ETV Bharat / sitara

ಅಸಲಿ, ನಕಲಿ ದೆವ್ವಗಳ ನಡುವೆ ಪ್ರೀತಿ ಪರೀಕ್ಷೆ...ಇದು 'ಗಿಮಿಕ್'​ನ ಚಮಕ್​​​​ - Director Naganna

ಗಿಮಿಕ್
author img

By

Published : Aug 16, 2019, 10:01 PM IST

ಬಹುತೇಕ ಸಿನಿಮಾಗಳು ಬಿಡುಗಡೆಯಾಗುವುದು ಶುಕ್ರವಾರದ ದಿನ. ಆದರೆ ಕೆಲವೊಂದು ಸಿನಿಮಾಗಳು ವಿಶೇಷ ದಿನಗಳಂದು ಬಿಡುಗಡೆಯಾಗುತ್ತವೆ. ಆಗಸ್ಟ್ 15 ರಂದು ಸ್ವಾತಂತ್ಯ್ರ ದಿನ ಹಾಗೂ ರಕ್ಷಾಬಂಧನದ ಅಂಗವಾಗಿ 'ಗಿಮಿಕ್' ಕನ್ನಡ ಸಿನಿಮಾ ಸೇರಿ ಬಹುತೇಕ ಸಿನಿಮಾಗಳು ಬಿಡುಗಡೆಯಾಗಿವೆ. ದೀಪಕ್ ಸಾಮಿ ನಿರ್ಮಾಣದ ಈ ಸಿನಿಮಾವನ್ನು ನಾಗಣ್ಣ ನಿರ್ದೇಶಿಸಿದ್ದಾರೆ.

ನಿರ್ದೇಶಕ ನಾಗಣ್ಣ ಹಳೆ ಮಧ್ಯವನ್ನು ಹೊಸ ಬಾಟಲಿಯಲ್ಲಿ ತುಂಬಿ ನೀಡಿದ್ದಾರೆ. ಅದಕ್ಕೆ ಕಾರಣ ಚಿತ್ರದ ಕ್ಲೈಮ್ಯಾಕ್ಸ್. ‘ಆಪ್ತಮಿತ್ರ’ ಚಿತ್ರವನ್ನು ಈ ಸಿನಿಮಾ ನೆನಪಿಸುತ್ತದೆ. ಇದು 2016 ರಲ್ಲಿ ಬಿಡುಗಡೆಯಾದ ‘ದಿಲ್ಲುಕ್ಕು ದುಡ್ಡು‘ ಚಿತ್ರದ ರೀಮೇಕ್​. ಗೋಲ್ಡನ್ ಸ್ಟಾರ್ ಗಣೇಶ್ ಮೊದಲ ಬಾರಿಗೆ ಹಾರರ್ ಹಾಗೂ ಥ್ರಿಲ್ಲರ್ ಕಥಾ ವಸ್ತುವನ್ನು ಆರಿಸಿಕೊಂಡು ತಮಿಳಿನಲ್ಲಿ ಸಂತಾನಮ್ ಮಾಡಿದ ಪಾತ್ರವನ್ನು ಮಾಡಿದ್ದಾರೆ. ಕಥೆ ಮೊದಲಾರ್ಧದಲ್ಲಿ ಸ್ವಲ್ಪ ತಮಾಷೆ, ದ್ವಿತೀಯಾರ್ಧದಲ್ಲಿ ಹಾರರ್ ಹಾಗೂ ಥ್ರಿಲ್ ನೀಡುತ್ತದೆ.

ಅವನು ಗಣಿ (ಗಣೇಶ್) ಅವಳು ರಾಣಿ (ರೋನಿಕ) ಇವರಿಬ್ಬರ ಮಧ್ಯೆ ಬಡತನ ಹಾಗೂ ಶ್ರೀಮಂತಿಕೆ ಅಡ್ಡವಾಗಿದೆ. ಆದರೂ ಮಗಳು ರಾಣಿ ಬಡವನನ್ನು ಒಪ್ಪಿಕೊಂಡಳಲ್ಲ ಎಂದು ಕೋಪಗೊಂಡ ಅಪ್ಪ (ಚಿ. ಗುರುದತ್) ಒಂದು ಷಡ್ಯಂತ್ರವನ್ನು ಹೂಡುತ್ತಾನೆ. 40 ವರ್ಷಗಳಿಂದ ಬಾಗಿಲು ತೆಗೆಯದ ಬಂಗಲೆ ಒಳಗೆ ನಾಯಕ ಗಣಿ ಕುಟುಂಬ ಬರುವಂತೆ ಮಾಡುತ್ತಾನೆ. ಅದೇ ಜಾಗಕ್ಕೆ ಮತ್ತೊಂದು ತಂಡವನ್ನು ಕಳಿಸಿ ದೆವ್ವದ ಚೇಷ್ಟೆ ಮೂಲಕ ಇಡೀ ಕುಟುಂಬವನ್ನು ನಿರ್ನಾಮ ಮಾಡುವುದು ನಾಯಕಿ ಅಪ್ಪನ ಸಂಚು. ಆದರೆ ಆ ಬಂಗಲೆಯಲ್ಲಿ ಅಸಲಿ ದೆವ್ವ ಒಂದು ಪೆಟ್ಟಿಗೆಯಲ್ಲಿ ಬಂಧಿತವಾಗಿರುತ್ತದೆ. ಶೋಭರಾಜ್ ಹಾಗೂ ತಂಡ ನಕಲಿ ದೆವ್ವದ ನಾಟಕ ಆಡುವ ವೇಳೆ ಅಸಲಿ ದೆವ್ವ ಪೆಟ್ಟಿಗೆಯಿಂದ ಹೊರಬಂದು ಪರಿಸ್ಥಿತಿ ಸಂದಿಗ್ಧವಾಗುತ್ತದೆ. ನಾಯಕಿ ಸಾವು-ಬದುಕಿನ ಹೋರಾಟದಲ್ಲಿರುವಾಗ ನಾಯಕ ದೊಡ್ಡ ಸಾಹಸಕ್ಕೆ ಮುಂದಾಗುತ್ತಾನೆ. ದೆವ್ವದ ಶಕ್ತಿಯಿಂದ ಬಂಧಿಯಾಗುವ ನಾಯಕ ಕೊನೆಗೆ ಹೇಗೆ ಅದರಿಂದ ಪಾರಾಗುತ್ತಾನೆ. ತನ್ನ ಪ್ರೀತಿಯನ್ನು ವಾಪಸ್ ಪಡೆಯುತ್ತಾನಾ ಎಂಬುದನ್ನು ತಿಳಿಯಲು ನೀವು ಥಿಯೇಟರ್​​ಗೆ ಹೋಗಬೇಕು.

‘ಗಿಮಿಕ್’ ಹೆಸರಿಗೆ ತಕ್ಕಂತೆ ಅಲ್ಲಲ್ಲಿ ಪ್ರೇಕ್ಷಕರಿಗೆ ಚಮಕ್ ನೀಡುತ್ತದೆ. ದುಡ್ಡು, ದ್ವೇಷಕ್ಕಿಂತ ಮಾನವೀಯತೆ ಮುಖ್ಯ ಎಂಬುದನ್ನು ಕೂಡಾ ಸಿನಿಮಾದಲ್ಲಿ ಹೇಳಲಾಗಿದೆ. ಗಣೇಶ್​​​ಗೆ ಇಲ್ಲಿ ಪಟಪಟ ಮಾತಿದೆ, ಸಾಹಸ ದೃಶ್ಯವಿದೆ, ರೋನಿಕಾ ಸಿಂಗ್ ಜೊತೆ ರೊಮಾನ್ಸ್ ಮಾಡಿದ್ದಾರೆ. ಇನ್ನು ರೋನಿಕಾ ಸಿಂಗ್​ ಮೊದಲ ಪ್ರಯತ್ನದಲ್ಲಿ ಗಮನ ಸೆಳೆಯುವುದಕ್ಕೆ ಕಾರಣ ಅವರ ಮುದ್ದು ಮುಖ. ಪೋಷಕರಲ್ಲಿ ಶೋಭರಾಜ್ ಹೆಚ್ಚು ಗಮನ ಸೆಳೆಯುತ್ತಾರೆ. ಚಿ. ಗುರುದತ್ (ಚಿ.ಉದಯಶಂಕರ್ ಅವರ ಮಗ), ಮಂಡ್ಯ ರಮೇಶ್, ಸುಂದರ್ ರಾಜ್, ರವಿಶಂಕರ್ ಗೌಡ ಅವರು ಹಾಸ್ಯದ ದೃಶ್ಯಗಳಲ್ಲಿ ಭೇಷ್ ಎನಿಸಿಕೊಳ್ಳುತ್ತಾರೆ. ಅರ್ಜುನ್ ಜನ್ಯ ಅವರ ಎರಡು ಹಾಡುಗಳು ಗುನುಗುವಂತಿದೆ. ಛಾಯಾಗ್ರಾಹಕ ವಿಜ್ಞೇಶ್ ಅವರ ನೈಟ್ ಎಫೆಕ್ಟ್ ದೃಶ್ಯಗಳು ಮತ್ತು ಹಿನ್ನೆಲೆ ಸಂಗೀತ ಕೂಡಾ ಗಮನ ಸೆಳೆಯುತ್ತದೆ. ಆದರೆ ಚಿತ್ರದ ಅವಧಿ ಹೆಚ್ಚಾಯಿತು ಎನ್ನಿಸುತ್ತದೆ. ಒಟ್ಟಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೆ ಸಿನಿಮಾ ಮೆಚ್ಚುಗೆ ಆಗುವುದರಲ್ಲಿ ಸಂದೇಹವಿಲ್ಲ.

ಗಿಮಿಕ್ ಚಿತ್ರ ವಿಮರ್ಶೆ

ಹಳೆ ಸೂತ್ರ ಹೊಸ ಕಳೆ!

ಅವದಿ – 152 ನಿಮಿಷ, ಕ್ಯಾಟಗರಿ – ಹಾರರ್ ಥ್ರಿಲ್ಲರ್, ರೇಟಿಂಗ್ – 3/5

ಚಿತ್ರ – ಗಿಮಿಕ್, ನಿರ್ಮಾಪಕ – ದೀಪಕ್ ಸಾಮಿ, ನಿರ್ದೇಶನ – ನಾಗಣ್ಣ, ಸಂಗೀತ – ಅರ್ಜುನ್ ಜನ್ಯ, ಛಾಯಾಗ್ರಹಣ – ವಿಜ್ಞೆಶ್, ತಾರಾಗಣ – ಗಣೇಶ್, ರೋನಿಕ ಸಿಂಗ್, ಸುಂದರ್ ರಾಜ್, ಶೋಭಾರಾಜ್, ಮಂಡ್ಯ ರಮೇಶ್, ಚಿ ಗುರುದತ್, ರವಿಶಂಕರ್ ಗೌಡ, ಸಂಗೀತ, ಶ್ವೇತ ಹಾಗೂ ಇತರರು.

ಇದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾ ಸ್ವಾತಂತ್ರ್ಯ ದಿನಾಚರಣೆ ಅಂದೆ ಬಿಡುಗಡೆ ಆಗಿದೆ. ಹಳೆ ಮಧ್ಯವನ್ನು ಹೊಸ ಬಾಟಲಿ ಅಲ್ಲಿ ತುಂಬಿದ ಹಾಗಿದೆ (ಆನ್ ಓಲ್ಡ್ ವೈನ್ ಇನ್ ನ್ಯೂ ಬಾಟಿಲ್). ಅದಕ್ಕೆ ಕಾರಣ ಚಿತ್ರದ ಕ್ಲೈಮ್ಯಾಕ್ಸ್. ಆಪ್ತ ಮಿತ್ರ ಚಿತ್ರದಲ್ಲಿ ಅನುಸರಿಸಿದ ರೀತಿ ಇಲ್ಲಿ ಜ್ಞಾಪಕ ಮಾಡುತ್ತದೆ. ಹೇಳಿ ಕೇಳಿ ಇದು ತಮಿಳು ಸಿನಿಮಾ 2016 ರಲ್ಲಿ ಬಿಡುಗಡೆ ಆದ ದಿಲ್ಲುಕ್ಕು ದುಡ್ಡು ರೀಮೇಕ್.

ಗೋಲ್ಡನ್ ಸ್ಟಾರ್ ಗಣೇಶ್ ಮೊದಲ ಬಾರಿಗೆ ಹಾರರ್ ಹಾಗೂ ಥ್ರಿಲ್ಲರ್ ಕಥಾ ವಸ್ತುವನ್ನು ತಮಿಳಿನ ಸಂತಾನಮ್ ಮಾಡಿದ ಪಾತ್ರವನ್ನು ಮಾಡಿದ್ದಾರೆ. ಮೊದಲಾರ್ಧದಲ್ಲಿ ಸ್ವಲ್ಪ ತಮಾಷೆ, ದ್ವಿತೀಯಾರ್ದದಲ್ಲಿ ಹಾರರ್ ಹಾಗೂ ತ್ರಿಲ್ ನೋಡಿಸಿಕೊಂಡು ಹೋಗುತ್ತದೆ. ಕೊನೆಗೆ ಬನಶಂಕರಿ ದೇವಿಯ ತ್ರಿಶೂಲ ನಾಯಕ ಹಾಗೂ ನಾಯಕಿಯನ್ನು ದುಷ್ಟ ಶಕ್ತಿ ಇಂದ ಕಾಪಡೋದು.

ಅವನು ಗಣಿ. ಅವಳು ರಾಣಿ. ಇವರಿಬ್ಬರ ಮಧ್ಯೆ ಬಡವ ಹಾಗೂ ಶ್ರೀಮಂತಿಕೆ ಅಡ್ಡವಾಗಿದೆ. ಆದರೂ ಮಗಳು ರಾಣಿ ಒಪ್ಪಿಕೊಂಡಳಲ್ಲ ಎಂದು ದುಷ್ಟ ಅಪ್ಪ (ಚಿ.ಗುರುದತ್) ಒಂದು ಷಡ್ಯಂತ್ರವನ್ನು ಹೂಡುತ್ತಾನೆ. 40 ವರ್ಷದಿಂದ ಬಾಗಿಲು ತೆಗೆಯದ ಬಂಗಲೆ ಒಳಗೆ ನಾಯಕ ಗಣಿ ಕುಟುಂಬ ಬರುವಂತೆ ಮಾಡುತ್ತಾನೆ. ಅದೇ ಜಾಗಕ್ಕೆ ಒಂದು ತಂಡವನ್ನು ರಚಿಸಿ ದೆವ್ವದ ಚೆಷ್ಟೆ ಇಂದ ಇಡೀ ಕುಟುಂಬವನ್ನು ನಿರ್ನಾಮ ಮಾಡುವುದು ಸಂಚು. ಆದರೆ ಆ ಬಂಗಲೆಯಲ್ಲಿ ಅಸಲಿ ದೆವ್ವ ಒಂದು ಪೆಟ್ಟಿಗೆಯಲ್ಲಿ ಬಂದಿತವಾಗಿದೆ. ಈ ದೆವ್ವವನ್ನು ಬಂದಿಸುವವರು ಬುದ್ದಿಶ್ಟ್ ಮಾಂಕ್ಸ್! ಆದರೆ ಈ ಅಡಗಿರುವ ದೆವ್ವಕ್ಕೆ ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರನ ಬೆಳಕು ಬಿದ್ದರೆ ಆಚೆ ಬರುವುದು. ಅದರಿಂದ ಅನೇಕ ಅಹಿತಕರ ಘಟನೆಗಳು ಸಂಭವಿಸಬಹುದು.

ಈ ಮಧ್ಯೆ ಗಣಿ ಕುಟುಂಬವನ್ನು ಹೆದರಿಸಿ ನಾಶ ಮಾಡಲು ಶೋಭಾರಾಜ್ ತಂಡ ನಕಲಿ ದೆವ್ವದ ನಾಟಕದಲ್ಲಿ ಹರ ಸಾಹಸ ಪಡುತ್ತಾರೆ. ಕೊನೆಗೆ ಅಸಲಿ ದೆವ್ವ ಪೆಟ್ಟಿಗೆಯಿಂದ ಆಚೆ ಬಂದು ಸಂದಿಗ್ದ ಪರಿಸ್ಥಿತಿ ತಲುಪುತ್ತದೆ. ನಾಯಕಿಯ ಸಾವು ಬದುಕಿನ ಹೋರಾಟದಲ್ಲಿ ನಾಯಕ ಗಣಿ ದೊಡ್ಡ ಸಾಹಸಕ್ಕೆ ಮುಂದಾಗುತ್ತಾನೆ. ದೆವ್ವದ ಶಕ್ತಿ ಮುಂದೆ ಬಂದಿ ಆಗುವ ಗಣಿ ಬನಶಂಕರಿ ದೇವಿ ತ್ರಿಶೂಲವನ್ನು ಬಳಸಿ ತನ್ನ ಆಪತ್ತನ್ನು ದೂರ ಮಾಡಿಕೊಳ್ಳುತ್ತಾನೆ.

ಗಿಮಿಕ್ ಹೆಸರಿಗೆ ತಕ್ಕಂತೆ ಅಲ್ಲಲ್ಲಿ ಪ್ರೇಕ್ಷಕರಿಗೆ ಚಮಕ್ ನೀಡುತ್ತದೆ. ದುಡ್ಡು ದ್ವೇಷಕ್ಕಿಂತ ಮಾನವೀಯತೆ ಮುಖ್ಯ ಎಂದು ಸಹ ಸಾರುತ್ತದೆ. ಈ ಚಿತ್ರದಲ್ಲಿ ಪಾತ್ರವರ್ಗ ಅನುಭವಿಸುವ ಸಂಕಷ್ಟ, ಹಾರರ್, ತ್ರಿಲ್ ಪ್ರೇಕ್ಷಕರಿಗೆ ತಿಳಿದಿರುತ್ತದೆ. ಹಾಗಾಗಿ ಪ್ರೇಕ್ಷಕ ಹೀಗೆ ಆಗುವುದು ಎಂದು ಊಹೆ ಸಹ ಮಾಡಿಬಿಡಬಹುದು.

ಇದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಮತ್ತೊಂದು ಸಿನಿಮಾ. ಅವರಿಗೆ ಇಲ್ಲಿ ಪಟಪಟ ಮಾತಿದೆ, ಸಾಹಸ ದೃಶ್ಯವಿದೆ, ರೋನಿಕ ಸಿಂಗ್ ಜೊತೆ ರೊಮಾನ್ಸ್ ಮಾಡುವುದಕ್ಕೆ ಅವಕಾಶವಿದೆ. ಅವೆಲ್ಲವನ್ನು ಸಲೀಸಾಗಿ ಅವರು ನಿರ್ವಹಿಸಿದ್ದಾರೆ. ರೋನಿಕ ಸಿಂಗ್ ಮೊದಲ ಪ್ರಯತ್ನದಲ್ಲಿ ಗಮನ ಸೆಳೆಯುವುದಕ್ಕೆ ಕಾರಣ ಅವರ ಮುದ್ದಾದ ಸೌಂದರ್ಯ.

ಪೋಷಕರಲ್ಲಿ ಶೋಭಾರಾಜ್ ಹೆಚ್ಚು ಗಮನ ಸೆಳೆಯುತ್ತಾರೆ. ಚಿ ಗುರುದತ್ (ಚಿ ಉದಯಶಂಕರ್ ಅವರ ಮಗ), ಮಂಡ್ಯ ರಮೇಶ್, ಸುಂದರ್ ರಾಜ್, ರವಿಶಂಕರ್ ಗೌಡ ಅವರು ಹಾಸ್ಯದ ದೃಶ್ಯಗಳಲ್ಲಿ ಬೇಷ್ ಅನ್ನಿಸಿಕೊಳ್ಳುತ್ತಾರೆ.

ಅರ್ಜುನ್ ಜನ್ಯ ಅವರ ಎರಡು ಹಾಡುಗಳು ಗುನುಗುವಂತಿದೆ – ಲಚಮಿ ಲಚಮಿ ಟಚ್ ಮೀ ಟಚ್ ಮೀ....ಹಾಗೂ ಹೆ ಹುಡುಗಿ ಸ್ಕೆಚ್ ಹಾಕಿ ಕೊಳ್ಳುತ್ತೀಯ....ಗಮನ ಸೆಳೆಯುವ ಹಾಡುಗಳು. ಛಾಯಾಗ್ರಾಹಕ ವಿಜ್ಞೆಶ್ ಅವರ ನೈಟ್ ಎಫೆಕ್ಟ್ ದೃಶ್ಯಗಳು ಮತ್ತು ಹಿನ್ನಲೆ ಸಂಗೀತ ಸಹ ಗಮನ ಸೆಳೆಯುತ್ತದೆ. ಆದರೆ ಚಿತ್ರದ ಅವದಿ ಹೆಚ್ಚಾಯಿತು. ಕೆಲವು ಅನಾವಶ್ಯಕ ಸನ್ನಿವೇಶಗಳನ್ನು ತುಂಡರಿಸಬಹುದಿತ್ತು.

ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೆ ಅಲ್ಲಲ್ಲಿ ಮೆಚ್ಚುಗೆ ಆಗುವುದರಲ್ಲಿ ಸಂದೇಹವಿಲ್ಲ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.