ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು' ಧಾರಾವಾಹಿಯ ವಚನಾ ಪಾತ್ರಧಾರಿಯಾಗಿ ಮಿಂಚಿದ್ದ ಡ್ಯಾನ್ಸರ್ ದಿಶಾ ಮದನ್ ಕೆಲವು ದಿನಗಳಿಂದ ಮಗುವಿನ ಆರೈಕೆ ಕಾರಣ ಸೋಷಿಯಲ್ ಮೀಡಿಯಾಗಳಿಂದ ದೂರವಿದ್ದರು. ಆದರೆ ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ ದಿಶಾ.
- " class="align-text-top noRightClick twitterSection" data="
">
ಮತ್ತೆ ಟಿಕ್ ಟಾಕ್, ಡಬ್ಸ್ಮ್ಯಾಶ್, ಡ್ಯಾನ್ಸ್ ಮೂಲಕ ದಿಶಾ ಎಲ್ಲರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಧಾರಾವಾಹಿಯಿಂದ ದೂರ ಉಳಿದಿದ್ದ ದಿಶಾ, ಮುದ್ದಾದ ಮಗುವಿನ ತಾಯಿ ಕೂಡಾ ಆದರು. ಸ್ವಲ್ಪ ಸಮಯ ಬ್ರೇಕ್ ಪಡೆದು ಮಗುವಿನ ಆರೈಕೆಗೆ ಹೆಚ್ಚು ಗಮನ ನೀಡಿದರು. ಇದೀಗ ಮತ್ತೆ ತಮ್ಮ ಹಳೆಯ ಕೆಲಸಕ್ಕೆ ಮರಳಿದ್ದಾರೆ. ಒಂದು ಮಗುವಿಗೆ ತಾಯಿಯಾದ ನಂತರವೂ ಫಿಟ್ನೆಸ್ ಕಾಪಾಡಿಕೊಂಡಿರುವ ದಿಶಾ, ಮೊದಲಿಗಿಂತ ಇನ್ನೂ ಹೆಚ್ಚು ಸುಂದರವಾಗಿ ಕಾಣುತ್ತಿದ್ದಾರೆ. ಮತ್ತೆ ಸೋಷಿಯಲ್ ಮೀಡಿಯಾಗೆ ವಾಪಸ್ ಆಗಿರುವ ದಿಶಾ ಮದನ್, ಯುವ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರ ಸಂಗೀತ ನಿರ್ದೇಶನದ ಹಾಡೊಂದಕ್ಕೆ ಡಿಫರೆಂಟ್ ಆಗಿ ಟಿಕ್ ಟಾಕ್ ಮಾಡಿದ್ದು ಹೆಚ್ಚು ಮೆಚ್ಚುಗೆ ಪಡೆದಿದೆ.

ಡ್ಯಾನ್ಸಿಂಗ್ ಸ್ಟಾರ್ಸ್ ರಿಯಾಲಿಟಿ ಶೋ ಹಾಗೂ 'ಕುಲವಧು' ಧಾರಾವಾಹಿಯಲ್ಲಿ ನಟಿಸಿರುವ ದಿಶಾ ಮದನ್, ಶಿವರಾಜ್ ಕುಮಾರ್ ನಿರ್ಮಾಣದ 'ಹೇಟ್ ಯು ರೋಮಿಯೋ' ವೆಬ್ ಸೀರೀಸ್ನಲ್ಲಿ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ನಲ್ಲಿ ಕೂಡಾ ಸ್ಪರ್ಧಿಯಾಗಿದ್ದ ದಿಶಾ ಮಿಥುನ್ ಚಕ್ರವರ್ತಿ ಮೆಚ್ಚುಗೆಗೆ ಕೂಡಾ ಪಾತ್ರರಾಗಿದ್ದರು.
- " class="align-text-top noRightClick twitterSection" data="
">