ಯೋಗಾನಂದ್ ಅವರು ಧರ್ಮಸ್ಥಳದ ಶ್ರೀ ಮಂಜುನಾಥನ ಸಾನಿಧ್ಯದಲ್ಲಿರುವಾಗಲೇ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾಕ್ಕೆ ನಿರ್ದೇಶನ ಮಾಡುವ ಕರೆ ಬಂದಿತಂತೆ. ಅವರು ಇದು ದೇವರ ವರದಾನ ಎಂದು ಸ್ವೀಕರಿಸಿದ್ದಾರೆ.
ಬೆಂಗಳೂರಿನ 'ಆಚಾರ್ಯ ಪಾಠಶಾಲೆ' ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮುಗಿಸಿದ ಯೋಗಾನಂದ್ ಅವರಿಗೆ ಮೊದಲು ಅವಕಾಶ ಸಿಕ್ಕಿದ್ದು, ಬಿರುಗಾಳಿ ಚಿತ್ರಕ್ಕೆ. ನೃತ್ಯ ನಿರ್ದೇಶಕ ಹಾಗೂ ನಿರ್ದೇಶಕ ಎ.ಹರ್ಷ ಅವರಿಂದ ‘ಬಿರುಗಾಳಿ’ ಸಿನಿಮಾಕ್ಕೆ ಅವಕಾಶ ಇವರಿಗೆ ತೇಲಿ ಬಂತು. ಇವರು ಅಲ್ಲಿಂದ ಕೇವಲ ಸಂಭಾಷಣೆ ಅಷ್ಟೇ ಬರೆಯುತ್ತಾ ಕೂರಲಿಲ್ಲ.ಅವರು ನಿರ್ದೇಶನ ಹೇಗೆ ಮಾಡುವುದು ಎಂದು ತಿಳಿದುಕೊಳ್ಳುತ್ತ ಹೋದರೂ. 11 ಕನ್ನಡ ಸಿನಿಮಾಗಳಿಗೆ ಸಂಭಾಷಣೆ ಅಲ್ಲದೇ ಕೋ ಡೈರೆಕ್ಟರ್ ಆಗಿ ಸಹ ಜ್ಞಾನಾರ್ಜನೆ ಮಾಡಿಕೊಂಡರು.
'ಬಿರುಗಾಳಿ' ಇಂದ ಸಿನಿಮಾಗಳಿಗೆ ಅಕ್ಷರ ನೈವೇದ್ಯೆ ಉಣಿಸಿದ ಯೋಗಾನಂದ್ ಆಮೇಲೆ ಚಿಂಗಾರಿ, ತುಘಲಕ್, ಭಜರಂಗಿ, ಆಟೋ ರಾಜ, ವಜ್ರಕಾಯ, ಮುಕುಂದ ಮುರಾರಿ, ಚೌಕ....ಹೀಗೆ ದೊಡ್ಡ ಹೀರೋಗಳ ಸಿನಿಮಾಗಳು ಅವರ ಪಾಲಿಗೆ ಒದಗಿಬಂತು. ಈಗ ಶರಣ್ ಅಭಿನಯದ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾಕ್ಕೆ ಸಂಭಾಷಣೆ ಅಲ್ಲದೇ ನಿರ್ದೇಶನಕ್ಕೂ ಅವರು ಕಾಲಿಟ್ಟಿದ್ದಾರೆ.
ಈ ಚಿತ್ರಕ್ಕೆ ಮೊದಲು ಯೋಗಾನಂದ್ ಅವರ ಹೆಸರು ಸೂಚಿಸಿದ್ದು, ತರುಣ್ ಕಿಶೋರ್ ಸುಧೀರ್. ಆಮೇಲೆ ಮಲಯಾಳಂ ಸಿನಿಮಾ ‘ಟೂ ಕನ್ಟ್ರೀಸ್’ ಕಥೆಯ ಹೊಸ ನಿರೂಪಣೆಯನ್ನು ಇವರು ತಯಾರಿಸಿದರು. ಇದನ್ನು ಕೇಳಿ ಶರಣ್ ಅವರಿಗೆ ಇನ್ನಿಲ್ಲದಂತೆ ಖುಷಿ ಆಯಿತಂತೆ. ಇದಕ್ಕೂ ಮುಂಚೆ ಎರಡು ಕತೆಗಳನ್ನು ಶರಣ್ ಅವರಿಗೆ ವಿವರಿಸಿದ್ದರಂತೆ. ಸದ್ಯ ಅಧ್ಯಕ್ಷ ಇನ್ ಅಮೆರಿಕ ಸಿನಿಮಾ ರೆಡಿಯಾಗಿದೆ.
ಇನ್ನು ಈ ಚಿತ್ರದಿಂದ ಹಲವು ಹೊಸದು ನೆರವೇರಿದೆ. ಶರಣ್ ಚಿತ್ರಕ್ಕೆ ಮೊದಲ ಬಾರಿ ವಿ.ಹರಿಕೃಷ್ಣ ಸಂಗೀತವಿದೆ. ಚಿತ್ರಕ್ಕೆ ಮೂವರು ಛಾಯಾಗ್ರಾಹಕರು ಸುಧಾಕರ್ ರಾಜ್, ಸಿದ್ದಾರ್ಥ್, ಅನಿಶ್ ತರುಣ್ ಕುಮಾರ್ ಕೆಲಸ ಮಾಡಿದ್ದಾರೆ. ಮೊದಲ ಬಾರಿಗೆ ಹೈದರಾಬಾದ್ನಿಂದ ಮೀಡಿಯಾ ಫಿಲ್ಮ್ ಫ್ಯಾಕ್ಟರೀ ತಂಡ ಕನ್ನಡ ಚಿತ್ರರಂಗಕ್ಕೆ ಬಂದು ಬಹು ಕೋಟಿ ಚಿತ್ರ ನಿರ್ಮಾಣ ಮಾಡಿದೆ.