ETV Bharat / sitara

ಮೂರು ಧಾರಾವಾಹಿಗಳ ಮಹಾಸಂಗಮದಲ್ಲಿ ಖ್ಯಾತ ಬಿಗ್​​ಬಾಸ್​​ ಸ್ಪರ್ಧಿ..! - Music director Vasuki Vaibhav

ಬಿಗ್​​ಬಾಸ್ ಸೀಸನ್ 7 ರಲ್ಲಿ ತಮ್ಮ ಹಾಡುಗಳಿಂದ ವೀಕ್ಷಕರನ್ನು ರಂಜಿಸಿದ್ದ ಸಂಗೀತ ನಿರ್ದೇಶಕ ವಾಸುಕಿ ವೈಭವ್, ಇದೀಗ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ಇದೇ ವಾರಾಂತ್ಯದಲ್ಲಿ ನಡೆಯಲಿರುವ ಮೂರು ಧಾರಾವಾಹಿಗಳ ಮಹಾಸಂಗಮದಲ್ಲಿ ವಾಸುಕಿ ವೈಭವ್ ಕೂಡಾ ಆಗಮಿಸಲಿದ್ದಾರೆ.

Music director Vasuki Vaibhav
ವಾಸುಕಿ ವೈಭವ್
author img

By

Published : Dec 12, 2020, 2:27 PM IST

'ಇನ್ನೂನು ಬೇಕಾಗಿದೆ.. ಒಲವು ಇನ್ನೂನು ಬೇಕಾಗಿದೆ..' ಎಂಬ ಹಾಡಿನ ಮೂಲಕ ಚಂದನವನದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ವಾಸುಕಿ ವೈಭವ್ ಮತ್ತಷ್ಟು ಜನಪ್ರಿಯರಾಗಿದ್ದು ಬಿಗ್​ಬಾಸ್​​​ಗೆ ಹೋಗಿಬಂದ ನಂತರ. ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿದ್ದ ವಾಸುಕಿ ವೈಭವ್ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ವಾಸುಕಿ ವೈಭವ್​, ದೊಡ್ಮನೆಯಲ್ಲಿದ್ದಾಗ ಅವರು ಬರೆದ, ಮನಸ್ಸಿಂದ ಯಾರೂನೂ ಕೆಟ್ಟೋರಲ್ಲ... ಹಾಡು ಬಹಳ ಜನಪ್ರಿಯತೆ ಪಡೆದುಕೊಂಡಿತ್ತು.ಮಾತ್ರವಲ್ಲ ವಾಸುಕಿ ವೈಭವ್ ಅವರ ಹುಟ್ಟುಹಬ್ಬದಂದು ಸ್ವತಃ ಸುದೀಪ್ ಅವರೇ ಈ ಹಾಡನ್ನು ಹಾಡುವ ಮೂಲಕ ವಾಸುಕಿ ವೈಭವ್ ಅವರಿಗೆ ಶುಭ ಕೋರಿದ್ದರು. ಇದೀಗ ವಾಸುಕಿ ವೈಭವ್ ಮತ್ತೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಲರ್ಸ್ ಕನ್ನಡದಲ್ಲಿ ಇದೇ ವಾರಾಂತ್ಯದಲ್ಲಿ ನಡೆಯಲಿರುವ ಮೂರು ಧಾರಾವಾಹಿಗಳ ಮಹಾಸಂಗಮದಲ್ಲಿ ವಾಸುಕಿ ವೈಭವ್ ಕಾಣಿಸಿಕೊಳ್ಳಲಿದ್ದಾರೆ.

Music director Vasuki Vaibhav
ಧಾರಾವಾಹಿಗಳ ಮಹಾಸಂಗಮದಲ್ಲಿ ವಾಸುಕಿ ವೈಭವ್

ಇದೇ ಭಾನುವಾರ ನಮ್ಮನೆ ಯುವರಾಣಿ, ಗಿಣಿರಾಮ ಹಾಗೂ ಹೂಮಳೆ ಧಾರಾವಾಹಿಯ ಸಂಗಮವಾಗಲಿದ್ದು ಅದರಲ್ಲಿ ವಾಸುಕಿ ವೈಭವ್ ಕೂಡಾ ಭಾಗವಹಿಸುತ್ತಿದ್ದಾರೆ. ಅಷ್ಟೇ ಅಲ್ಲ, ಹಾಡು ಹಾಡುವ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಆಗಿದ್ದು, ಸ್ವತಃ ಕಲರ್ಸ್ ನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಅವರೇ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ''ನಮಗೆಲ್ಲಾ ಒಂದು ವಿಷಯ ಸ್ಪಷ್ಟ ಮಾಡಿ ವಾಸುಕಿ, ಈ ಸಣ್ಣ ವಯಸ್ಸಿನಲ್ಲಿ ಇಷ್ಟು ಸೌಜನ್ಯ ಮತ್ತು ಇಷ್ಟೆಲ್ಲಾ ಪ್ರತಿಭೆ ಒಂಥರಾ ಅನ್ಯಾಯ ಅಲ್ವಾ?'' ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.