ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್ ಕಲಾವಿದರ ಜೊತೆ ಸಂವಾದ ಕಾರ್ಯಕ್ರಮ ನಡೆಸಿದ್ದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಕಲಾವಿದರನ್ನು ಆಹ್ವಾನಿಸದೇ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು.
ಈ ಸಂವಾದ ಕಾರ್ಯಕ್ರಮದ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಲೇ ಇದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ಬುದ್ಧಿವಂತ, ನಟ, ನಿರ್ದೇಶಕ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ಬಾಂಬೆಯಲ್ಲೇ ಇದ್ದ ಕಾರಣ ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಬಾಲಿವುಡ್ ಕಲಾವಿದರೊಂದಿಗೆ ಮೀಟಿಂಗ್ ಮಾಡಿರಬಹುದು. ಒಂದು ವೇಳೆ ಅವರು ಬೆಂಗಳೂರಿಗೆ ಬಂದರೆ ಖಂಡಿತಾ ನಮ್ಮ ಜೊತೆಯೂ ಮೀಟಿಂಗ್ ಮಾಡಬಹುದು ಎಂದರು. ಇಡೀ ಪ್ರಪಂಚವೇ ನಮ್ಮನ್ನು ಗುರುತಿಸಿರುವಾಗ ಯಾರೋ ಒಬ್ಬರು ನಮ್ಮನ್ನು ಗುರುತಿಸಲಿಲ್ಲ ಎಂದು ಏಕೆ ಬೇಜಾರು ಮಾಡಿಕೊಳ್ಳಬೇಕು. ಪ್ರತಿಯೊಬ್ಬ ಕಲಾವಿದನಿಗೂ ಅವನದೇ ಆದ ಇಮೇಜ್ ಇರುತ್ತದೆ. ನಮ್ಮನ್ನು ಆಹ್ವಾನಿಸಿಲ್ಲ ಎಂದರೆ ಅದಕ್ಕೆ ಏನೋ ಕಾರಣ ಇರಬೇಕು. ಸರಿ ತಪ್ಪುಗಳ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದು ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.