ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಪರಿಚಯವಾದ ಎಷ್ಟೋ ನಟ-ನಟಿಯರಿದ್ದಾರೆ. ಇವರಲ್ಲಿ ಕೆಲವರು ಈ ಕಾರ್ಯಕ್ರಮಕ್ಕೆ ಬರುವ ಮುನ್ನ ಸಾಮಾನ್ಯರಾಗಿ ಬರುತ್ತಾರೆ. ಆದರೆ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರ ಸಖತ್ ಫೇಮಸ್ ಆಗುತ್ತಾರೆ.
ಪ್ರಥಮ್
![common people became celebrity](https://etvbharatimages.akamaized.net/etvbharat/prod-images/kn-bng-03-realityshow-stars-photo-ka10018_03092020125000_0309f_1599117600_946.jpg)
ಮೈಸೂರಿನ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದ ಪ್ರಥಮ್ ಇಂದು ನಾಡಿನಾದ್ಯಂತ ಮನೆ ಮಾತಾಗಿದ್ದಾರೆ ಎಂದರೆ ಅದಕ್ಕೆ ಕಿರುತೆರೆಯೇ ಕಾರಣ. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಪ್ರಥಮ್ ವಿಜೇತರೂ ಆದರು. ಅಲ್ಲಿಂದ ಹೊರ ಬಂದ ನಂತರ ಪ್ರಥಮ್ಗೆ ಒಳ್ಳೆ ಹೆಸರು ಕೂಡಾ ಬಂತು. ಇದೀಗ ಪ್ರಥಮ್ ಸಿನಿಮಾ ನಟ ಕೂಡಾ ಆಗಿ ಹೆಸರಾಗಿದ್ದಾರೆ.
ಕಾವ್ಯಾ ಗೌಡ
![common people became celebrity](https://etvbharatimages.akamaized.net/etvbharat/prod-images/kn-bng-03-realityshow-stars-photo-ka10018_03092020125000_0309f_1599117600_193.jpg)
'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ರಿಯಾಲಿಟಿ ಶೋ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ಕಾವ್ಯಾ ಗೌಡ ನಂತರ ಶುಭ ವಿವಾಹ, ಮೀರಾ ಮಾಧವ, ಗಾಂಧಾರಿ ಮತ್ತು ರಾಧಾ ರಮಣ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಬಕಾಸುರ ಸಿನಿಮಾ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟರುವ ಕಾವ್ಯಾ ಕಮಲ್ ಹಾಸನ್ , ನಾಗಾರ್ಜುನ ಹಾಗೂ ಮುಮ್ಮುಟಿ ಮುಂತಾದ ಹಿರಿಯ ಕಲಾವಿದರೊಂದಿಗೆ ಜಾಹೀರಾತಿನಲ್ಲಿ ನಟಿಸಿದ್ದಾರೆ.
ವಿನಯ್ ಗೌಡ
![common people became celebrity](https://etvbharatimages.akamaized.net/etvbharat/prod-images/kn-bng-03-realityshow-stars-photo-ka10018_03092020125000_0309f_1599117600_1055.jpg)
ವಿಭಿನ್ನ ಶೈಲಿಯ ನಟನೆ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿರುವ ವಿನಯ್ ಗೌಡ ತಮ್ಮ ಪತ್ನಿ ಅಕ್ಷತಾ ಜೊತೆ ಸೂಪರ್ ಜೋಡಿ ಸೀಸನ್ 1 ರಲ್ಲಿ ಪಾಲ್ಗೊಂಡಿದ್ದರು. ಸೂಪರ್ ಜೋಡಿ ಪಟ್ಟ ಪಡೆದ ವಿನಯ್ ಗೌಡ ಸಿಬಿಐ ಕರ್ನಾಟಕ, ಚಿಟ್ಟೆ ಹೆಜ್ಜೆ, ಅಂಬಾರಿ, ಅಮ್ಮ ನಿನಗಾಗಿ, ಹರಹರ ಮಹಾದೇವ, ಜೈ ಹನುಮಾನ್, ಬಯಸದೆ ಬಳಿ ಬಂದೆ ಹಾಗೂ ನಂದಿನಿ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಈ ಧಾರಾವಾಹಿಗಳಲ್ಲಿ 'ಹರಹರ ಮಹಾದೇವ'ನ ಮಹಾದೇವ ಪಾತ್ರ ವಿನಯ್ ಅವರಿಗೆ ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿತ್ತು.
ಸುನಾಮಿ ಕಿಟ್ಟಿ
![common people became celebrity](https://etvbharatimages.akamaized.net/etvbharat/prod-images/8661843_202_8661843_1599126093679.png)
ಮೈಸೂರು ಬಳಿಯ ಹೆಗ್ಗಡದೇವನ ಕೋಟೆಯಲ್ಲಿ ತರಕಾರಿ ವ್ಯಾಪಾರಿಯಾಗಿದ್ದ ಕಿಟ್ಟಿ 'ಇಂಡಿಯನ್' ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿಜೇತರಾದರು. ನಂತರ ಡ್ಯಾನ್ಸಿಂಗ್ ಸ್ಟಾರ್ಸ್ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 3 ರಲ್ಲಿ ಕೂಡಾ ಕಿಟ್ಟಿಗೆ ಕೂಡಾ ಸಿನಿಮಾಗಳಲ್ಲಿ ಆಫರ್ ಬರುತ್ತಿದೆಯಂತೆ.
ಕೋಳಿ ರಮ್ಯ
![common people became celebrity](https://etvbharatimages.akamaized.net/etvbharat/prod-images/kn-bng-03-realityshow-stars-photo-ka10018_03092020125000_0309f_1599117600_659.jpg)
'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಬಂದ ಕೋಳಿ ರಮ್ಯ ಈ ಶೋ ಮೂಲಕವೇ ಮನೆ ಮಾತಾಗಿದ್ದರು. ಈ ಶೋನಲ್ಲಿ ಅಕುಲ್ ಬಾಲಾಜಿ ರಮ್ಯಾಗೆ ಕೋಳಿ ರಮ್ಯ ಎಂಬ ಹೆಸರು ನೀಡಿದ್ದರು. ಕೋಳಿ ಹಿಡಿಯೋ ಟಾಸ್ಕ್ನಲ್ಲಿ ನಿರ್ದಿಷ್ಟ ಸಮಯದಲ್ಲಿ ಹೆಚ್ಚು ಕೋಳಿಗಳನ್ನು ಹಿಡಿದ ಕಾರಣ ಅವರಿಗೆ ಈ ಹೆಸರು ಬಂತು. ಸೊಸೆ ತಂದ ಸೌಭಾಗ್ಯ, ಪುಟ್ಟ ಗೌರಿ ಮದುವೆ, ನಾಗಕನ್ನಿಕೆ ಧಾರಾವಾಹಿಗಳಲ್ಲಿ ನಟಿಸಿರುವ ಕೋಳಿ ರಮ್ಯ ಇದೀಗ 'ಮಿಥುನ ರಾಶಿ' ಧಾರಾವಾಹಿಯಲ್ಲಿ ಕವಿತಾ ಎನ್ನುವ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಯನ ಪುಟ್ಟಸ್ವಾಮಿ
![common people became celebrity](https://etvbharatimages.akamaized.net/etvbharat/prod-images/kn-bng-03-realityshow-stars-photo-ka10018_03092020125000_0309f_1599117600_868.jpg)
'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಿತರಾದ ನಯನ ಕಣ್ಣಿನ ರಾಣಿ ಎಂದೇ ಫೇಮಸ್. ರಿಯಾಲಿಟಿ ಶೋ ವಿನ್ನರ್ ಆಗಿ ಹೊರಹೊಮ್ಮಿದ ನಯನ, 'ಚಿಟ್ಟೆ ಹೆಜ್ಜೆ' ಧಾರಾವಾಹಿಯಲ್ಲಿ ನಾಯಕಿಯ ಪಾತ್ರ ನಿರ್ವಹಿಸಿದರು. ನಂತರ ಬಿಗ್ ಬಾಸ್ ಸ್ಪರ್ಧಿಯಾಗಿ ಕೂಡಾ ಅವರು ಕಾಣಿಸಿಕೊಂಡಿದ್ದರು.
ನಿವೇದಿತಾ ಗೌಡ
![common people became celebrity](https://etvbharatimages.akamaized.net/etvbharat/prod-images/kn-bng-03-realityshow-stars-photo-ka10018_03092020125000_0309f_1599117600_382.jpg)
ಬಿಗ್ ಬಾಸ್ ಸೀಸನ್-5 ಮೂಲಕ ಮನೆ ಮಾತಾದ ನಿವೇದಿತಾ ಗೌಡ ಸಾಮಾನ್ಯ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟರು. ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಅತಿ ಕಿರಿಯ ಸ್ಪರ್ಧಿ ನಿವೇದಿತಾ ಗೌಡ ತಮ್ಮ ಮಾತಿನಿಂದಲೇ ಫೇಮಸ್ ಆಗಿದ್ದರು. ಇದೀಗ ನಿವೇದಿತಾ, ಅದೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಂದನ್ ಶೆಟ್ಟಿ ಕೈ ಹಿಡಿದಿದ್ದಾರೆ.