'ದಿಯಾ' ಖ್ಯಾತಿಯ ದೀಕ್ಷಿತ್ ಶೆಟ್ಟಿಗೂ ಶುರುವಾಯ್ತು ಆ ಸಮಸ್ಯೆ - Social media account hack
ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಇನ್ಸ್ಟಾಗ್ರಾಮ್ ಅಕೌಂಟ್ ಹ್ಯಾಕ್ ಆಗಿದ್ದು ಈ ವಿಚಾರವನ್ನು ದೀಕ್ಷಿತ್ ವಿಡಿಯೋ ಮಾಡಿ ತಿಳಿಸಿದ್ದಾರೆ. ಕನ್ನಡ ಸಿನಿಮಾ ಅಪ್ಡೇಟ್ಸ್ ಇನ್ಸ್ಟಾಗ್ರಾಮ್ ಖಾತೆ ಮೂಲಕ ದೀಕ್ಷಿತ್ ಶೆಟ್ಟಿ ಈ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮಿಡಿಯಾ ಖಾತೆಗಳು ಹ್ಯಾಕ್ ಆಗುತ್ತಿರುವುದು ಹೆಚ್ಚಾಗುತ್ತಿದೆ. ಅದರಲ್ಲೂ ಸೆಲಬ್ರಿಟಿಗಳ ಸೋಷಿಯಲ್ ಮೀಡಿಯಾ ಅಕೌಂಟ್ಗಳು ಎಂದರೆ ಕೇಳುವುದು ಬೇಡ. ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ದುರ್ಬಳಕೆ ಮಾಡಿಕೊಳ್ಳುವುದು ಕೂಡಾ ಹೆಚ್ಚುತ್ತಲೇ ಇದೆ.
- " class="align-text-top noRightClick twitterSection" data="
">
ದೀಪಿಕಾ ದಾಸ್, ಭೂಮಿ ಶೆಟ್ಟಿ, ಅಶ್ವಿನಿ, ಮಾನ್ಸಿ ಜೋಷಿ ಹೀಗೆ ಸಾಲು ಸಾಲು ಸೆಲೆಬ್ರಿಟಿಗಳ ಸೋಷಿಯಲ್ ಮಿಡಿಯಾ ಅಕೌಂಟ್ ಹ್ಯಾಕ್ ಆಗಿತ್ತು. ಇದೀಗ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅವರ ಇನ್ಸ್ಟಾಗ್ರಾಮ್ ಅಕೌಂಟ್ ಕೂಡಾ ಹ್ಯಾಕ್ ಆಗಿದೆ. ಈ ಕುರಿತು ಸ್ವತಃ ದೀಕ್ಷಿತ್ ಅವರೇ ಹೇಳಿಕೊಂಡಿದ್ದಾರೆ. "ನನ್ನ ಇನ್ಸ್ಟಾಗ್ರಾಮ್ ಅಕೌಂಟ್ ಹ್ಯಾಕ್ ಆಗಿದೆ. ನನ್ನ ಅಕೌಂಟ್ನಿಂದ ನಿಮಗೆ ಯಾವುದಾದರೂ ಮೆಸೇಜ್ ಬಂದರೆ, ಅದಕ್ಕೆ ಉತ್ತರಿಸಲು ಹೋಗಬೇಡಿ. ಇದರ ಜೊತೆಗೆ ಯಾವುದೇ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ. ನಾನು ಲಾಗಿನ್ ಆಗಲು ಪ್ರಯತ್ನ ಪಡುತ್ತಲೇ ಇದ್ದೇನೆ. ಆದರೆ ಆಗುತ್ತಿಲ್ಲ. ಆದ್ದರಿಂದ ನೀವು ತುಂಬಾ ಜಾಗರೂಕರಾಗಿರಿ" ಎಂದು ದೀಕ್ಷಿತ್ ಶೆಟ್ಟಿ ಹೇಳಿದ್ದಾರೆ.