ಬಾಲಿವುಡ್ನ ದಿವಂಗತ ನಟ ಇರ್ಫಾನ್ ಖಾನ್ ಹಿರಿಯ ಪುತ್ರ ಬಬಿಲ್ ತಮ್ಮ ತಂದೆಯ ಜೊತೆಗಿರುವ ಅಪರೂಪದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಈ ಫೋಟೋ ಹಾಕಿ ಬರೆದುಕೊಂಡಿರುವ ಬಬಿಲ್, ಬಹುಶಃ ಅವರು ಮೊದಲ ಬಾರಿಗೆ ವೇದಿಕೆಯಲ್ಲಿ ನಾನು ಪ್ರದರ್ಶಿಸುವುದನ್ನು ನೋಡಿದ್ದು ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
- " class="align-text-top noRightClick twitterSection" data="
">
ಬಬಿಲ್ ಶೇರ್ ಮಾಡಿರುವ ಫೋಟೋದಲ್ಲಿ ಇರ್ಫಾನ್ ಬಬಿಲ್ ಎದುರಿಗೆ ನಿಂತು ಮಗನ ಜೊತೆ ಸಂಭಾಷಣೆಯಲ್ಲಿ ತೊಡಗಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಳು, ಇರ್ಫಾನ್‌ರನ್ನು ಮಿಸ್ ಮಾಡಿಕೊಂಡಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇರ್ಫಾನ್‌ರನ್ನು ಜೀವಂತವಾಗಿರಿಸಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.
ಇರ್ಫಾನ್ ಕಳೆದ ಏಪ್ರಿಲ್ 29ರಂದು ಕ್ಯಾನ್ಸರ್ನಿಂದ ಮುಂಬೈನಲ್ಲಿ ಸಾವನ್ನಪ್ಪಿದ್ದರು. ಇನ್ನು, ಕಳೆದ ಕೆಲ ದಿನಗಳ ಹಿಂದೆ ಇರ್ಫಾನ್ ಖಾನ್ ಅವರ ಆರನೇ ತಿಂಗಳ ತಿಥಿ ದಿನ ಇರ್ಫಾನ್ ಅವರ ಕೆಲವು ಹಳೆಯ ಫೋಟೋಗಳನ್ನು ಬಬಿಲ್ ಶೇರ್ ಮಾಡಿದ್ದರು.