ETV Bharat / sitara

ಬಾಲಿವುಡ್ ಬೆಸ್ಟ್​ ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡ ಕರೀನಾ ಕಪೂರ್‌ - ನಟಿ ಕರೀನಾ ಕಪೂರ್‌

ನಟಿ ಕರೀನಾ ಕಪೂರ್‌ ಬಾಲಿವುಡ್​ ಸ್ನೇಹಿತೆಯರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವೊಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕರೀನಾ ಕಪೂರ್‌
ಕರೀನಾ ಕಪೂರ್‌
author img

By

Published : Jan 9, 2021, 1:10 PM IST

ಮುಂಬೈ: ಬಾಲಿವುಡ್ ಯಂಗ್ ಮಮ್ಮಿ ಕರೀನಾ ಕಪೂರ್‌ ಗರ್ಭಿಣಿಯಾದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಸ್ನೇಹಿತರೊಂದಿಗೆ ಸೇರಿ ಕಳೆದ ಸುಂದರ ಕ್ಷಣದ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕರೀನಾ ಕಪೂರ್ ಶೇರ್​ ಮಾಡಿರುವ ಫೋಟೋ
ಕರೀನಾ ಕಪೂರ್ ಶೇರ್​ ಮಾಡಿರುವ ಫೋಟೋ

ಹೌದು, ಇತ್ತೀಚಿಗೆ ಕರೀನಾ ಕಪೂರ್‌ ವರ್ಕೌಟ್ ಮಾಡುವಾಗ ಸೆರೆ ಹಿಡಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಬಾಲಿವುಡ್​ನ ಸ್ನೇಹಿತೆಯರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ. ಆದರೆ, ಈ ಫೋಟೋ ಗರ್ಭಿಣಿಯಾಗುವುದಕ್ಕೂ ಮೊದಲಿನದು ಎನ್ನಲಾಗಿದೆ.

ಕರೀನಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಸಾಕಷ್ಟು ಫೋಟೋಗಳು, ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಅವರ ಕಾರ್ಯ ಚಟುವಟಿಕೆಗಳ ಕುರಿತು ಅಭಿಮಾನಿಗಳಿಗೆ ಮಾಹಿತಿ ಅಪ್ಡೇಟ್​ ಮಾಡುತ್ತಿರುತ್ತಾರೆ. ತುಂಬಾ ದಿನಗಳ ನಂತರ ಸ್ನೇಹಿತೆಯರ ಜೊತೆಗಿನ ಫೋಟೋವನ್ನು ಫೋಸ್ಟ್​ ಮಾಡಿದ್ದು, ಮಲೈಕಾ ಅರೋರಾ, ಅಮೃತ ಅರೋರಾ, ಮಲ್ಲಿಕಾ ಭಟ್ ಮತ್ತು ನತಾಶಾ ಪೂನವಾಲ್ಲಾ ಅವರೊಂದಿಗೆ ನಟಿ ಕರೀನಾ ಕಪೂರ್‌ ಕಾಣಿಸಿಕೊಂಡಿದ್ದಾರೆ. ಫೋಟೋದಲ್ಲಿ ಕರೀನಾ ನೀಲಿ ಬಣ್ಣದ ಉಡುಪನ್ನು ಧರಿಸಿದ್ದು, ಅಭಿಮಾನಿಗಳು ಕಮೆಂಟ್ಸ್‌ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.