ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅರವಿಂದ್ ಕೌಶಿಕ್ ನಿರ್ದೇಶನದ ಜನಪ್ರಿಯ ಧಾರಾವಾಹಿ 'ಕಮಲಿ' ಯಶಸ್ವಿ 500 ಸಂಚಿಕೆಗಳನ್ನು ಪೂರೈಸಿದೆ. ವಿಭಿನ್ನ ಕಥೆಯ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿರುವ ಈ ಧಾರಾವಾಹಿಯಲ್ಲಿ ನಾಯಕ ರಿಷಿ ಮತ್ತು ನಾಯಕಿ ಕಮಲಿಯ ಪ್ರೀತಿಯನ್ನು ನೋಡುವುದೇ ಚೆಂದ.
- View this post on Instagram
ಕಮಲಿ ಮಹಾಜನ್ ಮನೆಯ ಹಿರಿ ಮೊಮ್ಮಗಳು ಅನ್ನೋ ಸತ್ಯ ಗೊತ್ತಾಯ್ತು! #Kamali #ZeeKannada ಇಂದು ರಾತ್ರಿ 7ಕ್ಕೆ
">
ಹಳ್ಳಿ ಹುಡುಗಿ ಕಮಲಿ, ವಿದ್ಯಾಭ್ಯಾಸ ಮಾಡಲು ಪಟ್ಟಣಕ್ಕೆ ಬರುತ್ತಾಳೆ. ಅಲ್ಲಿ ವಿಲನ್ ಅನಿಕಾಳಿಂದ ಸಾಕಷ್ಟು ಕಷ್ಟವನ್ನು ಕೂಡಾ ಅನುಭವಿಸುತ್ತಾಳೆ. ಆದರೆ ಪ್ರತಿ ಬಾರಿಯೂ ಕಷ್ಟದಿಂದ ಹೊರಬರುವ ಕಮಲಿ ಯಾವುದಕ್ಕೂ ಎದೆಗುಂದುವುದಿಲ್ಲ. ಬದಲಿಗೆ ಎಲ್ಲವನ್ನು ಸಲೀಸಾಗಿ ನಿಭಾಯಿಸುತ್ತಾಳೆ. ಮಾತ್ರವಲ್ಲ ಅನಿರೀಕ್ಷಿತವಾಗಿ ಇಂಗ್ಲೀಷ್ ಲೆಕ್ಚರರ್ ರಿಷಿಯೊಂದಿಗೆ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳೆ. ಇನ್ನು ಆಶ್ರಮದಲ್ಲಿ ಇರುವ ತನ್ನ ತಾಯಿ ಗೌರಿಯನ್ನು ಮನೆಗೆ ಬರುವಂತೆ ಕಮಲಿ ಒತ್ತಾಯಿಸುತ್ತಿರುವಾಗ ಗೌರಿ ಒಲ್ಲೆ ಎನ್ನುತ್ತಾಳೆ. ನಾನು ಬಂದರೆ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತಾಳೆ. ಆ ಸಮಯದಲ್ಲಿ ಆಶ್ರಮಕ್ಕೆ ಬರುವ ಸದಾನಂದ ಗೌರಿಯನ್ನು ಮತ್ತೆ ಮನೆಗೆ ಮರಳಿ ಬರುವಂತೆ ಒತ್ತಾಯ ಮಾಡುತ್ತಾನೆ.
![PC: Zee Kannada](https://etvbharatimages.akamaized.net/etvbharat/prod-images/kn-bng-04-kamali-500episode-photo-ka10018_15012020170206_1501f_1579087926_963.jpg)
ಇತ್ತ ಚಂದ್ರು ಮತ್ತು ಊರ್ಮಿಳಾಗೆ ಮರು ಮದುವೆ ಏರ್ಪಾಡಾಗಿರುತ್ತದೆ. ಇನ್ನು ತಾಳಿ ಕಟ್ಟಬೇಕು ಎನ್ನುವಾಗ ಕಮಲಿ ತಾಯಿ ಗೌರಿಯೊಂದಿಗೆ ಬಂದು ಮದುವೆ ನಿಲ್ಲಿಸುತ್ತಾಳೆ. ತಮ್ಮ ಮೊದಲ ಸೊಸೆ ಗೌರಿಯನ್ನು ನೋಡಿ ಅನ್ನಪೂರ್ಣಮ್ಮನಿಗೆ ಬಹಳ ಸಂತಸವಾಗುತ್ತದೆ. ಇದರೊಂದಿಗೆ ತಮ್ಮ ಪತಿ ಸದಾನಂದ ನಡೆಯುವುದು, ಮಾತನಾಡುವುದನ್ನು ನೋಡಿದಾಗ ಸಂತಸ ಅನ್ನಪೂರ್ಣಮ್ಮನಿಗೆ ಸಂತೋಷ ಇಮ್ಮಡಿಯಾಗುತ್ತದೆ. ಗೌರಿಯನ್ನು ನೋಡಿ ಅನ್ನಪೂರ್ಣಮ್ಮ ನಿಗೆ ಮಾತೇ ಬರುವುದಿಲ್ಲ. ಈ ಖುಷಿಯ ಜೊತೆ ಕಮಲಿಯೇ ತನ್ನ ಮೊಮ್ಮಗಳು ಎಂದು ತಿಳಿದಾಗ ಅವರು ಸಂತೋಷದಲ್ಲಿ ತೇಲಾಡುತ್ತಾರೆ. ನಂತರ ಅನ್ನಪೂರ್ಣಮ್ಮ ಚಂದ್ರು ಮತ್ತು ಗೌರಿಗೆ ಮರು ಮಾಂಗಲ್ಯಧಾರಣೆ ಮಾಡಿಸುತ್ತಾರೆ. ಮುಂದೇನಾಗುತ್ತದೆ, ಕಥೆ ಯಾವ ರೀತಿ ಸಾಗುತ್ತದೆ ಎಂದು ತಿಳಿಯಲು ನೀವು ಧಾರಾವಾಹಿಯ ಮುಂದಿನ ಎಪಿಸೋಡ್ಗಳನ್ನು ನೋಡಬೇಕು.