ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸಂಗೀತ ರಿಯಾಲಿಟಿ ಶೋ 'ಕನ್ನಡ ಕೋಗಿಲೆ' ಯಶಸ್ವಿ ಎರಡು ಸೀಸನ್ಗಗಳನ್ನು ಮುಗಿಸಿರುವುದು ಎಲ್ಲರಿಗೂ ತಿಳಿದೇ ಇದೆ. ಇದರ ಜೊತೆಗೆ ಮತ್ತಷ್ಟು ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ 'ಕನ್ನಡ ಕೋಗಿಲೆ' ಸೂಪರ್ ಸೀಸನ್ ಆರಂಭವಾಗಿದೆ.
- " class="align-text-top noRightClick twitterSection" data="">
ಕನ್ನಡ ಕೋಗಿಲೆ ಸೀಸನ್ 1, ಸೀಸನ್ 2 ಹಾಗೂ ಕನ್ನಡದ ಇತರ ವಾಹಿನಿಗಳಲ್ಲಿ ನಡೆದ ಸಂಗೀತ ಸ್ಪರ್ಧೆಗಳಲ್ಲಿ ಅಂತಿಮ ಸ್ಪರ್ಧೆಯಲ್ಲಿ ರನ್ನರ್ ಅಪ್ ಆದವರು, ರೇಡಿಯೋ ಸಂಗೀತ ಷೋಗಳಲ್ಲಿ ಅಂತಿಮ ಹಂತದಲ್ಲಿ ಸ್ವಲ್ಪದರಲ್ಲೇ ಗೆಲುವಿನಿಂದ ದೂರವಾದವರು ಈ ‘ಸೂಪರ್ ಸೀಸನ್’ ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಾಧುಕೋಕಿಲ, ಅರ್ಚನಾ ಉಡುಪ ಮತ್ತು ಚಂದನ್ ಶೆಟ್ಟಿ ತೀರ್ಪುಗಾರರಾಗಿರುವ 'ಕನ್ನಡ ಕೋಗಿಲೆ' ಸೂಪರ್ ಸೀಸನ್, ಇದೀಗ ಫಿನಾಲೆ ಹಂತ ತಲುಪಿದೆ. ಆರ್ಜೆ ಸಿರಿ ನಿರೂಪಣೆಯಲ್ಲಿ ಇಂದು ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಫಿನಾಲೆ ಕಾರ್ಯಕ್ರಮ ಪ್ರಸಾರವಾಗಲಿದೆ. ನಿತಿನ್ ರಾಜಾರಾಮ್ ಶಾಸ್ತ್ರಿ, ದರ್ಶಿನಿ ಶೆಟ್ಟಿ, ಅನಂತರಾಜ್ ಮಿಸ್ಟ್ರಿ, ಅರುಂಧತಿ ವಸಿಷ್ಠ ಮತ್ತು ಅಖಿಲಾ ಪಜಿಮಣ್ಣು ಫಿನಾಲೆ ಘಟ್ಟ ತಲುಪಿದ್ದು 'ಕನ್ನಡ ಕೋಗಿಲೆ' ಸೂಪರ್ ಸೀಸನ್ ವಿಜೇತರಾಗಿ ಯಾವ ಕೋಗಿಲೆ ಆಯ್ಕೆ ಆಗಲಿದೆ ಎಂಬುದನ್ನು ನಾಳೆವರೆಗೂ ಕಾದುನೋಡಬೇಕು.