ವಿಭಿನ್ನವಾಗಿ ವೀಕ್ಷಕರನ್ನು ಸೆಳೆಯುವ ಪ್ರಯತ್ನ ಝೀ ವಾಹಿನಿಯ ನಾಗಿಣಿ-2 ಧಾರಾವಾಹಿಯಲ್ಲಿ ನಡೆದಿದೆ. ಧಾರಾವಾಹಿಯ ಮುಖ್ಯ ಪಾತ್ರಧಾರಿಗಳಾದ ತ್ರಿಶೂಲ್ ಮತ್ತು ಶಿವಾನಿ ಮದುವೆಯ ಅರತಕ್ಷತೆಯನ್ನು ಮಂಡ್ಯದಲ್ಲಿ ಅದ್ಧೂರಿಯಾಗಿ ನೆರವೇರಿಸಲಾಗಿದೆ.
![Nagaini -2 serial reception held with fans](https://etvbharatimages.akamaized.net/etvbharat/prod-images/kn-bng-02-nagini2-reciption-photo-ka10018_07042021141719_0704f_1617785239_1102.jpg)
ಶಿವಾನಿ ಪಾತ್ರಕ್ಕೆ ನಮೃತಾ ಗೌಡ ಬಣ್ಣ ಹಚ್ಚಿದ್ದು, ತ್ರಿಶೂಲ್ ಪಾತ್ರದಲ್ಲಿ ನಿನಾದ್ ಅಭಿನಯಿಸುತ್ತಿದ್ದಾರೆ. ಇಬ್ಬರ ಮದುವೆ ದೃಶ್ಯಗಳನ್ನು ಅದ್ಧೂರಿಯಾಗಿ ಚಿತ್ರಿಸಲಾಗಿದೆ. ಅದರ ಜೊತೆಗೆ ಆರತಕ್ಷತೆ ಕಾರ್ಯಕ್ರಮವನ್ನು ಅಭಿಮಾನಿಗಳೊಂದಿಗೆ ಚಿತ್ರೀಕರಿಸಲಾಗಿದೆ.
![Nagaini -2 serial reception held with fans](https://etvbharatimages.akamaized.net/etvbharat/prod-images/kn-bng-02-nagini2-reciption-photo-ka10018_07042021141719_0704f_1617785239_917.jpg)
ಮಂಡ್ಯದಲ್ಲಿ ಇದರ ಶೂಟಿಂಗ್ ನಡೆದಿದ್ದು, ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು. 'ನಾಗಿಣಿ 2' ಧಾರಾವಾಹಿಗೆ ದೊಡ್ಡ ವೀಕ್ಷಕ ವರ್ಗವಿದೆ. ಈ ಸೀರಿಯಲ್ ಕಲಾವಿದರನ್ನು ಭೇಟಿ ಮಾಡಬೇಕು ಮತ್ತು ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಎಂಬುವುದು ಅನೇಕ ಅಭಿಮಾನಿಗಳ ಆಸೆಯಾಗಿತ್ತು. ಅದರಂತೆಯೇ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.
![Nagaini -2 serial reception held with fans](https://etvbharatimages.akamaized.net/etvbharat/prod-images/kn-bng-02-nagini2-reciption-photo-ka10018_07042021141719_0704f_1617785239_507.jpg)
ಮಂಡ್ಯದ ಅನೇಕ ಅಭಿಮಾನಿಗಳ ಮನೆಗೆ ತೆರಳಿದ್ದ ಧಾರಾವಾಹಿ ತಂಡ, ಮಿಸ್ ಕಾಲ್ ನೀಡುವ ಸ್ಪರ್ಧೆ ಆಯೋಜಿಸಿತ್ತು. ಅದರಲ್ಲಿ ಆಯ್ಕೆ ಆದವರಿಗೆ ಈ ಆರತಕ್ಷತೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಯಿತು. ಇದು ತಮ್ಮದೇ ಕುಟುಂಬದ ಸಮಾರಂಭ ಎಂಬ ರೀತಿಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದರು. 'ನಾಗಿಣಿ 2' ತಂಡದವರ ಜೊತೆ ವೀಕ್ಷಕರು ಸಂವಾದ ಕೂಡ ನಡೆಸಿದರು.
![Nagaini -2 serial reception held with fans](https://etvbharatimages.akamaized.net/etvbharat/prod-images/kn-bng-02-nagini2-reciption-photo-ka10018_07042021141719_0704f_1617785239_92.jpg)
ಆರತಕ್ಷತೆಗೆ ಬಂದವರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆಗಮಿಸಿದ್ದ ಎಲ್ಲಾ ಅಭಿಮಾನಿಗಳಿಗೆ ಬಾಳೆ ಎಲೆಯಲ್ಲಿ ಶ್ಯಾವಿಗೆ ಪಾಯಸದ ಭರ್ಜರಿ ಭೋಜನ ಬಡಿಸಲಾಯಿತು. ಒಟ್ಟಿನಲ್ಲಿ ಅಭಿಮಾನಿಗಳ ಜೊತೆ ಸಂಬಂಧ ಗಟ್ಟಿಗೊಳಿಸಲು ಈ ಆರತಕ್ಷತೆ ಕಾರ್ಯಕ್ರಮ ನಡೆಸಲಾಯಿತು. ಈ ವಿಶೇಷ ಎಪಿಸೋಡ್ಗಳು ಶೀಘ್ರದಲ್ಲೇ ಪ್ರಸಾರ ಆಗಲಿವೆ.
![Nagaini -2 serial reception held with fans](https://etvbharatimages.akamaized.net/etvbharat/prod-images/kn-bng-02-nagini2-reciption-photo-ka10018_07042021141719_0704f_1617785239_37.jpg)