ನಟಿ ಅಮೃತಾ ನಾಯ್ಡು ಅವರ ಪುತ್ರಿಯಾಗಿದ್ದ ಸಮನ್ವಿ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. 'ನನ್ನಮ್ಮ ಸೂಪರ್ ಸ್ಟಾರ್' ಶೋನಲ್ಲಿ ಪಟಪಟನೆ ಮಾತನಾಡುತ್ತಾ ನೋಡುಗರನ್ನ ರಂಜಿಸುತ್ತಿದ್ದ ಸಮನ್ವಿ ಇನ್ನು ನೆನಪು ಮಾತ್ರ.
![Samanvi is the daughter of actress Amrita Naidu](https://etvbharatimages.akamaized.net/etvbharat/prod-images/kn-bng-02-appa-ammana-mudina-magalu-aagidda-samanvi-7204735_14012022154349_1401f_1642155229_1060.jpg)
ಆರು ವರ್ಷದ ಸಮನ್ವಿ, ಅಮೃತಾ ನಾಯ್ಡು ಹಾಗೂ ರೂಪೇಶ್ ದಂಪತಿಯ ಮುದ್ದಿನ ಮಗಳಾಗಿದ್ದಳು. ಈಕೆ ಯಾಕೆ ಅಮೃತಾ ನಾಯ್ಡು ಹಾಗೂ ರೂಪೇಶ್ಗೆ ತುಂಬಾ ಅಚ್ಚುಮೆಚ್ಚು ಅನ್ನೋದಕ್ಕೆ ಒಂದು ಕಾರಣ ಇದೆ. ಅಮೃತಾ ಹಾಗೂ ರೂಪೇಶ್ ದಂಪತಿಗೆ ಸಮನ್ವಿ ಮೊದಲ ಮಗು ಅಲ್ಲ, ಆಕೆ ಎರಡನೇ ಮಗು.
![Samanvi is the daughter of actress Amrita Naidu](https://etvbharatimages.akamaized.net/etvbharat/prod-images/kn-bng-02-appa-ammana-mudina-magalu-aagidda-samanvi-7204735_14012022154349_1401f_1642155229_266.jpg)
ಹರಿಕಥಾ ವಿದ್ವಾಂಸರಾದ ಗುರುರಾಜುಲು ನಾಯ್ಡು ಅವರ ಮೊಮ್ಮಗಳಾಗಿರುವ ಅಮೃತಾ ನಾಯ್ಡು, ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಕೆಲ ವರ್ಷಗಳ ಹಿಂದೆ ರೂಪೇಶ್ ಎಂಬುವರ ಜೊತೆ ಅಮೃತಾ ಮದುವೆಯಾಗಿದ್ದರು. ಈ ದಂಪತಿಗೆ ಮೊದಲು ಒಂದು ಮಗು ಜನಿಸಿತ್ತು. ಆದರೆ, ಆ ಮಗು ಅನಾರೋಗ್ಯ ಸಮಸ್ಯೆಯಿಂದ ಹೆಚ್ಚು ಕಾಲ ಬದುಕಲಿಲ್ಲ.
ಹೀಗೆ ಮೊದಲ ಮಗುವಿನ ಸಾವನ್ನು ಮರೆಸುವಂತೆ, ಆ ಕುಟುಂಬಕ್ಕೆ ಬೆಳಕಾಗಿ ಬಂದವಳೇ ಸಮನ್ವಿ. ಈ ಬಗ್ಗೆ ನನ್ನಮ್ಮ ಸೂಪರ್ ಸ್ಟಾರ್ ಶೋ ವೇದಿಕೆಯಲ್ಲಿ ಸಮನ್ವಿ ನಮಗೆ ದೇವರು ಕೊಟ್ಟ ವರ ಎಂದು ಅಮೃತಾ ಹೇಳಿಕೊಂಡಿದ್ದರು. ಮೊದಲ ಮಗು ತೀರಿಕೊಂಡು ಅದೆಷ್ಟೋ ವರ್ಷಗಳ ಬಳಿಕ ಹುಟ್ಟಿದವಳೇ ಸಮನ್ವಿ. ಈ ಕಾರಣಕ್ಕೆ ಅಮೃತಾ ನಾಯ್ಡು ಹಾಗೂ ರೂಪೇಶ್ಗೆ ಎಲ್ಲಿಲ್ಲದ ಪ್ರೀತಿ.
![Samanvi is the daughter of actress Amrita Naidu](https://etvbharatimages.akamaized.net/etvbharat/prod-images/kn-bng-02-appa-ammana-mudina-magalu-aagidda-samanvi-7204735_14012022154349_1401f_1642155229_198.jpg)
ಆರು ವರ್ಷದವಳು ಆಗಿದ್ದ ಸಮನ್ವಿ ತುಂಬಾನೇ ಟ್ಯಾಲೆಂಟ್ ಇರುವ ಮಗು. ಮನೆಯಲ್ಲಿ ಸದಾ ಪಟ ಪಟ ಅಂತಾ ಮಾತನಾಡುತ್ತಾ, ಮುಖಕ್ಕೆ ಮೇಕಪ್ ಮಾಡಿಕೊಳ್ಳುತ್ತಾ, ಸದಾ ತನ್ನ ತಾಯಿ ಅಮೃತಾಳ ಜೊತೆ ತುಂಟಾಟ ಮಾಡುತ್ತಾ ಕಾಲ ಕಳೆಯುತ್ತಿದ್ದಳು. ಸಮನ್ವಿ ಅಪ್ಪನಿಗಿಂತ ಅಮ್ಮನ ಜೊತೆ ತುಂಬಾ ಆತ್ಮೀಯ ಬಾಂಧವ್ಯ ಹೊಂದಿದ್ದಳು. ಸಮನ್ವಿಗೆ ಅವರ ಅಮ್ಮ ಕ್ಯೂಟ್ ಮದರ್ ಸಹ ಆಗಿದ್ದರು.
![Samanvi is the daughter of actress Amrita Naidu](https://etvbharatimages.akamaized.net/etvbharat/prod-images/kn-bng-02-appa-ammana-mudina-magalu-aagidda-samanvi-7204735_14012022154349_1401f_1642155229_345.jpg)
ಇನ್ನು ಅಮೃತಾ ಹಾಗೂ ರೂಪೇಶ್ ದಂಪತಿ ಸಮನ್ವಿಗೆ ಇಷ್ಟವಾದ ಕೆಲಸಗಳನ್ನು ಮಾಡೋದಿಕ್ಕೆ ಬಿಡ್ತಾ ಇದ್ರಂತೆ. ಮಕ್ಕಳು ಅಂದ ಮೇಲೆ ಹಠ ಮಾಡೋದು, ಎದುರು ಮಾತನಾಡೋದನ್ನ ನಾವೆಲ್ಲಾ ನೋಡಿದ್ದೀವಿ. ಆದರೆ, ಅಮೃತಾ ಅವರು ಹೇಳುವ ಹಾಗೆ ಸಮನ್ವಿ ಹಾಗೆ ಇರಲಿಲ್ಲ. ಆಕೆ ನಮ್ಮ ಗೌರವ ಉಳಿಸುವ ಮಗಳು ಆಗ್ತಾಳೆ ಅನ್ನೋದು ನಮಗೆ ನಂಬಿಕೆ ಇದೆ ಅಂತಾ ಅಮೃತಾ ಹೇಳಿದ್ದರು.
ಇದನ್ನೂ ಓದಿ: 'ಎದ್ದೇಳವ್ವ...ಎದ್ದೇಳವ್ವಾ' ಎಂದು ಅತ್ತು ಗೋಗರೆದಳು.. ಕರುಳಬಳ್ಳಿ ಅಗಲಿಕೆಗೆ ತಾಯಿ ಕಣ್ಣೀರಿಟ್ಟಳು ..
ಅಮೃತಾ ನಾಯ್ಡು ಶೂಟಿಂಗ್ನಲ್ಲಿ ಬ್ಯುಸಿ ಇದ್ದಾಗಲೂ ಫೋನ್ ಮಾಡಿ ತೊಂದರೆ ನೀಡದೆ ಮನೆಯಲ್ಲಿ ಮಾಡಿಟ್ಟ ಊಟವನ್ನ ಮಾಡಿ ತನ್ನ ಪಾಡಿಗೆ ಇರುತಿದ್ದ ಮಗಳು ಸಮನ್ವಿ. ಶೂಟಿಂಗ್ನಿಂದ ಸುಸ್ತಾಗಿ ಬಂದ್ರೆ ಅಮ್ಮನ ಸ್ಥಾನದಲ್ಲಿ ನಿಂತು ವಿಚಾರಿಸಿತ್ತಿದ್ದಳಂತೆ. ಅಷ್ಟು ವರ್ಷಗಳ ಕಾಲ ಎತ್ತಿ, ಆಡಿಸಿ, ನೋಡಿಕೊಂಡಿದ್ದ ಮಗಳು ತನ್ನ ಕಣ್ಣು ಮುಂದೆಯೇ ಸಾವಿಗೀಡಾದರೇ ಆ ತಾಯಿಯ ಸ್ಥಿತಿ ಹೇಗಿರಬಹುದು.