ETV Bharat / sitara

ವಿರೋಧದ ನಡುವೆ ಕೂಡ ಮೊದಲ ದಿನವೇ 55 ಕೋಟಿ ರೂ. ಗಳಿಕೆ ಮಾಡಿದ 'ತಲೈವಿ'

ರೆಟ್ರೋ ಶೈಲಿಯಲ್ಲೇ ಚಿತ್ರ ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು, ಕೆಲ ಸಿನಿಮೀಯ ದೃಶ್ಯ ಸೇರಿಸಿ ಚಿತ್ರ ನಿರ್ಮಾಣ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ..

author img

By

Published : Sep 10, 2021, 10:27 PM IST

actress Kangana Ranaut
actress Kangana Ranaut

ಚೆನ್ನೈ(ತಮಿಳುನಾಡು) : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಜೀವನಾಧಾರಿತ ಚಿತ್ರ 'ತಲೈವಿ' ಇಂದು ದೇಶಾದ್ಯಂತ ರಿಲೀಸ್​ ಆಗಿದೆ. ಮೊದಲ ದಿನವೇ ಒಳ್ಳೇ ಗಳಿಕೆ ಮಾಡಿದೆ ಎಂದು ತಿಳಿದು ಬಂದಿದೆ.

actress Kangana Ranaut
ತಲೈವಿ ಚಿತ್ರದಲ್ಲಿ ನಟಿ ಕಂಗನಾ

ಚಿತ್ರಕ್ಕೆ ಕೆಲವೊಂದಿಷ್ಟು ವಿರೋಧ ವ್ಯಕ್ತವಾಗಿದ್ದು, ಇದರ ಮಧ್ಯೆ ಕೂಡ ಉತ್ತಮ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ದೇಶಾದ್ಯಂತ ಸುಮಾರು 750-800 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್​ ಆಗಿತ್ತು.

ಪ್ರಮುಖವಾಗಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಹಾಗೂ ತಮಿಳುನಾಡು ಜೊತೆಗೆ ಕೇರಳದಲ್ಲೂ ಚಿತ್ರ ತೆರೆ ಕಂಡಿದೆ. ಸ್ಯಾಟ್​ಲೈಟ್​, ಡಿಜಿಟಲ್​, ಮ್ಯೂಜಿಕ್​ ರೈಟ್ಸ್​ ಹಾಗೂ ಚಿತ್ರಮಂದಿರಗಳಿಂದ ಸಿನಿಮಾ 85 ಕೋಟಿ ರೂ. ಗಳಿಕೆ ಮಾಡಿದ್ದು, ಇದರಲ್ಲಿ 55 ಕೋಟಿ ರೂ. ಚಿತ್ರಮಂದಿರಗಳಿಂದ ಬಂದಿದೆ ಎಂದು ವರದಿಯಾಗಿದೆ.

actress Kangana Ranaut
ಬಾಲಿವುಡ್ ನಟಿ ಕಂಗನಾ ರಣಾವತ್​​

ಸಿನಿಮಾದ ಕೆಲ ಸನ್ನಿವೇಶಗಳಿಗೆ ವಿರೋಧ

ತಲೈವಿ ಚಿತ್ರದಲ್ಲಿನ ಎಂಜಿಆರ್​ ಹಾಗೂ ಜಯಲಲಿತಾ ಅವರಿಗೆ ಸಂಬಂಧಿಸಿದ ಕೆಲ ಸನ್ನಿವೇಶಗಳಿಗೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಎಐಎಡಿಎಂಕೆ ಪಕ್ಷದ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಕೆಲ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿರಿ: ತೆರೆ ಮೇಲೆ ಬರಲು 'ತಲೈವಿ' ಸಜ್ಜು: ಜಯಲಲಿತಾ ಸ್ಮಾರಕಕ್ಕೆ ನಮಿಸಿದ ನಟಿ ಕಂಗನಾ

ರೆಟ್ರೋ ಶೈಲಿಯಲ್ಲೇ ಚಿತ್ರ ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು, ಕೆಲ ಸಿನಿಮೀಯ ದೃಶ್ಯ ಸೇರಿಸಿ ಚಿತ್ರ ನಿರ್ಮಾಣ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.