ETV Bharat / sitara

ಕನ್ನಡ-ತಮಿಳು ಸ್ಟಾರ್​​​​​​​​​​​​​​​​​​​​​​​​​​ ನಟರನ್ನು ಸೇರಿಸಿ ಸಿನಿಮಾ ಮಾಡಲಿದ್ದಾರಾ ಭಟ್ರು...? - Yogarajbhat film with Prabhudeva

'ಗಾಳಿಪಟ-2' ಚಿತ್ರದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಯೋಗರಾಜ್​ ಭಟ್ ಈ ಚಿತ್ರದ ನಂತರ ಶಿವರಾಜ್​ಕುಮಾರ್ ಹಾಗೂ ಪ್ರಭುದೇವ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Yogaraj bhat new film
ಯೋಗರಾಜ್ ಭಟ್
author img

By

Published : Sep 18, 2020, 2:08 PM IST

'ಮುಂಗಾರು ಮಳೆ' ಚಿತ್ರದ ನಂತರ ಖ್ಯಾತಿಯ ಉತ್ತುಂಗಕ್ಕೆ ಏರಿದ ನಿರ್ದೇಶಕ ಯೋಗರಾಜ್ ಭಟ್​​​​​​​​​​​​​​ ಈಗ ಮತ್ತೊಂದು ದೊಡ್ಡ ಸಿನಿಮಾ ಮಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ. ಸದ್ಯಕ್ಕೆ 'ಗಾಳಿಪಟ-2' ಚಿತ್ರದಲ್ಲಿ ಭಟ್ಟರು ಬ್ಯುಸಿ ಇದ್ದು ಈ ಚಿತ್ರದ ನಂತರ ಮಲ್ಟಿಸ್ಟಾರ್​​​​​ಗಳ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Yogaraj bhat new film
ಶಿವರಾಜ್​ಕುಮಾರ್

ವಿಶೇಷ ಎಂದರೆ ಈ ಚಿತ್ರದಲ್ಲಿ ಕನ್ನಡ ಸ್ಟಾರ್ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಹಾಗೂ ತಮಿಳು ಖ್ಯಾತ ನಟ, ಡ್ಯಾನ್ಸಿಂಗ್ ಸ್ಟಾರ್​​ ಪ್ರಭುದೇವ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಕ್ಕೂ ಮುನ್ನ ಉಪೇಂದ್ರ ಹಾಗೂ ಪ್ರಭುದೇವ ಜೊತೆಯಾಗಿ ನಟಿಸಿದ್ದ ಹೆಚ್​​ಟುಒ ಸಿನಿಮಾ ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಈಗ ಶಿವಣ್ಣ ಹಾಗೂ ಪ್ರಭುದೇವ ಸೇರಿದರೆ ಮತ್ತೆ ಇದು ಹಿಟ್ ಸಿನಿಮಾವಾಗುವುದರಲ್ಲಿ ಸಂದೇಹವಿಲ್ಲ ಎಂಬುದು ಗಾಂಧಿನಗರ ಸಿನಿಪಂಡಿತರ ಮಾತು.

Yogaraj bhat new film
ಪ್ರಭುದೇವ

ಯೋಗರಾಜ್​ ಭಟ್ ಈಗಾಗಲೇ ಪ್ರಭುದೇವ ಹಾಗೂ ಶಿವರಾಜ್​ಕುಮಾರ್ ಜೊತೆ ಮಾತನಾಡಿದ್ದು ಶಿವಣ್ಣ ಒಕೆ ಎಂದಿದ್ದಾರಂತೆ. ಪ್ರಭುದೇವ ಕೂಡಾ ಗ್ರೀನ್ ಸಿಗ್ನಲ್ ನೀಡಿದ್ದಲ್ಲಿ ಶೀಘ್ರವೇ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಈ ಮಲ್ಟಿಸ್ಟಾರರ್ ಸಿನಿಮಾಗೆ 'ಬೆಲ್​​ಬಾಟಮ್ ' ಚಿತ್ರಕ್ಕೆ ಕಥೆ ಬರೆದ ದಯಾನಂದ ಟಿ.ಕೆ ಜೊತೆಯಾಗಿದ್ದಾರಂತೆ. ಶಿವರಾಜ್​ಕುಮಾರ್ ಈಗ ಭಜರಂಗಿ 2, ಆರ್​ಡಿಎಕ್ಸ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಪ್ರಭುದೇವ ರಾಧೆ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಗಳ ನಂತರ ಬಹುಶ: ಯೋಗರಾಜ್​​​​ ಭಟ್ ಸಿನಿಮಾ ಆರಂಭವಾಗುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.