ETV Bharat / sitara

ಲಕ್ಷ್ಮಣ್​​ಗೆ ಕಬ್ಬಡ್ಡಿ ಟ್ರೈನರ್ ಆಗಿ ಕೆಲಸ ಮಾಡುತ್ತಿರುವ ಜಿಮ್ ರವಿ

ಜಿಮ್​ ರವಿ ನಟ ಮಾತ್ರವಲ್ಲದೆ ಅವರು ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲೂ ಭಾಗವಹಿಸಿದ್ದಾರೆ. ಬಿಗ್​​ಬಾಸ್​ಗೆ ಕೂಡಾ ಹೋಗಿ ಬಂದಿರುವ ರವಿ ಈಗ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಕಬ್ಬಡ್ಡಿ ಟ್ರೈನರ್ ಆಗಿ ನಟಿಸುತ್ತಿದ್ದಾರೆ.

author img

By

Published : Jul 18, 2020, 5:20 PM IST

Jym Ravi acting in Bramhagantu as Kabaddi trainer
ಜಿಮ್ ರವಿ

ಜಿಮ್ ರವಿ ಎಂದೇ ಖ್ಯಾತಿ ಪಡೆದ ಎ.ವಿ. ರವಿ ಇದೀಗ ಕಬ್ಬಡ್ಡಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ನಿಜ ಜೀವನದಲ್ಲಿ ಅಲ್ಲ, ಅವರು ಕೋಚ್ ಆಗಿ ಕೆಲಸ ಮಾಡುತ್ತಿರುವುದು 'ಬ್ರಹ್ಮಗಂಟು' ಧಾರಾವಾಹಿಯಲ್ಲಿ. ನಾಯಕ ಲಕ್ಷ್ಮಣ್ ಅಲಿಯಾಸ್ ಲಕ್ಕಿಗೆ ಅವರು ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ.

'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಕಬಡ್ಡಿ ಪ್ರೀಮಿಯರ್ ಲೀಗ್​ನಲ್ಲಿ 'ಬೆಂಗಳೂರು ಬ್ರೇವ್ಸ್' ಎಂಬ ತಂಡಕ್ಕೆ ರವಿ ಸ್ಟಿಕ್ಟ್​​​​​​​​​​​​​​​​​ ಕೋಚ್ ಆಗಿರುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ತಂಡದಂತೆಯೇ ಇಲ್ಲಿಯೂ ಕಬಡ್ಡಿ ಪ್ರೀಮಿಯರ್ ಲೀಗ್ ನಡೆಯಲಿದ್ದು, ಬೆಂಗಳೂರು, ಚೆನ್ನೈ, ಹೈದರಾಬಾದ್ ತಂಡಗಳು ಹಣಾಹಣಿ ನಡೆಸುತ್ತವೆ.

ಬ್ರಹ್ಮಗಂಟು ಧಾರಾವಾಹಿಯಲ್ಲಿ ಜಿಮ್ ರವಿ

ಜಿಮ್ ರವಿ ಟ್ರೈನರ್ ಹಾಗೂ ತಂಡದ ಕೋಚ್ ಆಗಿದ್ದು ಬಹಳ ಕಠಿಣ ಶಿಸ್ತಿನ ಮನುಷ್ಯ. ಯಾವುದಕ್ಕೂ ಆಯಾಸ, ಸುಸ್ತು ಎಂದರೆ ಸಹಿಸದ, ಗೆಲುವಿನ ಗುರಿಯನ್ನು ತಲುಪುವ ಬಹಳ ಕಟ್ಟುನಿಟ್ಟಿನ ಟ್ರೈನರ್. ಸಮಯ ಪಾಲನೆಯಲ್ಲೂ ಅತ್ಯಂತ ಬಿಗಿಯಾದ ನಿಲುವು ಹೊಂದಿದ ರವಿ ಅವರ ಪಾತ್ರ ಹಾಗೂ ಲಕ್ಕಿಯ ನಡುವೆ ಹಲವು ವಿಷಯಗಳ ಕುರಿತು ಸಂಘರ್ಷ ಉಂಟಾಗುತ್ತದೆ. ಆರಂಭದಲ್ಲಿ ಅವರು ಲಕ್ಕಿಯ ಭಿನ್ನಾಭಿಪ್ರಾಯಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರೂ ನಂತರ ಲಕ್ಕಿಯ ಪಾತ್ರದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.