ಬೆಂಗಳೂರು: ಕೊರೊನಾ ಮಹಾಮಾರಿ ವಿರುದ್ಧ ಜಗತ್ತೇ ಸಮರ ಸಾರಿದೆ. ಸಾರ್ವಜನಿಕ ವಲಯದಲ್ಲಿರುವವರು ತಮ್ಮದೇ ಆದ ರೀತಿಯಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಇದರ ಸಾಲಿಗೆ ಸ್ಯಾಂಡಲ್ವುಡ್ನ ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್ ರಚಿಸಿರುವ ಹಾಡೊಂದು ಸೇರ್ಪಡೆಯಾಗಿದೆ.
-
https://t.co/iJQdlAolDp A song on Corona ,recorded by me using NO lyricists, Musicians, sound engineers or assistants during Quarantine. Thx @Sricrazymindz for the lovely visuals , edits. Bless us. .#PowerOfBeingAtHome #StayHomeIndia #StayHomeStaySafe
— Guru Kiran (@realgurukiran) April 14, 2020 " class="align-text-top noRightClick twitterSection" data="
">https://t.co/iJQdlAolDp A song on Corona ,recorded by me using NO lyricists, Musicians, sound engineers or assistants during Quarantine. Thx @Sricrazymindz for the lovely visuals , edits. Bless us. .#PowerOfBeingAtHome #StayHomeIndia #StayHomeStaySafe
— Guru Kiran (@realgurukiran) April 14, 2020https://t.co/iJQdlAolDp A song on Corona ,recorded by me using NO lyricists, Musicians, sound engineers or assistants during Quarantine. Thx @Sricrazymindz for the lovely visuals , edits. Bless us. .#PowerOfBeingAtHome #StayHomeIndia #StayHomeStaySafe
— Guru Kiran (@realgurukiran) April 14, 2020
''ಕೊರೊನಾ ವಿ ವಿಲ್ ಕಿಲ್ ಯು'' ಅನ್ನೋ ಹಾಡೊಂದನ್ನು ಗುರುಕಿರಣ್ ರಚಿಸಿದ್ದು, ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಕ್ವಾರಂಟೈನ್ನ ಕಾರಣದಿಂದಾಗಿ ಯಾವುದೇ ಸಾಹಿತಿ, ಸಹಾಯಕರಿಲ್ಲದೇ ಅವರೊಬ್ಬರೇ ಹಾಡನ್ನು ರಚಿಸಿ ಸಂಗೀತ ನೀಡಿದ್ದಾರೆ.
ಈ ಹಾಡು ಈಗ ಯೂಟ್ಯೂಬ್ನಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಪ್ರಶಂಸೆಗೆ ಪಾತ್ರವಾಗಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆಲುತ್ತೇವೆ ಎಂಬ ಆಶಯವನ್ನು ಈ ಹಾಡು ಹೊಂದಿದ್ದು ಆದಷ್ಟು ಬೇಗ ಈ ಸಂಕಷ್ಟದಿಂದ ಹೊರಬರುತ್ತೇವೆ ಎಂದು ಗುರುಕಿರಣ್ ಹಾಡಿನಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಬಾಲಿವುಡ್, ಟಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಕಲಾವಿದರು ಕೊರೊನಾ ವಿರುದ್ಧ ಜಾಗೃತಿ ಮೂಡಿಸಲಾಗಿದೆ.