ ಒಂದೇ ಶಾಲೆಯಲ್ಲಿ ಕಲಿಯುತ್ತಿದ್ದು ನಾವು ಆ ದಿನಗಳಲ್ಲಿ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಆದರೆ ವ್ಯಾಲೆಂಟೈನ್ಸ್ ಡೇ ಹಾಗೂ ಬರ್ತ್​ಡೇಗೆ ಪರಸ್ಪರ ವಿಶ್ ಮಾಡುತ್ತಿದ್ದೆವು" ಎಂದಿದ್ದಾರೆ. ನೇಹಾಗೆ ಶಾಲಾ ದಿನಗಳಲ್ಲಿ ಚಂದನ್ ಕಂಡರೆ ಇಷ್ಟವೇ ಇರಲಿಲ್ಲವಂತೆ. ಶಾಲಾ ವಾರ್ಷಿಕೋತ್ಸವದ ನೃತ್ಯ ಪ್ರದರ್ಶನವನ್ನು ನೆನಪಿಸಿಕೊಂಡಿರುವ ಅವರು, ಆ ಸಮಯದಲ್ಲಿ ಚಂದನ್ ನನ್ನ ಡ್ಯಾನ್ಸ್ ಪಾರ್ಟ್ನರ್​ ಆಗಿದ್ದರು,ಟೀಚರ್ ಬಳಿ ಹೋಗಿ ಆತ ನನಗೆ ಪಾರ್ಟ್ನರ್ ಆಗುವುದು ಬೇಡ ಎಂದು ಮನವಿ ಮಾಡಿದ್ದೆ. ಆದರೆ ಈಗ ಅವರೇ ನನ್ನ ಲೈಫ್ ಪಾರ್ಟ್ನರ್ ಆಗಿದ್ದಾರೆ ಎಂದು ಹಳೆಯದನ್ನು ನೆನಪಿಸಿಕೊಂಡಿದ್ದಾರೆ.

Neha gowda love story in Chat corner
ಬಾಲ್ಯಸ್ನೇಹಿತರಾಗಿದ್ದ ಚಂದನ್-ನೇಹಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.