ETV Bharat / sitara

'ಬ್ಯಾಂಗ್' ಸಿನಿಮಾ‌ ಶೂಟಿಂಗ್​ ವೇಳೆ ಅವಘಡ: ನಟಿ ಶಾನ್ವಿ ಕಾಲಿಗೆ ಗಾಯ - ಸ್ಯಾಂಡಲ್​ವುಡ್​​

'ಬ್ಯಾಂಗ್' ಸಿನಿಮಾ‌ ಶೂಟಿಂಗ್​ ವೇಳೆ ಅವಘಡವೊಂದು ನಡೆದಿದ್ದು, ನಟಿ ಶಾನ್ವಿ ಶ್ರೀವಾತ್ಸವ್​ ಗಾಯಗೊಂಡಿದ್ದಾರೆ. ಅವರಿಗೆ ರೆಸ್ಟ್ ಅಗತ್ಯವಿದೆ. ಹೀಗಾಗಿ ಒಂದು ವಾರ ಶೂಟಿಂಗ್ ಮುಂದೂಡಲಾಗಿದೆ ಎಂದು ನಿರ್ದೇಶಕ ಶ್ರೀ ಗಣೇಶ್ ತಿಳಿಸಿದ್ದಾರೆ.

Shanvi Srivastava got injured
'ಬ್ಯಾಂಗ್' ಸಿನಿಮಾ‌ ಶೂಟಿಂಗ್​ ವೇಳೆ ಅವಘಡ: ನಟಿ ಶಾನ್ವಿ ಕಾಲಿಗೆ ಗಾಯ
author img

By

Published : Aug 2, 2021, 3:39 PM IST

ಕೊರೊನಾ ಎರಡನೇ ಅಲೆಯಿಂದ ಸಂಪೂರ್ಣವಾಗಿ, ಸ್ತಬ್ಧವಾಗಿದ್ದ ಕನ್ನಡ ಚಿತ್ರರಂಗದಲ್ಲಿ ನಿಧಾನವಾಗಿ ಸಿನಿಮಾ ಚಿತ್ರೀಕರಣ ಆರಂಭಿಸಿದೆ. ಈಗಾಗಲೇ ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್‍ಕುಮಾರ್ ಸೇರಿದಂತೆ ಹೊಸಬರ ಸಿನಿಮಾಗಳ ಶೂಟಿಂಗ್​ ಶುರುವಾಗಿದೆ.

'ಬ್ಯಾಂಗ್' ಸಿನಿಮಾ‌ ಶೂಟಿಂಗ್​ ..

ಕಸ್ತೂರಿ ಮಹಲ್ ಚಿತ್ರದ ಬಳಿಕ, ಚಂದ್ರಲೇಖಾ ಸುಂದರಿ ಶಾನ್ವಿ ಶ್ರೀವಾತ್ಸವ್ ಅಭಿನಯದ 'ಬ್ಯಾಂಗ್' ಸಿನಿಮಾದ ಚಿತ್ರೀಕರಣ ಆರಂಭವಾಗಿದೆ‌. ಕಳೆದ ಒಂದು ವಾರದಿಂದ ಬೆಂಗಳೂರಿನ ಹೆಚ್.ಎಮ್.ಟಿ ಫ್ಯಾಕ್ಟರಿಯಲ್ಲಿ ಶಾನ್ವಿ ಶ್ರೀವಾತ್ಸವ್ ಅವರ ಆ್ಯಕ್ಷನ್ ಸನ್ನಿವೇಶಗಳನ್ನ ಶೂಟ್​​ ಮಾಡಲಾಗುತ್ತಿತ್ತು. ಆದರೆ ನಿನ್ನೆ ಆ್ಯಕ್ಷನ್ ಸೀಕ್ವೆನ್ಸ್ ಮಾಡುವ ವೇಳೆ, ಶಾನ್ವಿ ಶ್ರೀವಾತ್ಸವ್ ಕಾಲಿಗೆ ಪೆಟ್ಟಾಗಿ ಸುಸ್ತಾಗಿ ಬಿದ್ದಿದ್ದಾರೆ‌. ನಿರಂತರ 8 ಗಂಟೆಗಳ ಕಾಲ ಮಳೆಯಲ್ಲೇ ಶೂಟಿಂಗ್ ಮಾಡಿದ ಕಾರಣ ಶಾನ್ವಿ ಸುಸ್ತಾಗಿ ಕುಸಿದು ಬಿದ್ದಿದ್ದಾರೆ. ಈ ಕಾರಣಕ್ಕೆ ಒಂದು ವಾರ ಕಾಲ ಶೂಟಿಂಗ್​ನ್ನು ಮುಂದೂಡಲಾಗಿದೆ‌.

Shanvi Srivastava got injured
'ಬ್ಯಾಂಗ್' ಸಿನಿಮಾ‌ ಶೂಟಿಂಗ್​ ವೇಳೆ ಅವಘಡ: ನಟಿ ಶಾನ್ವಿ ಕಾಲಿಗೆ ಗಾಯ

ಶಾನ್ವಿ ಸುಸ್ತಾಗಿದ್ದಾರೆ. ಅವರಿಗೆ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ಒಂದು ವಾರ ಶೂಟಿಂಗ್ ಮುಂದೂಡಲಾಗಿದೆ ಎಂದು ನಿರ್ದೇಶಕ ಶ್ರೀ ಗಣೇಶ್ ತಿಳಿಸಿದ್ದಾರೆ. ಬ್ಯಾಂಗ್ ಶಾನ್ವಿ ಶ್ರೀವಾತ್ಸವ್​ ನಟಿಸುತ್ತಿರುವ ಹೊಸ ಸಿನಿಮಾ. ಇದು ಕಸ್ತೂರಿ ಮಹಲ್ ಬಳಿಕ ಮತ್ತೊಂದು ನಾಯಕಿ ಪ್ರಧಾನ ಚಿತ್ರವಂತೆ. ಇಲ್ಲಿ 8 ವಿಭಿನ್ನ ಪಾತ್ರಗಳಿಂದ ಕೂಡಿರುವ ಕಾರಣ, ಶಾನ್ವಿ ಶ್ರೀವಾತ್ಸವ್ ಆ್ಯಕ್ಷನ್​ಗೆ ಹೆಚ್ಚು ಒತ್ತು ಕೊಡಲಿದ್ದಾರೆ.

ಈ ಸಿನಿಮಾದಲ್ಲಿ ಡಾನ್ ಪಾತ್ರದಲ್ಲಿ ಖ್ಯಾತ ಗಾಯಕ ಕಮ್ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಯುವ ನಿರ್ದೇಶಕ ಶ್ರೀ ಗಣೇಶ್ ಈ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: 'ಬ್ಯಾಂಗ್'ನಲ್ಲಿ ಶಾನ್ವಿ ಶ್ರೀವಾಸ್ತವ್ 'ಗ್ಯಾಂಗ್ ಸ್ಟಾರ್'..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.