ETV Bharat / sitara

ಮಿಡ್​ನೈಟ್​ ಎಲಿಮಿನೇಷನ್​ನಲ್ಲಿ ದಿವ್ಯಾ ಸುರೇಶ್ ಔಟ್​: ಟಾಪ್ 5 ಸ್ಪರ್ಧಿಗಳು ಯಾರು? - Divya Suresh Eliminated in bigg boss season 8

'ಬಿಗ್ ಬಾಸ್ ಕನ್ನಡ ಸೀಸನ್​ - 8' ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಶುರುವಾಗಿದೆ. ಇದೀಗ ವಾರದ ಮಿಡ್​ನೈಟ್​ ಎಲಿಮಿನೇಷನ್​ನಲ್ಲಿ ದಿವ್ಯಾ ಸುರೇಶ್ ಮನೆಯಿಂದ ಹೊರ ಬಂದಿದ್ದು, ಟಾಪ್ 5 ಸ್ಪರ್ಧಿಗಳಾಗಿ ಅರವಿಂದ್, ದಿವ್ಯಾ ಉರುಡುಗ, ವೈಷ್ಣವಿ ಗೌಡ, ಮಂಜು ಪಾವಗಡ ಹಾಗೂ ಪ್ರಶಾಂತ್ ಸಂಬರಗಿ ಉಳಿದುಕೊಂಡಿದ್ದಾರೆ.

Divya Suresh
ದಿವ್ಯಾ ಸುರೇಶ್
author img

By

Published : Aug 4, 2021, 12:41 PM IST

'ಬಿಗ್ ಬಾಸ್ ಕನ್ನಡ ಸೀಸನ್​ - 8'ರ ಫಿನಾಲೆ ವಾರದ ಮಿಡ್​ನೈಟ್​ ಎಲಿಮಿನೇಷನ್​ನಲ್ಲಿ ದಿವ್ಯಾ ಸುರೇಶ್ ಮನೆಯಿಂದ ಹೊರ ಬಂದಿದ್ದಾರೆ. ಈ ಮೂಲಕ ಟಾಪ್ 5 ಸ್ಥಾನದಲ್ಲಿ ಕೆ ಪಿ ಅರವಿಂದ್, ದಿವ್ಯಾ ಉರುಡುಗ, ವೈಷ್ಣವಿ ಗೌಡ, ಮಂಜು ಪಾವಗಡ ಹಾಗೂ ಪ್ರಶಾಂತ್ ಸಂಬರಗಿ ಉಳಿದುಕೊಂಡಿದ್ದಾರೆ.

ದಿವ್ಯಾ ಸುರೇಶ್
ದಿವ್ಯಾ ಸುರೇಶ್

'ಬಿಗ್ ಬಾಸ್ ಕನ್ನಡ ಸೀಸನ್​ - 8' ಕಾರ್ಯಕ್ರಮ ಅಂತಿಮ ಹಂತ ತಲುಪಿದೆ. ಸದ್ಯಕ್ಕೆ ಕೊನೆಯ ವಾರ ಚಾಲ್ತಿಯಲ್ಲಿದ್ದು, ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಶುರುವಾಗಿದೆ. ಇದೇ ಶನಿವಾರ ಹಾಗೂ ಭಾನುವಾರ ನಡೆಯಲಿರುವ ಗ್ರಾಂಡ್ ಫಿನಾಲೆಯಲ್ಲಿ ಟಾಪ್ 5 ಸ್ಪರ್ಧಿಗಳು ಯಾರು ಎನ್ನುವುದು ಗೊತ್ತಾಗಿದೆ.

ಬಿಗ್ ಬಾಸ್ ಸೀಸನ್ 8 ರ ಕಟ್ಟಕಡೆಯ ಎಲಿಮಿನೇಷನ್ ಸುತ್ತು ಹಂತ ಹಂತವಾಗಿ ನಡೆಯಿತು. ದಿವ್ಯಾ ಸುರೇಶ್ ಹಾಗೂ ಪ್ರಶಾಂತ್ ಸಂಬರಗಿ ನಡುವೆ ನೇರ ಹಣಾಹಣಿ ಇತ್ತು. ಆದರೆ ಅಂತಿಮವಾಗಿ ದಿವ್ಯಾ ಸುರೇಶ್ ಮನೆಯಿಂದ ಹೊರಬಂದಿದ್ದಾರೆ.‌

ದಿವ್ಯಾ ಸುರೇಶ್
ದಿವ್ಯಾ ಸುರೇಶ್

ದಿವ್ಯಾ ಸುರೇಶ್ ಆಸೆ ಈಡೇರುತ್ತಾ?

ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ಅವರು ಬಿಗ್​ಬಾಸ್​ನಲ್ಲಿ ಹೆಚ್ಚಿನ ಸಮಯ ಜೊತೆಯಲ್ಲೇ ಕಳೆದಿದ್ದಾರೆ. ಈ ವಾರ ಬಿಗ್‍ಬಾಸ್ ಸ್ಪರ್ಧಿಗಳಿಗೆ ಈ ಮನೆಯಲ್ಲಿ ಒಂದು ಆಸೆಯನ್ನು ಹೇಳಿಕೊಳ್ಳುವಂತೆ ಅವಕಾಶ ನೀಡಲಾಗಿತ್ತು. ಅದರಂತೆ, ದಿವ್ಯಾ ಸುರೇಶ್ ನನ್ನ ಅಮ್ಮನನ್ನು ಮನೆಗೆ ಕರೆಯಿಸಿ ಎಂದು ಕೇಳಬೇಕು ಅಂದುಕೊಂಡಿದ್ದೆ. ಆದರೆ ಕೊರೊನಾ ಇರುವ ಕಾರಣ ಇದು ಸಾಧ್ಯವಾಗುವುದಿಲ್ಲ. ಹೀಗಾಗಿ ನಾನು ಮಂಜುಗೆ ಸ್ನೇಹಿತರ ದಿನದ ಶುಭಾಶಯ ತಿಳಿಸಬೇಕು. ಒಂದು ಟೇಬಲ್ ಅದರ ಮೇಲೆ ಕೇಕ್, ಬಲೂನ್ ಇಟ್ಟು ನಾನು ಮಂಜು ಇರುವ ಒಂದು ಫೋಟೋವನ್ನು ಕಳುಹಿಸಿ. ಕೇಕ್ ಹಾರ್ಟ್ ಶೆಪ್‍ನಲ್ಲಿ ಇರಲಿ. ಥ್ಯಾಂಕ್ಸ್ ಬಿಯಿಂಗ್ ಮೈ ಫ್ರೆಂಡ್ ಎಂದು ಬರೆದು ಕಳುಹಿಸಿ. ಇದು ನಾನು ಹೋಗುವಷ್ಟರಲ್ಲಿ ಸಾಧ್ಯವಾದರೆ ಈಡೇರಿಸಿ ಬಿಗ್‍ಬಾಸ್ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಮಿಡ್ ನೈಟ್ ಎಲಿಮಿನೇಟ್ ಆಗಿರುವ ಕಾರಣ ದಿವ್ಯಾ ಸುರೇಶ್ ಆಸೆ ನೆರವೇರುತ್ತಾ ಎಂಬುದು ತಿಳಿದುಬಂದಿಲ್ಲ. ಇದಕ್ಕಾಗಿ ಇಂದಿನ ಸಂಚಿಕೆ ಪ್ರಸಾರವಾಗುವ ತನಕ ಕಾಯಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.