ವಿಜಯ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ 'ಸಲಗ' ಸಿನಿಮಾ ಸದ್ಯಕ್ಕೆ ಸ್ಯಾಂಡಲ್ವುಡ್ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಲಾಕ್ಡೌನ್ ನಂತರ ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೇಳಲಾದರೂ ಆ ಸಮಯದಲ್ಲಿ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಈ ಸಿನಿಮಾ ಮಾರ್ಚ್ನಲ್ಲಿ ಬಿಡುಗಡೆಯಾಗಲು ಸಮಯ ನಿಗದಿ ಆಗಿದೆ.
ಸದ್ಯ ಸಿನಿಮಾ ಚಟುವಟಿಕೆಗಳಿಂದ ದೂರ ಉಳಿದಿರುವ ದುನಿಯಾ ವಿಜಯ್, ಕುಟುಂಬದೊಂದಿಗೆ ಕುಶಾಲನಗರದ ದುಬಾರೆಗೆ ತೆರಳಿ ಎಂಜಾಯ್ ಮಾಡುತ್ತಿದ್ದಾರೆ. ವಿಜಯ್ ದುಬಾರೆಗೆ ಬಂದಿದ್ದಾರೆ ಎಂದು ತಿಳಿಯುತ್ತಿದ್ದಂತೆ ಅಭಿಮಾನಿಗಳು ವಿಜಯ್ ಅವರನ್ನು ಸುತ್ತುವರೆದು ಅವರನ್ನು ಮಾತನಾಡಿಸಿ, ಸೆಲ್ಫಿ ತೆಗೆಸಿಕೊಂಡು ಖುಷಿಪಟ್ಟರು. ಆನೆಗಳನ್ನು ಪಳಗಿಸುವ ಮಾವುತರು ಕೂಡಾ 'ಸಲಗ' ಚಿತ್ರದ ಟೀಸರ್ ಹಾಗೂ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಜಯ್ ಕೂಡಾ ಎಲ್ಲರೊಂದಿಗೆ ನಗುತ್ತಲೇ ಮಾತನಾಡಿಸಿ ಮಾವುತರ ಜೊತೆಗೆ ವಾಲಿಬಾಲ್ ಆಡಿ ಸಂಭ್ರಮಿಸಿದ್ದಾರೆ. ಈ ಸುಂದರ ಕ್ಷಣವನ್ನು ವಿಜಯ್ ಪುತ್ರ ಸಾಮ್ರಾಟ್ ವಿಡಿಯೋ ಮಾಡಿದ್ದು ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಇದನ್ನೂ ಓದಿ: ವೇದಿಕೆ ಮೇಲೆ ಡ್ಯಾನ್ಸ್ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ ಜಗಪತಿ ಬಾಬು
ರೌಡಿಸಂ ಜೊತೆ ಲವ್ ಸ್ಟೋರಿ ಹೊಂದಿರುವ ಸಲಗ ಚಿತ್ರವನ್ನು ಕೆ.ಪಿ. ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸಂಜನಾ ಆನಂದ್ ವಿಜಯ್ಗೆ ಜೊತೆಯಾಗಿದ್ದಾರೆ. ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಸಿನಿಮಾ, ಪ್ರೇಕ್ಷಕರನ್ನು ಯಾವ ರೀತಿ ರಂಜಿಸಲಿದೆ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.