ಸ್ಯಾಂಡಲ್ವುಡ್ ಮುದ್ದಾದ ಜೋಡಿಗಳಾದ ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ಮಗನ ನಾಮಕರಣವನ್ನು ಸರಳವಾಗಿ ತಮ್ಮ ಹಾಸನದ ಹೊಸ ಫಾರ್ಮ್ಹೌಸ್ನಲ್ಲಿ ಮಾಡಿದ್ದರು. ಇನ್ನೂ ಶೂಟಿಂಗ್ ಆರಂಭವಾಗದ ಕಾರಣ ಯಶ್ ಸದ್ಯಕ್ಕೆ ಕುಟುಂಬದವರೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಯಶ್ ಹಾಗೂ ರಾಧಿಕಾ ಆಗ್ಗಾಗ್ಗೆ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಕಳೆದ 4 ದಿನಗಳ ಹಿಂದೆಯಷ್ಟೇ ಯಶ್ ತಮ್ಮ ಫಾರ್ಮ್ ಹೌಸ್ನಲ್ಲಿ ಮಗಳ ಕೈಯಿಂದ ಹಸುವಿಗೆ ಬಾಳೆಹಣ್ಣು ತಿನ್ನಿಸುತ್ತಿರುವ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ರಾಧಿಕಾ ತಾವು ಸೆಲ್ಫಿ ತೆಗೆದುಕೊಳ್ಳುವಾಗ ಅವರಿಗೆ ಅರಿವಿಲ್ಲದೆ ಯಶ್ ತೆಗೆದಿರುವ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
![Yash clicked Radhika photo](https://etvbharatimages.akamaized.net/etvbharat/prod-images/kn-bng-01-yash-radhika-pandithge-kotta-surprise-enu-video-7204735_15092020125853_1509f_1600154933_529.jpg)
ರಾಧಿಕಾ ಸೆಲ್ಫಿ ತೆಗೆದುಕೊಳ್ಳುವಾಗ ಆಕೆಗೆ ಅರಿವಿಲ್ಲದೆ ಯಶ್ ಫೋಟೋ ಕ್ಲಿಕ್ಕಿಸಿದ್ದಾರೆ. ನಂತರ ವಿಡಿಯೋವೊಂದನ್ನು ಮಾಡಿದ್ದಾರೆ. ಯಶ್ ಆ ಫೋಟೋವನ್ನು ರಾಧಿಕಾಗೆ ತೋರಿಸಿದಾಗಲೇ ಅದರ ಬಗ್ಗೆ ರಾಧಿಕಾಗೆ ತಿಳಿದಿದ್ದು. ಈ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಧಿಕಾ ಪಂಡಿತ್, ಸೆಲ್ಫಿ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆ್ಯಂಗಲ್, ಶಾಟ್ ಪರ್ಫೆಕ್ಟ್ ಆಗಿ ಬರುವಂತೆ ಸೆಲ್ಫಿ ತೆಗೆಯುವುದು ಒಂದು ಕಲೆ ಎಂದು ಬರೆದುಕೊಂಡಿದ್ದಾರೆ.