ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕ್ಷಕರ ಮೆಚ್ಚಿನ ಸ್ಥಾನದಲ್ಲಿರುವ 'ಜೊತೆಜೊತೆಯಲಿ' ಧಾರಾವಾಹಿ ಆರಂಭವಾಗಿ ಒಂದು ವರ್ಷ ಕಳೆದಿದೆ. ಧಾರಾವಾಹಿ ಆರಂಭವಾಗಿ ಒಂದು ವರ್ಷ ಕಳೆದರೂ ನಾಯಕ ಆರ್ಯವರ್ಧನ್ ಹಾಗೂ ನಾಯಕಿ ಅನು ಸಿರಿಮನೆ ನಡುವಿನ ಪ್ರೇಮ ಒಂದು ಹಂತಕ್ಕೆ ಬಂದು ತಲುಪಿಲ್ಲ ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="
">
ಆರ್ಯವರ್ಧನ್ ಅನುವಿಗೆ ಪ್ರಪೋಸ್ ಮಾಡುತ್ತಾರಾ? ಅದನ್ನು ಅನು ಒಪ್ಪಿಕೊಳ್ಳುತ್ತಾಳಾ...? ಅವರಿಬ್ಬರೂ ಮದುವೆಯಾಗುತ್ತಾರಾ..? ಎಂಬ ಕುತೂಹಲ ವೀಕ್ಷಕರಿಗೆ ಇದೆ. ಇವರಿಬ್ಬರೂ ಒಂದಾಗುವುದನ್ನು ನೋಡಲು ಧಾರಾವಾಹಿಪ್ರಿಯರು ಒಂದು ವರ್ಷದಿಂದ ಕಾಯುತ್ತಿದ್ದಾರೆ. ಇನ್ನು ಧಾರಾವಾಹಿ ಆರಂಭದಲ್ಲಿ ಅನಿರುದ್ಧ್ ಹೆಲಿಕಾಪ್ಟರ್ನಲ್ಲಿ ಹೋಗುವ ದೃಶ್ಯವಿದೆ. ಇದೀಗ ಇಂತದ್ದೇ ಮತ್ತೊಂದು ದೃಶ್ಯ ಧಾರಾವಾಹಿಯಲ್ಲಿ ಪ್ರಸಾರವಾಗಬಹುದು ಎಂದು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಜೀ ವಾಹಿನಿ ಹಂಚಿಕೊಂಡಿರುವ ಪ್ರೋಮೋ ಇದಕ್ಕೆ ಕಾರಣ.

ಇನ್ನು ನಾಯಕ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಮಾತನಾಡಿ, ವೀಕ್ಷಕರ ಕುತೂಹಲಕ್ಕೆ, ಪ್ರಶ್ನೆಗಳಿಗೆ ಅತಿ ಶೀಘ್ರದಲ್ಲೇ ಉತ್ತರ ದೊರೆಯಲಿದೆ ಎಂದು ಹೇಳಿದ್ದಾರೆ. ಸಾಹಸಸಿಂಹ ಡಾ. ವಿಷ್ಣುವರ್ಧನ್ ನಟನೆಯ 'ಯಜಮಾನ' ಚಿತ್ರದ ಪ್ರೇಮ ಚಂದ್ರಮ ಹಾಡಿನ ತುಣುಕನ್ನೂ ಅನಿರುದ್ಧ್ ಹಾಡಿದ್ದಾರೆ.