ETV Bharat / sitara

ನಿರೂಪಕಿ, ನಟಿ, ಈವೆಂಟ್ ಮ್ಯಾನೇಜರ್... ಎಲ್ಲದಕ್ಕೂ ಸೈ ಚೈತ್ರಾ ವಾಸುದೇವನ್​​ - ಪೈಲ್ವಾನ್ ಸಿನಿಮಾದಲ್ಲಿ ನಟಿಸಿರುವ ಬಿಗ್​ಬಾಸ್​​ 7 ಸ್ಪರ್ಧಿ ಚೈತ್ರಾ ವಾಸುದೇವನ್

ಕೇವಲ ನಿರೂಪಣೆ ಮಾತ್ರವಲ್ಲ ಹೊಸದಾಗಿ ಬೇರೆ ಏನಾದರೂ ಮಾಡಬೇಕು ಎಂದುಕೊಂಡಿದ್ದ ಚೈತ್ರಾ ಅಂದುಕೊಂಡಂತೆ ಈವೆಂಟ್ ಕಂಪನಿಯನ್ನೂ ಆರಂಭಿಸಿದರು. ಇವೆಲ್ಲದರ ಜೊತೆ ಚೈತ್ರಾ ನಟಿಯಾಗಿ ಕೂಡಾ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಚೈತ್ರಾ ವಾಸುದೇವನ್​​
author img

By

Published : Oct 21, 2019, 5:42 PM IST

ಚೈತ್ರಾ ವಾಸುದೇವನ್ ಈ ಮುನ್ನ ಕನ್ನಡಿಗರಿಗೆ ಅಷ್ಟಾಗಿ ಪರಿಚಯವಿಲ್ಲದಿದ್ದರೂ ಬಿಗ್​​ಬಾಸ್ ಮೂಲಕ ಇದೀಗ ರಾಜ್ಯದ ಜನತೆಗೆ ಪರಿಚಯವಾಗಿದ್ದಾರೆ. ಕಾಲೇಜು ದಿನಗಳಿಂದಲೇ ಸಾಂಸ್ಕೃತಿಕ ಚಟುವಟಿಕೆಗಳತ್ತ ವಿಶೇಷ ಒಲವು ಹೊಂದಿದ್ದ ಚೈತ್ರಾ ವಾಸುದೇವನ್ ನಟನಾ ರಂಗಕ್ಕೆ ಪರಿಚಿತರಾಗಿದ್ದು ನಿರೂಪಕಿಯಾಗಿ.

chaitra vasudevan
ವಿಜೆ ಆಗಿ ಕರಿಯರ್ ಆರಂಭಿಸಿದ ಚೈತ್ರಾ ವಾಸುದೇವನ್

ಮುದ್ದು ಮುಖದ ಚೈತ್ರಾ ಮೊದಲು ತಮ್ಮ ಕರಿಯರ್ ಆರಂಭಿಸಿದ್ದು, ಉದಯ ಟಿವಿ ಮೂಲಕ. ಇದುವರೆಗೂ ಸಾಕಷ್ಟು ಲೈವ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ ಚೈತ್ರಾ. ಇದರ ಜೊತೆಗೆ ಕ್ರೀಡಾ ನಿರೂಪಕಿಯಾಗಿಯೂ ಗಮನ ಸೆಳೆದಿರುವ ಈ ಬೆಡಗಿ ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಉದಯ ವಾಹಿನಿಯಲ್ಲಿ ಚೈತ್ರಾ ನಡೆಸಿಕೊಡುತ್ತಿದ್ದ ರಿಚಾರ್ಜ್ ಕಾರ್ಯಕ್ರಮ ಅತ್ಯಂತ ಖ್ಯಾತಿ ಗಳಿಸಿತ್ತು. ತಮ್ಮ ಮುದ್ದಾದ ದನಿಯಿಂದಲೇ ವೀಕ್ಷಕರ ಮನ ಸೆಳೆದಿರುವ ಚೈತ್ರಾ ಇತರ ಖಾಸಗಿ ವಾಹಿನಿಗಳಲ್ಲೂ ನಿರೂಪಕಿಯಾಗಿ ಸೈ ಎನಿಸಿಕೊಂಡಿದ್ದಾರೆ.

chaitra vasudevan
ಚೈತ್ರಾ ಇದೀಗ ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿಯೊಂದಕ್ಕೆ ಒಡತಿ

ಕೇವಲ ನಿರೂಪಣೆ ಮಾತ್ರವಲ್ಲ ಹೊಸದಾಗಿ ಬೇರೆ ಏನಾದರೂ ಮಾಡಬೇಕು ಎಂದುಕೊಂಡಿದ್ದ ಚೈತ್ರಾ ಅಂದುಕೊಂಡಂತೆ ಈವೆಂಟ್ ಕಂಪನಿಯನ್ನೂ ಆರಂಭಿಸಿದರು. ತಮ್ಮ ಕಂಪನಿಗೆ 'ಈವೆಂಟ್ ಫ್ಯಾಕ್ಟರಿ' ಎಂದು ನಾಮಕರಣ ಕೂಡಾ ಮಾಡಿದರು. ಆ ಮೂಲಕ ಮದುವೆಗೆ ಬೇಕಾದ ಡೆಕೊರೇಷನ್, ಬರ್ತಡೇ ಪಾರ್ಟಿ, ಬೇಬಿ ಶವರ್ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಅವಶ್ಯಕತೆ ಇರುವ ಐಡಿಯಾ ನೀಡಲು ಆರಂಭಿಸಿದರು. ಇದರೊಂದಿಗೆ ನಟನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಚೈತ್ರಾ, ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದಲ್ಲೂ ಸಣ್ಣ ಪಾತ್ರದಲ್ಲಿ ನಟಿಸಿದ್ದಾರೆ. ಇವೆಲ್ಲದರ ಜೊತೆ ಡ್ಯಾನ್ಸ್, ಟ್ರಾವೆಲ್​, ಓದುವುದು ಹಾಗೂ ಅಡುಗೆ ಮಾಡುವುದೆಂದರೆ ಚೈತ್ರಾಗೆ ಬಹಳ ಇಷ್ಟವಂತೆ.

chaitra vasudevan
'ಪೈಲ್ವಾನ್' ಚಿತ್ರದಲ್ಲಿ ನಟಿಸಿರುವ ಬಿಗ್ ಬಾಸ್-7 ಸ್ಪರ್ಧಿ ಚೈತ್ರಾ

ಓದಿದ್ದು ಇಂಜಿನಿಯರಿಂಗ್ ಆದರೂ ಚೈತ್ರಾ ಹೆಸರು ಮಾಡಿದ್ದು ನಟಿ, ನಿರೂಪಕಿಯಾಗಿ. ಇದೀಗ ಬಿಗ್​​ಬಾಸ್​​​​ 7 ರ ಸ್ಪರ್ಧಿಯಾಗಿ ಕೂಡಾ ಭಾಗವಹಿಸುತ್ತಿರುವ ಚೈತ್ರಾ ಅಲ್ಲೂ ಮಿಂಚಲಿದ್ದಾರಾ ಎಂಬುದನ್ನು ಕಾದು ನೋಡಬೇಕು.

chaitra vasudevan
ಚೈತ್ರಾ ಮುದ್ದು ಧ್ವನಿಗೆ ಸಾಕಷ್ಟು ಫ್ಯಾನ್ ಫಾಲೋವರ್ಸ್ ಇದ್ದಾರೆ

Intro:Body:ಕಾಲೇಜು ದಿನಗಳಿಂದಲೇ ಸಾಂಸ್ಕೃತಿಕ ಚಟುವಟಿಕೆಗಳತ್ತ ವಿಶೇಷ ಒಲವು ಮೂಡಿಸಿಕೊಂಡಿದ್ದ ಚೈತ್ರಾ ವಾಸದೇವನ್ ನಟನಾ ರಂಗಕ್ಕೆ ಪರಿಚಿತರಾಗಿದ್ದು ವಿಜೆಯಾಗಿ. ಉದಯ ವಾಹಿನಿಯ ವಿಜೆಯಾಗಿ ತಮ್ಮ ಕೆರಿಯರ್ ಆರಂಭಿಸಿದ ಮುದ್ದು ಮುಖದ ಚೆಲುವೆ ಚೈತ್ರಾ ಸುಮಾರು ಇಪ್ಪತ್ತೈದು ಸಾವಿರಕ್ಕೂ ಅಧಿಕ ಲೈವ್ ಕಾರ್ಯಕ್ರಮಗಳನ್ನು ನಿರೂಪಿಸಿದ ಚೆಲುವೆ. ಇದರ ಜೊತೆಗೆ ಕ್ರೀಡಾ ನಿರೂಪಕಿಯಾಗಿ ಗಮನ ಸೆಳೆದಿರುವ ಈ ಬೆಡಗಿ ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಉದಯ ವಾಹಿನಿಯಲ್ಲಿ ಚೈತ್ರಾ ನಡೆಸಿಕೊಡುತ್ತಿದ್ದ ರಿಚಾರ್ಜ್ ಕಾರ್ಯಕ್ರಮ ಅತೀ ಹೆಚ್ಚು ಟಿಆರ್ ಪಿಗಳನ್ನು ಗಳಿಸಿದ್ದು ಈಗ ಇತಿಹಾಸ. ತಮ್ಮ ಮುದ್ದಾದ ದನಿಯಿಂದಲೇ ವೀಕ್ಷಕರ ಮನ ಸೆಳೆದಿರುವ ಚೈತ್ರಾ ಅವರ ನಿರೂಪಣೆ ಕೇವಲ ಉದಯ ವಾಹಿನಿಗೆ ಮಾತ್ರ ಸೀಮಿತವಲ್ಲ. ಬದಲಿಗೆ ಜೀ ಕನ್ನಡ, ಸ್ಟಾರ್ ಸುವರ್ಣ, ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ಬಿಟಿವಿಗಳಲ್ಲೂ ನಿರೂಪಕಿಯಾಗಿ ಸೈ ಎನಿಸಿಕೊಂಡಿರುವ ಪ್ರತಿಭೆ.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರತಿ ಆದಿತ್ಯವಾರ ಪ್ರಸಾರವಾಗಿತ್ತಿದ್ದ ಒಂದು ಸಿನಿಮಾ ಕಥೆ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಕೂಡಾ ಚೈತ್ರಾ ಅವರಿಗಿತ್ತು. ಇದರಲ್ಲಿ ಸೆಲೆಬ್ರಿಟಿಗಳ ಸಂದರ್ಶನವನ್ನು ಅಚ್ಚುಕಟ್ಟಾಗಿ ನಡೆಸಿಕೊಡುತ್ತಿದ್ದ ಆಕೆಗೆ ಹೊಸತೇನಾದರೂ ಮಾಡುವ ಬಯಕೆ. ಕೊನೆಗೂ ಅದು ಈಡೇರಿತು.

ತನ್ನ ಮನದೊಳಗಿನ ವಿಭಿನ್ನ ಬಯಕೆಗೆ ರೂಪು ಕೊಟ್ಟಾಗ ಹುಟ್ಟಿದ್ದು ಒಂದು ಇವೆಂಟ್ ಡಿಸೈನ್ ಕಂಪೆನಿ. ಮುಂದೆ ಅದನ್ನೇ ಆರಂಭಿಸಿದ ಚೈತ್ರಾ ಅದಕ್ಕೆ ಇವೆಂಟ್ ಫ್ಯಾಕ್ಟರಿ ಎಂದು ನಾಮಕರಣವನ್ನು ಮಾಡಲಾಯಿತು. ಮದುವೆಗೆ ಬೇಕಾದ ಡೆಕೊರೇಶನ್, ಬರ್ತ್ಡೇ ಪಾರ್ಟಿಸ್, ಬೇಬಿ ಶವರ್ ಮುಂತಾದ ಕಾರ್ಯಕ್ರಮಗಳಿಗೆ ಬೇಕಾದಂತಹ ಐಡಿಯಾಗಳನ್ನು ಈ ಕಂಪೆನಿ ನೀಡುತ್ತದೆ.

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದಲ್ಲೂ ಸಣ್ಣ ಪಾತ್ರದಲ್ಲಿ ನಟಿಸಿರುವ ಚೈತ್ರಾ ಗೆ ನಿರೂಪಣೆಯ ಹೊರತಾಗಿ ಡ್ಯಾನ್ಸ್, ಟ್ರಾವೆಲಿಂಗ್, ಓದುವುದು ಮತ್ತು ಅಡುಗೆ ಮಾಡುವುದು ಎಂದರೆ ಇಷ್ಟ.

ಓದಿದ್ದು ಇಂಜಿನಿಯರಿಂಗ್ ಆದರೂ ಶೈನ್ ಆದದ್ದು ನಟಿ, ನಿರೂಪಕಿಯಾಗಿ. ಇದೀಗ ಬಿಗ್ ಬಾಸ್ ಸೀಸನ್ 7 ರ ಸ್ಫರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿರುವ ಚೈತ್ರಾ ವಾಸುದೇವನ್ ಅಲ್ಲೂ ಶೈನ್ ಆಗುತ್ತಾರಾ ನೋಡಬೇಕಷ್ಟೇ!Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.