ಬಿಗ್ ಬಾಸ್ ಸೀಸನ್ ಎಂಟರ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ 4 ಮಂದಿ ಸೇಫ್ ಆಗಿದ್ದು, ಉಳಿದವರಲ್ಲಿ ಮನೆಯಿಂದ ಹೊರ ಬರುವ ಸ್ಪರ್ಧಿ ಯಾರು ಎಂಬುದು ಸಂಡೇ ವಿಥ್ ಸುದೀಪ ಎಪಿಸೋಡ್ನಲ್ಲಿ ತಿಳಿಯಲಿದೆ.

ಮನೆಯಲ್ಲಿ ಮೂರು ವಾರ ಕಳೆದರೂ ಓಪನ್ ಅಪ್ ಆಗದೆ ಯಾವುದೇ ಶ್ರಮ ಹಾಕದೇ ಕಾಲ ಕಳೆಯುತ್ತಿದ್ದಾರೆ ಎಂಬ ಆರೋಪ ಹೊತ್ತಿರುವ ಶಮಂತ್ ನಾಳೆ ಮನೆಯಿಂದ ಹೊರ ಬರುವ ಸಾಧ್ಯತೆಯಿದೆ. ವಾರದ ಕತೆ ಕಿಚ್ಚನ ಜೊತೆ ವಿಶೇಷ ಸಂಚಿಕೆಯಲ್ಲಿ ಸುದೀಪ್ ಅವರು, ಈ ಮನೆಯಲ್ಲಿ ಯಾರು ಅನ್ ಸೇಫ್ ಎಂದು ಅನಿಸುತ್ತದೆ ಎಂದು ಮನೆಯ ಸದಸ್ಯರನ್ನು ಕೇಳಿದಾಗ ಮನೆಯ ಎಲ್ಲಾ ಸದಸ್ಯರು ಒಂದೊಂದು ಕಾರಣ ನೀಡುವ ಮೂಲಕ ಶಮಂತ್ ಅವರ ಹೆಸರನ್ನು ಸೂಚಿಸಿದ್ದಾರೆ.

ಅದರಲ್ಲಿಯೂ ಪ್ರಶಾಂತ್ ಸಂಬರಗಿ ಅವರು, ಶಮಂತ್ ಅವರು ತಂದೆ-ತಾಯಿ ಹೆಸರು ಹೇಳಿಕೊಂಡು ನಮ್ಮನ್ನೆಲ್ಲ ಎಮೋಷನಲ್ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ವಾರ ವಿಕೇಂಡ್ ಮೊದಲ ಸಂಚಿಕೆಯಲ್ಲಿ ಅರವಿಂದ್ ಕೆ.ಪಿ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ ಹಾಗೂ ನಿಧಿ ಸುಬ್ಬಯ್ಯ ಸೇಫ್ ಆಗಿದ್ದಾರೆ.
ಉಳಿದಂತೆ ಗೀತಾ, ಶಮಂತ್, ದಿವ್ಯ ಉರುಡುಗ, ರಘು ಹಾಗೂ ವಿಶ್ವ ನಾಮಿನೇಟ್ ಆಗಿಯೇ ಉಳಿದಿದ್ದಾರೆ. ಮನೆಯ ಬಹುತೇಕ ಸದಸ್ಯರ ಪೈಕಿ ದಿವ್ಯ ಉರುಡುಗ, ವಿಶ್ವ ಹಾಗೂ ಗೀತಾ ಸೇಫ್ ಆಗುವ ಸಾಧ್ಯತೆಯಿದೆ. ರಘು ಹಾಗೂ ಶಮಂತ್ ಅವರಲ್ಲಿ ಮನೆಯಿಂದ ಹೊರ ಬರುವ ಸ್ಪರ್ಧಿ ಯಾರು? ಎಂಬುದನ್ನು ಕಾದು ನೋಡಬೇಕಿದೆ.