ETV Bharat / sitara

ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ರೆಡಿಯಾದ ವೆಡ್ಡಿಂಗ್ ಗಿಫ್ಟ್ ಚಿತ್ರತಂಡ - ಚಿತ್ರೀಕರಣ ಮುಗಿಸಿದ ವೆಡ್ಡಿಂಗ್ ಗಿಫ್ಟ್​ ಚಿತ್ರತಂಡ

ನಾನು ಚಿತ್ರೀಕರಣ ಮುಗಿಸಿ ಬಂದ ಮೇಲೆ ರಾತ್ರಿ ಕೊರಗುತ್ತಿದ್ದೆ. ನಾನು ಮಾಡಿದ್ದು ಸರಿನಾ? ತಪ್ಪಾ? ಅಂತಾ ಯೋಚಿಸುತ್ತಿದ್ದೆ. ನನ್ನ ತಂಗಿ ಇದನ್ನು ಸರಿ ಮಾಡಿದ್ದಳು. ನೀನು ಚಿತ್ರದ ಪಾತ್ರಗಳನ್ನು ಚಿತ್ರೀಕರಣ ಮುಗಿಯುತ್ತಿದ್ದ ಹಾಗೆ ಅಲ್ಲೇ ಬಿಟ್ಟು ಬಿಡಬೇಕು. ಮನೆಗೆ ಬಂದ ಮೇಲೆ ನೀನು ಸೋನು ಗೌಡ ಆಗಿಯೇ ಇರಬೇಕು ಎಂದಿದ್ದಳು..

wedding-gift-pictures
ವೆಡ್ಡಿಂಗ್ ಗಿಫ್ಟ್ ಚಿತ್ರತಂಡ
author img

By

Published : Jan 7, 2022, 4:12 PM IST

ಕಳೆದ ಎರಡು ವರ್ಷಗಳಿಂದ ಕನ್ನಡ ಚಿತ್ರರಂಗದ ಮೇಲೆ ಕೊರೊನಾ ಎಂಬ ಕರಿ ನೆರಳು ಆವರಿಸುತ್ತಲೇ ಇದೆ. ಈ ಮಧ್ಯೆ ಅದೆಷ್ಟೋ ಸಿನಿಮಾಗಳು ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗುತ್ತಿವೆ. ಈ ಸಾಲಿನಲ್ಲಿ ಓಂ ಸಿನಿಮಾ ಖ್ಯಾತಿಯ ಪ್ರೇಮಾ ಹಾಗೂ ಸೋನುಗೌಡ, ನಿಶಾನ್ ನಾಣಯ್ಯ ಅಭಿನಯದ ವೆಡ್ಡಿಂಗ್ ಗಿಫ್ಟ್ ಎಂಬ ಸಿನಿಮಾ ಕೂಡ ಒಂದು.

ಈ ಚಿತ್ರ ಸೈಲೆಂಟ್ ಆಗಿ ಚಿತ್ರೀಕರಣ ಮಾಡಿ ಬಿಡುಗಡೆ ಹಂತಕ್ಕೆ ಬಂದು ತಲುಪಿದೆ. ನಿರ್ದೇಶಕ ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ ವೆಡ್ಡಿಂಗ್ ಗಿಫ್ಟ್ ಚಿತ್ರದ ಚಿತ್ರೀಕರಣ ನಿಗದಿಗಿಂತ ಒಂದು ದಿನ‌ ಮುಂಚಿತಾವಾಗಿಯೇ ಚಿತ್ರೀಕರಣ ಮುಗಿಸಲಾಗಿದೆ. ಉಪೇಂದ್ರ ಮತ್ತೆ ಹುಟ್ಟಿ ಬಾ ಸಿನಿಮಾ ನಂತರ ಪ್ರೇಮಾ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

wedding-gift-picture
ವೆಡ್ಡಿಂಗ್ ಗಿಫ್ಟ್ ಚಿತ್ರತಂಡ

'ಇದೇ ಮೊದಲ ಬಾರಿಗೆ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ಎಲ್ಲಾ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಪಾತ್ರ ಚೆನ್ನಾಗಿದ್ದರಷ್ಟೇ ಒಪ್ಪಿಕೊಳ್ಳುವುದು. ಈ ಚಿತ್ರದ ಕಥೆ ಬಗ್ಗೆ ಒಂದೆಳೆ ಹೇಳಿದರೂ, ಪೂರ್ತಿ ಹೇಳಿದಂತೆ. ಉತ್ತಮ ಸಂದೇಶವಿರುವ ಚಿತ್ರದಲ್ಲಿ ನಟಿಸಿರುವ ಖುಷಿಯಿದೆ' ಎಂದಿದ್ದಾರೆ ನಟಿ ಪ್ರೇಮ. ಸೋನುಗೌಡ ಮಾತನಾಡಿ, ನಾನು ಚಿತ್ರೀಕರಣ ಮುಗಿಸಿ ಬಂದ ಮೇಲೆ ರಾತ್ರಿ ಕೊರಗುತ್ತಿದ್ದೆ. ನಾನು ಮಾಡಿದ್ದು, ಸರಿನಾ? ತಪ್ಪಾ? ಅಂತಾ ಯೋಚಿಸುತ್ತಿದ್ದೆ. ನನ್ನ ತಂಗಿ ಇದನ್ನು ಸರಿ ಮಾಡಿದ್ದಳು.

ನೀನು ಚಿತ್ರದ ಪಾತ್ರಗಳನ್ನು ಚಿತ್ರೀಕರಣ ಮುಗಿಯುತ್ತಿದ್ದ ಹಾಗೆ ಅಲ್ಲೇ ಬಿಟ್ಟು ಬಿಡಬೇಕು.‌ ಮನೆಗೆ ಬಂದ ಮೇಲೆ ನೀನು ಸೋನು ಗೌಡ ಆಗಿಯೇ ಇರಬೇಕು ಎಂದಿದ್ದಳು. ಈಗ ಹಾಗೆ ಮಾಡುತ್ತಿದ್ದೇನೆ. ನಾನು ಈವರೆಗೂ ಇಂತಹ ಪಾತ್ರ ಮಾಡಿಲ್ಲ ಅನ್ನಬಹುದು. ಆಕಾಂಕ್ಷ ಎಂಬ ಪಾತ್ರದಲ್ಲಿ ಕಾಣಿಸಿದ್ದೇನೆ. ನೊಂದ ಮನಸ್ಸುಗಳಿಗೆ ಹತ್ತಿರವಾಗುವ ಪಾತ್ರ ನನ್ನದು ಅಂದರು.

ಸೋನುಗೌಡ ಜೊತೆ ನಾಯಕ ನಟನಾಗಿ ಕಾಣಿಸಿರುವ ನಿಶಾನ್ ನಾಣಯ್ಯ ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ನಿರ್ದೇಶಕ ವಿಕ್ರಂ ಪ್ರಭು ಮಾತನಾಡಿ, ನಾನು ಮೂಲತಃ ಮಂಗಳೂರಿನವನು. ಈಗ ಪುಣೆ ವಾಸಿ. ಹದಿನೆಂಟು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ ಲವ್ ಚಿತ್ರಕ್ಕೆ ಕೆಲಸ ಮಾಡಿದ್ದೆ. ಆನಂತರ ಚಿತ್ರರಂಗದಿಂದ ದೂರವಾಗಿದ್ದೆ. ಈಗ ಮತ್ತೆ ಬಂದಿದ್ದೀನಿ. ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದೇನೆ ಎಂದರು.

ನಮ್ಮ ಪ್ರಕಾರ, ಡಿಸೆಂಬರ್ 31ರಂದು ಚಿತ್ರೀಕರಣ ಪೂರ್ಣವಾಗಬೇಕಿತ್ತು. ಒಂದು ದಿನ ಮೊದಲೇ ಅಂದರೆ 30ರಂದೇ ಚಿತ್ರೀಕರಣ ಮುಗಿದಿದೆ. ಬೆಂಗಳೂರು, ತುಮಕೂರು, ಉಡುಪಿ, ಮಂಗಳೂರು ಮುಂತಾದ ಕಡೆ ಮೂವತ್ತೇಳು ದಿನಗಳ ಚಿತ್ರೀಕರಣ ನಡೆದಿದೆ. ಇದು ಗಂಡ-ಹೆಂಡತಿ ನಡುವೆ ನಡೆಯುವ ಕಥಾ ಹಂದರ. ಸೆಕ್ಷನ್ 498ಕ್ಕೆ ಸಂಬಂಧಿಸಿದ ಕೆಲವು ಸನ್ನಿವೇಶಗಳು ನಮ್ಮ ಚಿತ್ರದಲ್ಲಿದೆ. ಗಂಡ-ಹೆಂಡತಿ ಕೊನೆಗೆ ಒಂದಾಗುತ್ತಾರಾ? ಇಲ್ಲವಾ? ಎಂಬುದನ್ನು ಚಿತ್ರದಲ್ಲಿ ನೋಡಬೇಕು. ನಿಶಾನ್ ನಾಣಯ್ಯ-ಸೋನುಗೌಡ ನಾಯಕ, ನಾಯಕಿಯಾಗಿ ಕಾಣಿಸಿದ್ದಾರೆ.

ಇದರ ಜೊತೆಗೆ ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್ ಸೇರಿ ಮುಂತಾದವರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ ಮಾಡಿದ್ದು, ಛಾಯಾಗ್ರಾಹಕ ಉದಯಲೀಲ ಅವರ ಕ್ಯಾಮೆರಾ ವರ್ಕ್ ಇದೆ. ಇನ್ನು ವಿಜೇತ್ ಚಂದ್ರ ಸಂಕಲನ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣ ಮಾಡಿರುವ ನಿರ್ದೇಶಕ ವಿಕ್ರಂಪ್ರಭು, ಏಪ್ರಿಲ್ ತಿಂಗಳಲ್ಲಿ ವೆಡ್ಡಿಂಗ್ ಗಿಫ್ಟ್ ಸಿನಿಮಾವನ್ನ ಬಿಡುಗಡೆ ಮಾಡುವ ಪ್ಲಾನ್​​ನಲ್ಲಿದ್ದಾರೆ.

ಓದಿ: ವಿಜಯಪುರ: ಒಂದೇ ದಿನ 37 ಜನರಿಗೆ ಕೋವಿಡ್‌ ಸೋಂಕು

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.