ಬಿಗ್ ಬಾಸ್ ಸೀಸನ್ 5ರ ವಿನ್ನರ್, ಗಾಯಕ ಚಂದನ್ ಶೆಟ್ಟಿ ಹಾಗೂ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಈ ಬಾರಿ ನಡೆಯುತ್ತಿರುವ ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಬಗ್ಗೆ ಮಾತನಾಡಿದ್ದಾರೆ.
ಚಂದನ್ ಶೆಟ್ಟಿ ಬಿಗ್ಬಾಸ್ ಸೀಸನ್ 8ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಬಾರಿ ತಮ್ಮ ಪ್ರತಿಭೆ ಪ್ರದರ್ಶಿಸುವ ಸ್ಪರ್ಧಿ ಗೆಲ್ಲಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಹಾಗೆ ಬಿಗ್ ಬಾಸ್ ಮನೆಯಲ್ಲಿ ಶಮಂತ್ ಅಲಿಯಾಸ್ ಬ್ರೊ ಗೌಡ ತಮ್ಮ ಹಾಡುಗಳ ಮೂಲಕ ಚಂದನ್ ಶೆಟ್ಟಿ ಅವರನ್ನು ಇಂಪ್ರೆಸ್ ಮಾಡಿದ್ದಾರಂತೆ.
ಇನ್ನು, ನಿವೇದಿತಾ ಗೌಡ ಅವರಿಗೆ ವೈಷ್ಣವಿ ಬಿಗ್ ಬಾಸ್ ಮನೆಯಲ್ಲಿ ಆಡುತ್ತಿರುವ ರೀತಿ ಇಷ್ಟವಾಗಿದೆ. ಹಾಗೆ ಈ ಬಾರಿ ಮಹಿಳಾ ಸ್ಪರ್ಧಿ ಗೆಲ್ಲಬೇಕು ಎಂಬುದು ನಿವೇದಿತಾ ಅವರ ಆಶಯವಾಗಿದೆ.