ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೊತೆ ಜೊತೆಯಲಿ' ಧಾರಾವಾಹಿಯ ನಾಯಕಿ ಮೇಘಾ ಶೆಟ್ಟಿ ಇದೀಗ ಹೊರ ಬಂದಿದ್ದಾರೆಂಬ ಸುದ್ದಿ ಕೇಳಿ ಬಂದಿದೆ.
ಫೇಸ್ಬುಕ್ ಮೂಲಕ ಆಯ್ಕೆಯಾಗಿ ಕಿರುತೆರೆಗೆ ಪರಿಚಯವಾಗಿದ್ದ ನಟಿ ಮೇಘಾ ಶೆಟ್ಟಿ, ಈ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರ ನಿರ್ವಹಿಸುತ್ತಿದ್ದರು. 20 ವರ್ಷದ ಯುವತಿ 45 ವರ್ಷದ ವ್ಯಕ್ತಿಯನ್ನು ಪ್ರೀತಿಸುವ ಕಥೆ ಇದಾಗಿತ್ತು. ನಟ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ನಾಯಕನಾಗಿ ನಟಿಸಿರುವ ಈ ಧಾರಾವಾಹಿ, ಟಿಆರ್ಪಿಯಲ್ಲಿ ಮೊದಲ ಮೂರು ಸ್ಥಾನದಲ್ಲಿದೆ.

ಮೂಲ ಮರಾಠಿಯಿಂದ ರಿಮೇಕ್ ಆಗಿದ್ದ ಜೊತೆ ಜೊತೆಯಲಿ ಧಾರಾವಾಹಿ ನಂತರದ ದಿನಗಳಲ್ಲಿ ಇಲ್ಲಿನ ನೆಟಿವಿಟಿಗೆ ತಕ್ಕಂತೆ ಕಥೆ ಬದಲಾಗಿಸಲಾಗಿತ್ತು. ಇದ್ದಕ್ಕಿದ್ದಂತೆ ನಟಿ ಮೇಘಾ ಶೆಟ್ಟಿ ಧಾರಾವಾಹಿಯಿಂದ ಹೊರ ಬಂದಿರುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ಈ ತಿಂಗಳ ಅಂತ್ಯದವರೆಗೆ ಮೇಘಾ ಶೆಟ್ಟಿ ನಟಿಸಿರುವ ಎಪಿಸೋಡ್ಗಳು ಪ್ರಸಾರವಾಗಲಿವೆ. ಧಾರಾವಾಹಿಯಿಂದ ಹೊರ ಬಂದಿರುವುದಕ್ಕೆ ನಟಿ ಮೇಘಾ ಶೆಟ್ಟಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಲ್ಲದೇ, ಮೇಘಾ ಶೆಟ್ಟಿ ಸ್ಥಾನಕ್ಕೆ ನಾಯಕಿಯಾಗಿ ಯಾರು ಬರಲಿದ್ದಾರೆ? ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಮೂಕ ಪ್ರಾಣಿಗಳ ಹಸಿವು ನೀಗಿಸುತ್ತಿದ್ದಾರೆ ನಟಿ ಮೇಘಾ ಶೆಟ್ಟಿ